Advertisement
ಅಂಗಳ, ಅಡುಗೆಮನೆ, ನೆರೆಹೊರೆಯ ಪ್ರಾಂಗಣ ಮತ್ತು ಸಾಮಾನ್ಯವಾಗಿ ಮಹಿಳೆ ಯರ ಇರುವಿಕೆ ಕಾಣುವಂಥ ಸ್ಥಳಗಳಲ್ಲಿ ಅವರನ್ನು ಹೊರಗಿನವರು ನೋಡದಂತೆ ತಡೆಯಲು ಆದೇಶ ಹೊರಡಿಸಿರುವುದಾಗಿ ತಾಲಿಬಾನ್ ಸರಕಾರ ಹೇಳಿದೆ. ಕಿಟಕಿಗಳಿದ್ದರೆ ಅವುಗಳ ಮೂಲಕ ಬಾವಿಗಳಿಂದ ಮಹಿಳೆ ಯರು ನೀರೆತ್ತುವುದನ್ನೂ ನೋಡಬಹು ದಾಗಿದ್ದು, ಇದು ಅಶ್ಲೀಲ ಕೃತ್ಯಗಳಿಗೆ ಕಾರಣ ವಾಗಬಹುದು. ಹೀಗಾಗಿ ಹೊಸ ಮನೆಗಳಿಗೆ ಕಿಟಕಿ ಬೇಡ ಎಂದು ತಾಲಿಬಾನ್ ಸರಕಾರ ಸೂಚಿಸಿದೆ.
ಅಫ್ಘಾನಿಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಎನ್ಜಿಒಗಳಲ್ಲಿ ಮಹಿಳೆಯರ ನೇಮಕವನ್ನೂ ನಿಷೇಧಿಸಿ ತಾಲಿಬಾನ್ ಸರಕಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ಮತ್ತು ವಿದೇಶಿ ಎನ್ಜಿಒಗಳಲ್ಲಿ ಕೆಲಸ ಮಾಡುವ ಮಹಿಳೆಯರು ಇಸ್ಲಾಂ ಸಂಪ್ರದಾಯದ ಪ್ರಕಾರ ಸರಿಯಾಗಿ ಹಿಜಾಬ್ ಧರಿಸುತ್ತಿಲ್ಲ. ಹೀಗಾಗಿ ಮಹಿಳೆಯರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಮುಂದೆ ಅವರನ್ನು ನೇಮಿಸಿಕೊಳ್ಳಬಾರದು. ಈ ಆದೇಶ ಪಾಲಿಸುವಲ್ಲಿ ಎನ್ಜಿಒಗಳು ವಿಫಲವಾದರೆ ಸಂಸ್ಥೆಗಳ ಪರವಾನಿಗೆಯನ್ನೇ ರದ್ದುಪಡಿಸುವುದಾಗಿ ತಾಲಿಬಾನ್ ಆಡಳಿತ ತಾಕೀತು ಮಾಡಿದೆ. ಇರುವ ಕಿಟಕಿ ಮುಚ್ಚಿ
ಈಗಾಗಲೇ ನಿರ್ಮಿಸಲಾಗಿರುವ ಮನೆ, ಕಟ್ಟಡಗಳಲ್ಲಿ ಕಿಟಕಿಗಳಿದ್ದರೆ ಕೂಡಲೇ ಮುಚ್ಚಬೇಕು ಎಂದು ತಾಲಿಬಾನ್ ವಕ್ತಾರ ಝಬಿಯುಲ್ಲಾ ಮುಜಾಹಿದ್ ಹೇಳಿದ್ದಾನೆ. ಕಟ್ಟಡಗಳಲ್ಲಿ ಈಗಾಗಲೇ ಇರುವ ಕಿಟಕಿಗಳನ್ನು ಮುಚ್ಚಲಾಗಿದೆಯೇ ಅಥವಾ ಕಿಟಕಿಗಳು ಇಲ್ಲದೆ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವ ಹೊಣೆಯನ್ನು ಸ್ಥಳೀಯ ಆಡಳಿತ ವ್ಯವಸ್ಥೆಗೆ ವಹಿಸಲು ತೀರ್ಮಾನಿಸಿದೆ.
Related Articles
Advertisement