Advertisement

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

11:11 PM Oct 16, 2021 | Team Udayavani |

ಕಾಬೂಲ್‌: ತಪ್ಪು ಮಾಡಿ ಬಂಧಿತರಾಗುವ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವುದು, ಶವವನ್ನು ನೇತುಬಿಡುವ ಶಿಕ್ಷೆಯನ್ನು ಇನ್ನುಮುಂದೆ ನೀಡುವುದಿಲ್ಲ ಎಂದು ತಾಲಿಬಾನ್‌ ಸರ್ಕಾರ ಹೇಳಿದೆ.

Advertisement

ಸುಪ್ರೀಂ ಕೋರ್ಟ್‌ನಿಂದ ಅಂತಹ ಶಿಕ್ಷೆಗೆ ಆದೇಶ ಬಂದರೆ ಮಾತ್ರವೆಲ್ಲ ಆ ಶಿಕ್ಷೆ ನೀಡುವುದಾಗಿ ತಿಳಿಸಲಾಗಿದೆ.

ಅಫ್ಘಾನ್ ನಲ್ಲಿ ಈ ರೀತಿ ಸಾರ್ವಜನಿಕವಾಗಿ ಮರಣದಂಡನೆಯ ಶಿಕ್ಷೆಯನ್ನು ಅಮೆರಿಕ ಕಳೆದ ತಿಂಗಳಿನಲ್ಲಿ ಖಂಡಿಸಿತ್ತು. ಅದರ ಬಗ್ಗೆ ತಾಲಿಬಾನ್‌ ಸರ್ಕಾರದ ಸಚಿವರುಗಳ ಸಮಿತಿಯು ಚರ್ಚೆ ನಡೆಸಿದ್ದು, ಈ ನಿರ್ಧಾರ ತೆಗೆದುಕೊಂಡಿದೆ.

ಸುಪ್ರೀಂ ಕೋರ್ಟ್‌ನಿಂದ ಆದೇಶವಿಲ್ಲದ ಹೊರತು ಅಂತಹ ಶಿಕ್ಷೆಯನ್ನು ನೀಡುವುದಿಲ್ಲ ಎಂದು ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್‌ ತಿಳಿಸಿದ್ದಾನೆ.

ಇದನ್ನೂ ಓದಿ:ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

Advertisement

 

Advertisement

Udayavani is now on Telegram. Click here to join our channel and stay updated with the latest news.

Next