Advertisement

ತಾಲಿಬಾನ್ ಹೊಸ ನಿಯಮ: ಸಂಗೀತ, ಟಿವಿ-ರೇಡಿಯೋಗಳಲ್ಲಿ ಮಹಿಳೆಯರ ಧ್ವನಿಗೂ ಇಲ್ಲ ಅವಕಾಶ!

03:15 PM Aug 29, 2021 | Team Udayavani |

ಕಾಬೂಲ್: ಅಫ್ಘಾನಿಸ್ಥಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಉಗ್ರ ಸಂಘಟನೆ ಇದೀಗ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಇದೀಗ ಸಂಗೀತ, ಟಿವಿ ಮತ್ತು ರೇಡಿಯೋಗಳನ್ನು ಮಹಿಳೆಯರ ಧ್ವನಿ ಪ್ರಸಾರಕ್ಕೂ ನಿರ್ಬಂಧ ಹೇರಿ ತಾಲಿಬಾನ್ ಆದೇಶಿಸಿದೆ.

Advertisement

ತಾಲಿಬಾನ್ ಈ ಆದೇಶ ಹೊರಡಿಸಿರುವುದು ಅಫ್ಘಾನಿಸ್ಥಾನದ ಕಂದಹಾರ್ ಪ್ರಾಂತ್ಯದಲ್ಲಿ.

ಆಗಸ್ಟ್ 15 ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಕೆಲವು ಮಾಧ್ಯಮಗಳು ತಮ್ಮ ಮಹಿಳಾ ಆ್ಯಂಕರ್‌ಗಳನ್ನು ತೆಗೆದುಹಾಕಿದ ನಂತರ ಈ ಬೆಳವಣಿಗೆ ನಡೆದಿದೆ. ಕಾಬೂಲ್‌ ನ ಸ್ಥಳೀಯ ಮಾಧ್ಯಮಗಳು ಹಲವಾರು ಮಹಿಳಾ ಸಿಬ್ಬಂದಿಯನ್ನು ತಮ್ಮ ಕೆಲಸದ ಸ್ಥಳಗಳಿಂದ ಮರಳುವಂತೆ ಕೇಳಿಕೊಂಡವು ಎಂದು ವರದಿಯಾಗಿದೆ.

ಇದನ್ನೂ ಓದಿ:ಆಸ್ತಿ ವಿವಾದಕ್ಕೆ ನಾಲ್ವರು ಸಹೋದರರ ಹತ್ಯೆ: ಪುಟಾಣಿ ಕುಟುಂಬದ 9 ಮಂದಿಯ ಬಂಧನ

ಮಹಿಳೆಯರಿಗೆ ಕೆಲಸ ಮುಂದುವರಿಸಲು ಅವಕಾಶ ನೀಡುವುದಾಗಿ ಮತ್ತು ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಅವರಿಗೆ ಅಧ್ಯಯನ ಮಾಡಲು ಅವಕಾಶ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಆದರೆ ತಾಲಿಬಾನ್ ನೀಡಿದ ಭರವಸೆಗಳಿಗೆ ವಿರುದ್ಧವಾಗಿ, ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಲಾರಂಭಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

Advertisement

ಹಿಂದಿನ ಅಧಿಕಾರಾವಧಿಯಲ್ಲಿ, ತಾಲಿಬಾನ್ ಮಹಿಳೆಯರನ್ನು ಕಠಿಣವಾಗಿ ನಡೆಸಿಕೊಳ್ಳುವುದಕ್ಕೆ ಹೆಸರುವಾಸಿಯಾಗಿತ್ತು, ಮಹಿಳೆಯರು ತಮ್ಮ ಮನೆಗಳಿಂದ ಹೊರಬಂದಾಗಲೆಲ್ಲಾ ತಲೆ ಮುಚ್ಚಿಕೊಳ್ಳಬೇಕು ಮತ್ತು ಪುರುಷ ಕುಟುಂಬದ ಸದಸ್ಯರು ಜೊತೆಗಿರುವುದು ಅನಿವಾರ್ಯ ಎಂದು ತಾಲಿಬಾನ್ ನಿಯಮ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next