ಹಾವೇರಿ: ಸದ್ದಿಲ್ಲದೇ ಕೆಲಸ ಮಾಡಿದ ಛಾಯಾಗ್ರಾಹಕ ಟಿ.ಎಸ್. ಸತ್ಯನ್ ಎಂಬ ಕನ್ನಡಿಗ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದೇಶದ ಏಕೈಕ ಛಾಯಾಗ್ರಾಹಕ. ಜೀವನದ ಕೌತುಕದ ಕ್ಷಣಕ್ಕಾಗಿ ಕಾಯುವ ಕಲೆಗಾರಿಕೆ ಫೋಟೋಗ್ರಫಿ ಎಂದು ಛಾಯಾಗ್ರಾಹಕ ಹುಬ್ಬಳ್ಳಿಯ ಶಶಿ ಸಾಲಿ ಹೇಳಿದರು.
Advertisement
ನಗರದ ಹಂಚಿನಮನಿ ಆರ್ಟ್ ಗ್ಯಾಲರಿ ಮತ್ತು ಸಾಹಿತಿ ಕಲಾವಿದರ ಬಳಗ ಏರ್ಪಡಿಸಿದ್ದ ಕವಿ, ಶಿಕ್ಷಕ, ಕಲಾವಿದ ಕಿರಣ ಜತ್ತಿ ಅವರ ಜೀವನ ಯಾನ ಎಂಬ ಚಿತ್ರ ಕಾವ್ಯ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು. 1545ರಿಂದ ವಿಕಸಿತಗೊಳ್ಳುತ್ತ ಬಂದ ಫೋಟೋಗ್ರಫಿ ಇಂದು ಕಣ್ಣರೆಪ್ಪೆ ಬಡೆಯುವಷ್ಟು ಸಲೀಸಾಗಿದೆ.
ಹಾಗೂ ಕಾವ್ಯ ಇವೆಲ್ಲವುಗಳು ಕಿರಣ ಜತ್ತಿ ಅವರ ಜೀವನ ಯಾನ ಕೃತಿಯಲ್ಲಿ ಅಡಕಗೊಂಡಿವೆ. ಕಾವ್ಯ ಮತ್ತು ಚಿತ್ರಕಲೆ ಜೀವನದ ಎರಡು ಮುಖಗಳಾಗಿವೆ ಎಂದರು.
Related Articles
Advertisement
ಮಂಡ್ಯದ ಜೋಳದರಾಶಿ ದೊಡ್ಡನಗೌಡರ ರಂಗ ಪ್ರಶಸ್ತಿ ಪುರಸ್ಕೃತ ಪ್ರಭು ಗುರಪ್ಪನವರ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ರೊಟ್ಟಿ ಹಾಗೂ ಜೀವನ ಯಾನದ ಮುಖಪುಟ ವಿನ್ಯಾಸಕಾರ ಶಿವು ಹೂಗಾರ ಅವರನ್ನು ಸನ್ಮಾನಿಸಲಾಯಿತು.
ಅಥಿತಿಗಳಾಗಿ ಡಾ| ಬಸವರಾಜ ಕೆಲಗಾರ ಪಾಲ್ಗೊಂಡಿದ್ದರು. ಕರಿಯಪ್ಪ ಹಂಚಿನಮನಿ ಪ್ರಾಸ್ತಾವಿಕ ಮಾತನಾಡಿದರು. ಮಹಾಂತೇಶ ಮರಿಗೂಳಪ್ಪನವರ ಮತ್ತು ಭೂಮಿಕಾ ಪ್ರಾರ್ಥಿಸಿ ದರು. ಪರಿಮಳಾ ಜೈನ್ ಸ್ವಾಗತಿಸಿದರು. ಚಂದ್ರಶೇಖರ ಮಾಳಗಿ ನಿರೂಪಿಸಿದರು. ಡಾ| ಅಂಬಿಕಾ ಹಂಚಾಟೆ ವಂದಿಸಿದರು.