Advertisement

ಜೊಳ್ಳಾಗದೆ ತೆನೆ ತುಂಬಿದ ಭತ್ತದಂತೆ ಪ್ರಜ್ವಲಿಸಿ: ವಿದ್ಯಾರ್ಥಿಗಳಿಗೆ ಆರಗ ಜ್ಞಾನೇಂದ್ರ

04:18 PM Aug 06, 2022 | Team Udayavani |

ತೀರ್ಥಹಳ್ಳಿ : ಪಿಯು ಶಿಕ್ಷಣ ನಿಮ್ಮ ಬದುಕು ಕಟ್ಟಿಕೊಳ್ಳುವ ಪ್ರಮುಖ ಘಟ್ಟ. ಕಾಲೇಜಿಗೆ ಬರುವುದು ಕೇವಲ ಶೋಕಿಯಾಗಬಾರದು ನಿಮ್ಮ ತಾಯಿ ತಂದೆ ಕಷ್ಟಪಟ್ಟು ನಿಮ್ಮನ್ನು ವಿದ್ಯಾವಂತರನ್ನಾಗಿಸಲು ಶ್ರಮ ಹಾಕುತ್ತಾರೆ. ನೀವುಗಳು ಕೂಡಾ ಜೊಳ್ಳು ಭತ್ತವಾಗದೆ ತೆನೆ ತುಂಬಿದ ಭತ್ತದಂತೆ ಪ್ರಜ್ವಲಿಸಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಾಲೇಜಿನಲ್ಲಿ ಕಲಿತ ತೇಜಸ್ವಿನಿ ವೈದ್ಯಕೀಯ ಶಿಕ್ಷಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ನಮ್ಮ ತಾಲೂಕಿಗೆ ಕೀರ್ತಿ ತಂದಿದ್ದಾಳೆ. ನಿಮಗೆ ನಮ್ಮ ತೇಜಸ್ವಿನಿಯೇ ಹೊಸ ಬೆಳಕಾಗಬೇಕು. ಅವಳ ಕುಟುಂಬದ ಬಡತನದ ನಡುವೆ ವಿದ್ಯೆಯಲ್ಲಿ ಪ್ರಗತಿಸಾಧಿಸಿದ್ದಾಳೆ. ಬದುಕು ಕಟ್ಟಿಕೊಳ್ಳಲು ಶಿಕ್ಷಣದಲ್ಲಿ ಉನ್ನತ ಅಂಕಗಳಿಸಬೇಕು ಎಂದರು.

‘ಈ ವರ್ಷ ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 75ರ ಸಂಭ್ರಮ ಇಂದು ನಾವು ನೆಮ್ಮದಿಯ ಬದುಕು ಸಾಗಿಸಲು ಈ ಹಿಂದೆ ನಮ್ಮ ದೇಶದ ಸ್ವಾತಂತ್ರಕ್ಕಾಗಿ ಎಸ್ಟೋ ಜನ ತಮ್ಮ ಜೀವನವನ್ನೇ ಮೂಡಿಪಾಗಿಟ್ಟಿದ್ದರು ಎಂಬುದನ್ನು ಮರೆಯಬಾರದು. ಆ ಮಹಾನ್ ಪುರುಷರ ಆದರ್ಶ ಗುಣಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ದುಶ್ಚಟ ಮುಕ್ತ ಜೀವನ ನಿಮ್ಮದಾಗಲಿ. ತೀರ್ಥಹಳ್ಳಿಯಂತಹ ಪುಣ್ಯ ಭೂಮಿಯಲ್ಲಿ ಜನಿಸಿದ ನಿಮ್ಮ ಜೀವನ ಯಶಸ್ಸಿನ ಪಥದತ್ತ ಸಾಗಲಿ’ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರದ ಶ್ರೀಮತಿ ಸುಧಾ, ಪಿಯು ಬೋರ್ಡ್ ಉಪನಿರ್ದೇಶಕ ಕೃಷ್ಣಪ್ಪ, ಕಾಲೇಜು ಅಭಿವೃದ್ಧಿ ಮಂಡಳಿಯ ಕೆ. ನಾಗರಾಜ್ ಶೆಟ್ಟಿ, ಭಾರತೀಪುರ ಮಂಜುನಾಥ್ ಶೆಟ್ಟಿ, ಪ. ಪಂ. ಸದಸ್ಯೆ ಜ್ಯೋತಿ ಮೋಹನ್, ಜ್ಯೋತಿ ಗಣೇಶ್, ನಿತಿನ್ ಹೆಗ್ಡೆ ಸೇರಿ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next