ಜಾನಪೀಠ ಪುರಸ್ಕೃತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರ “ತಲೆದಂಡ’ ನಾಟಕ ಪ್ರದರ್ಶನಗೊಳ್ಳುತ್ತಿದೆ. ಸಂದೀಪ್ ಪೈ ಎಸ್. ಅವರು ನಿರ್ದೇಶಿಸುತ್ತಿದ್ದು, 12ನೇ ಶತಮಾನದ ಭಕ್ತಿಚಳವಳಿಯ ದೃಶ್ಯಗಳು, ಸಾಮಾಜಿಕ ಕ್ರಾಂತಿ ಕಣ್ಣೆದುರು ಜೀವ ತಳೆಯಲಿವೆ. 800 ವರ್ಷಗಳ ಹಿಂದೆ ರಾಜ ಬಿಜ್ಜಳನ ಕಾಲದಲ್ಲಿ ಜಾತಿಪದ್ಧತಿ ವಿರುದ್ಧ ಬಸವಣ್ಣ ಮೊಳಗಿಸಿದ ಕಹಳೆ, ಅಂದಿನ ಸಾಮಾಜಿಕ ತಲ್ಲಣಗಳಿಗೂ ಪ್ರಸ್ತುತ ಸಾಮಾಜಿಕ ಸನ್ನಿವೇಶಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ ಎಂಬ ಭಾವ ನಾಟಕ ನೋಡಿದವರಿಗೆ ಅನ್ನಿಸದೇ ಇರದು. ಇಲ್ಲಿನ ಬಂಡಾಯ ಪಾತ್ರ ಪ್ರೇಕ್ಷಕನ ಮನದಾಳದಲ್ಲಿ ಬೇರೂರುತ್ತದೆ.
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಯಾವಾಗ?: ಜುಲೈ 15, ರಾ.7.30
150 ರೂ ಪ್ರವೇಶ ದರ