ಕಾಬೂಲ್: ಕಳೆದ ನಾಲ್ಕು ತಿಂಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿದ್ದ ತಾಲಿಬಾನ್ ತನ್ನ ವಿರೋಧಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸವಾಲೊಡ್ಡಿರುವ ಒಡ್ಡಿರುವ ಬೆನ್ನಲ್ಲೇ ಸೂಸೈಡ್ ಬಾಂಬರ್ಸ್ ಗಳನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ನಿಯಂತ್ರಣಕ್ಕೆ ಮಾರ್ಗಸೂಚಿ ಜಾರಿ,19 ರವರೆಗೆ ವಾರಾಂತ್ಯ ಕರ್ಫ್ಯೂ ಅನುಷ್ಠಾನ,
ಅಫ್ಘಾನಿಸ್ತಾನದಲ್ಲಿ ಕಳೆದ ವರ್ಷ ತಾಲಿಬಾನ್ ಅಧಿಕಾರಕ್ಕೇರುವ ಮೊದಲು ಅಮೆರಿಕ ಮತ್ತು ಅಫ್ಘಾನ್ ಪಡೆಗಳ ವಿರುದ್ಧ 20 ವರ್ಷಗಳ ಕಾಲ ನಡೆಸಿದ ಯುದ್ಧದಲ್ಲಿ ಇದೇ ಸೂಸೈಡ್ ಬಾಂಬರ್ಸ್ ಗಳನ್ನು ಬಳಸಿಕೊಂಡಿತ್ತು.
ಆದರೆ ಇದೀಗ ಅಫ್ಘಾನಿಸ್ತಾನದ ರಕ್ಷಣೆಗಾಗಿ ದೇಶಾದ್ಯಂತ ಕಾರ್ಯಾಚರಿಸಲು ಸೂಸೈಡ್ ಬಾಂಬರ್ಸ್ ಗಳನ್ನು ಸೇನೆಯಲ್ಲಿ ಅಧಿಕೃತವಾಗಿ ನಿಯೋಜಿಸಲು ತಾಲಿಬಾನ್ ನಿರ್ಧರಿಸಿದೆ ಎಂದು ತಾಲಿಬಾನ್ ಡೆಪ್ಯುಟಿ ವಕ್ತಾರ ಬಿಲಾಲ್ ಕಾರ್ಮಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನ ಮುಖ್ಯಗುರಿ ಇಸ್ಲಾಮಿಕ್ ಸ್ಟೇಟ್ ನ ಶಾಖೆಗಳದ್ದು, ಕಳೆದ ಆಗಸ್ಟ್ ನಲ್ಲಿ ಅಮೆರಿಕ ಪಡೆಗಳನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಯಿಸಿಕೊಂಡ ನಂತರ ತಾಲಿಬಾನ್ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ವಿರುದ್ಧ ಐದು ಪ್ರಮುಖ ದಾಳಿಯನ್ನು ನಡೆಸಿತ್ತು. ಈ ದಾಳಿಯನ್ನು ನಡೆಸಿದ್ದು ಸೂಸೈಡ್ ಬಾಂಬರ್ಸ್ ಎಂದು ವರದಿ ತಿಳಿಸಿದೆ.
ದೇಶಾದ್ಯಂತ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಗಡಿಯಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಇನ್ಮುಂದೆ ಸೂಸೈಡ್ ಬಾಂಬರ್ಸ್ ಸೇನೆಯ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸಲಿದೆ ಎಂದು ಕಾರ್ಮಿ ತಿಳಿಸಿದ್ದಾರೆ.