ಕಾಬೂಲ್ : ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಜನರ ಪರಿಸ್ಥಿತಿ ಅಯೋಮಯವಾಗಿದೆ.
ಅಲ್ಲದೆ ತಾಲಿಬಾನಿಗಳು ಅಫ್ಘಾನಿಸ್ತಾನದವರ ಮೇಲೆ ಮನ ಬಂದಂತೆ ದಾಳಿ ನಡೆಸುವುದು, ಕ್ರೌರ್ಯ ಮೆರೆಯುವುದು ಹೆಚ್ಚಾಗತೊಡಗಿದೆ ಅದಕ್ಕೆ ಪುಷ್ಟಿ ಎಂಬಂತೆ ಅಫ್ಘಾನಿಸ್ತಾನ ಜಜೈಅರುಬ್ ಜಿಲ್ಲೆಯಲ್ಲಿ ಕಲಾವಿದನೋರ್ವನ ಸಂಗೀತ ಪರಿಕರವನ್ನು ಆತನ ಮುಂದೆಯೇ ತಾಲಿಬಾನಿಗಳು ಸುಟ್ಟು ಹಾಕಿ ವಿಕೃತಿ ಮೆರೆದಿದ್ದಾರೆ ಈ ವೇಳೆ ಕಲಾವಿದ ಸಂಗೀತ ಪರಿಕರವನ್ನು ಸುಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡು ಅಳುತಿದ್ದರೂ ಅದನ್ನು ಲೆಕ್ಕಿಸದೆ ಸುಟ್ಟು ಹಾಕಿದ್ದಾರೆ ಈ ವೇಳೆ ಅಲ್ಲಿದ್ದ ತಾಲಿಬಾನಿಗಳು ಇದರ ವಿಡಿಯೋವನ್ನು ಅಲ್ಲಿನ ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದ ತಾಲಿಬಾನಿಗಳು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ ಅದರಂತೆ ಅಲ್ಲಿನ ವಾಹನಗಳಲ್ಲಿ ಸಂಗೀತ ಹಾಕುವುದು, ಸಭೆ- ಸಮಾರಂಭಗಳಲ್ಲಿ ಸಂಗೀತ ಹಾಕಿ ಮನರಂಜನೆಗಳನ್ನು ನಿಷೇಧಿಸಿದೆ.
ತಾಲಿಬಾನ್ ಮದುವೆಗಳಲ್ಲಿ ಸಂಗೀತವನ್ನು ನಿಷೇಧಿಸಿದೆ ಅಲ್ಲದೆ ಪುರುಷರು ಮತ್ತು ಮಹಿಳೆಯರಿಗೆ ಬೇರೆ ಬೇರೆ ಹಾಲ್ ನಲ್ಲಿ ಕುಳಿತು ಸಂಭ್ರಮ ಆಚರಿಸಲು ಆದೇಶಿಸಿದೆ.
20 ವರ್ಷಗಳ ನಂತರ ತಾಲಿಬಾನ್ ಮತ್ತೊಮ್ಮೆ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವುದರಿಂದ, ಭಯೋತ್ಪಾದಕ ಗುಂಪಿನ ಆಡಳಿತದಲ್ಲಿ ಅಫ್ಘಾನ್ ಮಹಿಳೆಯರು ಅನಿಶ್ಚಿತ ಭವಿಷ್ಯವನ್ನು ಎದುರಿಸುವ ಸಾಧ್ಯತೆಯಿದೆ ಎಂದು ಇಲ್ಲಿನ ತಜ್ಞರು ನಂಬಿದ್ದಾರೆ.