Advertisement
ಮಾನವ ಹಕ್ಕುಗಳ ಕಾರ್ಯಕರ್ತ ಹಬೀಬುಲ್ಲಾ ಫರ್ಜಾದ್ ಕಳೆದ ಬುಧವಾರ ಕಾಬೂಲ್ ನಲ್ಲಿ ಮಹಿಳೆಯರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ತಾಲಿಬಾನ್‌ನಿಂದ ಕ್ರೂರವಾಗಿ ಥಳಿತಕ್ಕೆ ಒಳಗಾಗಿದ್ದರು.
Related Articles
Advertisement
ತಾಲಿಬಾನ್ ಪಡೆ ಶರಿಯಾ ಕಾನೂನಿನ ಅನ್ವಯ ಹಲವಾರು ಫತ್ವಾ ಹೊರಡಿಸಿದ್ದು, ಇದು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅಲ್ಲಿನ ಕೆಲವು ಮಹಿಳಾ ಮಾನವ ಹಕ್ಕುಗಳ ಕಾರ್ಯಕರ್ತರು ತಾಲಿಬಾನ್ ವಿರುದ್ಧವಾಗಿ ಪ್ರತೀಭಟನೆ ಮಾಡಿದ್ದರು. ಪ್ರತಭಟನೆ ಮಾಡುತ್ತಿರುವವರನ್ನು ಹಾಗೂ ಪ್ರತಿಭಟನೆಯ ಘಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಕೂಡ ತಾಲಿಬಾನ್ ಪಡೆ ಬಂಧಿಸಿ ಚಿತ್ರ ಹಿಂಸೆ ನೀಡಿತ್ತು ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.
ಈ ಬಗ್ಗೆ ಪ್ರತಿಕ್ರಿಯಿಸಿದ ಹಬೀಬುಲ್ಲಾ, ತಾಲಿಬಾನ್ ಉಗ್ರ ಸಂಘಟನೆ ನನ್ನನ್ನು ಕ್ರೂರವಾಗಿ ಥಳಿಸಿದರು. ಅಮಾನುಷವಾಗಿ ಹೊಡೆದರು. ನಾನು ಪ್ರಜ್ಞೆಯನ್ನು ಕಳೆದುಕೊಂಡೆ ಮತ್ತು ಸುಮಾರು ಒಂದು ಗಂಟೆಯ ನಂತರ ನಾನು ಎಚ್ಚರವಾದಾಗ, ಅವರು ನನ್ನನ್ನು ಬೇರೆ ಕೋಣೆಗೆ ಕರೆದೊಯ್ದರು, ಅಲ್ಲಿ ಪತ್ರಕರ್ತರು ಸೇರಿದಂತೆ ಹಲವರು ಬಂಧಿತ ಪ್ರತಿಭಟನಾಕಾರರು ಇದ್ದರು ಎಂದು ತಾಲಿಬಾನ್ ಬಂಧನದ ಅನುಭವವನ್ನು ತೆರೆದಿಟ್ಟಿದ್ದಾರೆ.
ಮಹಿಳಾ ಪ್ರತಿಭಟನಾಕಾರರು ದೇಶದಲ್ಲಿ ಅಫ್ಘಾನ್ ಮಹಿಳೆಯರಿಗೆ ಸಮಾನ ಹಕ್ಕುಗಳು ನೀಡುವಂತೆ ತಾಲಿಬಾನ್ ಗೆ ಕೋರಿದ್ದರು.
ಈ ಕುರಿತಾಗಿ ಪ್ರತಿಕ್ರಿಯಿಸಿದ ತಾಲಿಬಾನ್, ನೀವು ದೇಶದ ಇಸ್ಲಾಂ ನ ವಿರುದ್ಧವಾಗಿ ನಡೆಯುತ್ತಿದ್ದೀರಿ. ಇಸ್ಲಾಂ ನ ವಿರುದ್ಧದ ಧೋರಣೆಯನ್ನು ತಾಲಿಬಾನ್ ಸಹಿಸುವುದಿಲ್ಲ. ನಿಮ್ಮಂತಹ ಕಾಫೀರರನ್ನು ಕೊಲ್ಲುವ ಅಧಿಕಾರ ತಾಲಿಬಾನ್ ಗೆ ಇದೆ ಎಂದು ಖಡಕ್ ಎಚ್ಚರಿಸಿತ್ತು.
ತಾಲಿಬಾನ್ ಅಫ್ಗಾನಿಸ್ತಾನವನ್ನು ಸ್ವಾಧೀನ ಪಡಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿನ ಅನಾಗರಿಕತೆಯ ಇತ್ತೀಚಿನ ದೃಶ್ಯಗಳು ಯುದ್ಧ-ಪೀಡಿತ ದೇಶದಲ್ಲಿ ಮಾನವ ಹಕ್ಕುಗಳ ವಿನಾಶಕಾರಿ ಸ್ಥಿತಿಯನ್ನು ಬಹಿರಂಗಪಡಿಸಿದೆ.
ಇನ್ನು, ಈ ಕುರಿತಾಗಿ ಡಾ. ಸೈಯದ್ ಅಖ್ತರ್ ಅಲಿ ಶಾ, ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ನಲ್ಲಿ ಬರೆಯುತ್ತಾ, ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ದುರಂತ ಘಟನೆಗಳು ಆಘಾತಕ್ಕೊಳಗಾಗಿಸಿದೆ. ಪ್ರಸ್ತುತ, ಅಫ್ಘಾನಿಸ್ತಾನದಲ್ಲಿ ಮಾನವ ಮೂಲಭೂತ ಹಕ್ಕುಗಳು ಇಲ್ಲದಂತಾಗಿದೆ. ಬಂದೂಕುದಾರಿಗಳ ಬಿಗಿ ಹಿಡಿತದಲ್ಲಿ ಅಫ್ಗಾನಿಸ್ತಾನದ ಜನರು ಉಸಿರುಗಟ್ಟುವ ಸ್ಥಿತಿಯಲ್ಲಿದ್ದಾರೆ ಎನ್ನುವುದಕ್ಕೆ ಅನುಮಾನವೇ ಇಲ್ಲ ಎಂದು ಉಲ್ಲೇಖಿಸಿದ್ದರು.
ಇದನ್ನೂ ಓದಿ : ಟೀಂ ಇಂಡಿಯಾದ ಏಕದಿನ, ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ?