Advertisement

ಅಫ್ಘಾನ್ ನ ಎರಡನೇ ದೊಡ್ಡ ನಗರ ಕಂದಹಾರ್ ನ್ನು ವಶಪಡಿಸಿಕೊಂಡ ತಾಲಿಬಾನ್!

08:37 AM Aug 13, 2021 | Team Udayavani |

ಕಾಬೂಲ್: ಅಫ್ಘಾನಿಸ್ಥಾನ ದೇಶದಲ್ಲಿ ವಿಧ್ವಂಸದಕ ಕೃತ್ಯಗಳನ್ನು ನಡೆಸುತ್ತಿರುವ ತಾಲಿಬಾನ್ ಇದೀಗ ಅಫ್ಘಾನ್ ನ ಎರಡನೇ ಅತೀ ದೊಡ್ಡ ನಗರ ಕಂದಹಾರ್ ನ್ನು ಕೂಡ ವಶಪಡಿಸಿಕೊಂಡಿದೆ. ಸ್ವತಃ ತಾಲಿಬಾನ್ ಶುಕ್ರವಾರ ಈ ಬಗ್ಗೆ ಹೇಳಿಕೊಂಡಿದೆ.

Advertisement

“ಕಂದಹಾರ್ ಅನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ. ನಗರದ ಹುತಾತ್ಮರ ಚೌಕವನ್ನು ಮುಜಾಹಿದ್ದೀನ್ ತಲುಪಿದೆ” ಎಂದು ತಾಲಿಬಾನ್ ವಕ್ತಾರ ಟ್ವೀಟ್ ಮಾಡಿದ್ದಾರೆ.

ತಾಲಿಬಾನಿಗಳಿಗೆ ಅಫ್ಘಾನ್‌ ಶರಣು?

ತಾಲಿಬಾನ್‌ ಉಗ್ರರು ಅಫ್ಘಾನಿಸ್ತಾನದಲ್ಲಿ ಗುರುವಾರ ರಾಜಧಾನಿ ಕಾಬೂಲ್‌ಗೆ ಸಮೀಪದಲ್ಲಿಯೇ ಇರುವ ಘಜ್ನಿ ಪ್ರಾಂತ್ಯದ ರಾಜಧಾನಿಯನ್ನು ವಶಪಡಿಸಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ತತ್ತರಿಸಿ ಹೋಗಿರುವ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಸರ್ಕಾರ ಉಗ್ರರು ಹಿಂಸಾಕೃತ್ಯಗಳನ್ನು ನಿಲ್ಲಿಸಿದರೆ ಅಧಿಕಾರದಲ್ಲಿ ಸಹಭಾಗಿತ್ವ ನೀಡುವುದಾಗಿ ವಾಗ್ಧಾನ ಮಾಡಿದೆ.

ಇದನ್ನೂ ಓದಿ:ಯುವಕನ ಪ್ರಾಣ ತೆಗೆದ “ಡ್ರೀಮ್‌ ಪ್ರಾಜೆಕ್ಟ್’!

Advertisement

ತಾಲಿಬಾನಿಗಳ ಪ್ರಾಬಲ್ಯ ದಿನೇದಿನೆ ಹೆಚ್ಚುತ್ತಿರುವುದಿಂದ ಅಫ್ಘಾನಿಸ್ತಾನದ ಸರ್ಕಾರ ಉಗ್ರರಿಗೆ ಅಧಿಕಾರದಲ್ಲಿ ಪಾಲು ನೀಡುವುದಾಗಿ ತಿಳಿಸಿದೆ. ಅದಕ್ಕಾಗಿ ಅವರು ಹಿಂಸಾ ಕೃತ್ಯಗಳನ್ನು ನಿಲ್ಲಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಕಾಬೂಲ್‌ಗೆ ಘಜ್ನಿ ಪ್ರಾಂತ್ಯದಿಂದ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಮತ್ತು ನಗರವನ್ನು ಕೈವಶ ಮಾಡಿಕೊಂಡ ಬೆನ್ನಲ್ಲಿಯೇ ಅಫ್ಘಾನ್‌ ಸರ್ಕಾರ ಕತಾರ್‌ನ ಮೂಲಕ ಈ ಸಂಧಾನ ಸೂತ್ರ ಕಳುಹಿಸಿಕೊಟ್ಟಿದೆ. ಆದರೆ, ಅಧ್ಯಕ್ಷರ ಅರಮನೆ ಈ ಬೆಳವಣಿಗೆಯನ್ನು ಪುಷ್ಟೀಕರಿಸಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next