Advertisement

ಶೇವ್‌, ಗಡ್ಡ ಟ್ರಿಮ್‌ಗೆ ನಿಷೇಧ; ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಹೊಸ ಆದೇಶ

01:13 AM Sep 28, 2021 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನ ವಶಪಡಿಸಿಕೊಂಡ ತಾಲಿಬಾನ್‌ ಉಗ್ರರು ಈಗಾಗಲೇ ಅನಾಗರಿಕ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಹೆಲ್ಮಂಡ್‌ ಪ್ರಾಂತ್ಯದಲ್ಲಿ ಪುರುಷರು ಗಡ್ಡ ತೆಗೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಗಡ್ಡ ತೆಗೆಯುವುದು, ಟ್ರಿಮ್‌ ಮಾಡುವುದು ಇಸ್ಲಾಂ ಧರ್ಮದ ನಿಯಮಗಳ ಅನ್ವಯ ನಿಷೇಧ ಎನ್ನುವುದು ತಾಲಿಬಾನ್‌ ಆಡಳಿತದ ವಾದ. ಅದನ್ನು ಮೀರುವವರಿಗೆ ಉಗ್ರ ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಅಫ್ಘಾನ್‌ ರಾಜಧಾನಿ ಕಾಬೂಲ್‌ನ ಕೆಲವು ಕ್ಷೌರದ ಅಂಗಡಿ ಮಾಲಕರಿಗೂ ಇದೇ ಮಾದರಿಯ ತಾಕೀತು ಮಾಡಲಾಗಿದೆ.

Advertisement

ಸೆಲ್ಫಿಗೆ ನಿಷೇಧ: ಮತ್ತೊಂದು ನಗೆಪಾಟಲಿನ ಕ್ರಮದಲ್ಲಿ ತಾಲಿಬಾನಿಗಳು ಸೆಲ್ಫಿ ತೆಗೆದುಕೊಳ್ಳುವುದರ ಮೇಲೆ ನಿಷೇಧ ಹೇರಿದ್ದಾರೆ. ಇತ್ತೀಚೆಗೆ ವೈರಲ್‌ ಆಗಿರುವ ವೀಡಿಯೋ, ಫೋಟೋಗಳಲ್ಲಿ ತಾಲಿಬಾನಿಗಳು ಮನಸೋ ಇಚ್ಛೆ ವರ್ತಿಸುತ್ತಿದ್ದದ್ದು ಕಂಡುಬಂದಿದೆ. ಹೀಗಾಗಿ ರಕ್ಷಣ ಸಚಿವ ಮೌಲಾವಿ ಮೊಹ್ಮದ್‌ ಯಕೂಬ್‌ ಖಡಕ್‌ ಎಚ್ಚರಿಕೆ ನೀಡಿ,  ನಮ್ಮ ಸೈನಿಕರು ಯಾರೂ ಸೆಲ್ಫಿಗಳನ್ನು ತೆಗೆದುಕೊಳ್ಳಬಾರದು. ಅವರಿಗೆ ವಹಿಸಿದ ಕೆಲಸವನ್ನಷ್ಟೇ ಮಾಡಬೇಕು. ಬೇರಾವುದೇ ಕೆಲಸ ಮಾಡಿ ತಾಲಿಬಾನ್‌ ಸರಕಾರಕ್ಕೆ ಅವಮಾನವಾಗುವಂತೆ ಮಾಡಬಾರದು ಎಂದು ಎಚ್ಚರಿಸಿದ್ದಾನೆ.

ಇದನ್ನೂ ಓದಿ:ಎರಡು ಗುಂಪುಗಳ ಗಲಾಟೆಯಲ್ಲಿ ʼಬಸವʼ ಬಡವಾಯ್ತು

ಇನ್ನೊಂದೆಡೆ ವಿವಿಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕೂರಿಸಿ ತರಗತಿಗಳನ್ನು ನಡೆಸಲು ಸಮಸ್ಯೆ ಉಂಟಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇರುವುದರಿಂದ ವಿದ್ಯಾರ್ಥಿನಿಯರನ್ನು ಇತರ ಸ್ಥಳಕ್ಕೆ ವರ್ಗಾಯಿಸುವ ಅನಿವಾರ್ಯತೆ ಉಂಟಾಗಿದೆ. ಖಾಸಗಿ ಕಾಲೇಜುಗಳಲ್ಲಿ ಉತ್ತಮ ವ್ಯವಸ್ಥೆ ಇರುವುದರಿಂದ ಈ ಸಮಸ್ಯೆ ಕಂಡು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next