Advertisement
ಮಸೂದೆಯ ಪರವಾಗಿ 245 ಮತ್ತು ವಿರೋಧವಾಗಿ 11 ಮತಗಳು ಚಲಾವಣೆಯಾದವು. ಅಂದ ಹಾಗೆ ಲೋಕಸಭೆಯಲ್ಲಿ ಎರಡನೇ ಬಾರಿಗೆ ಮಸೂದೆ ಅಂಗೀಕಾರವಾಗುತ್ತಿದೆ. ಮೂರು ಬಾರಿ ತಲಾಖ್ ಹೇಳುವ ವ್ಯಕ್ತಿಗೆ ಜೈಲು ಶಿಕ್ಷೆ ನೀಡುವ ಪ್ರಸ್ತಾಪವನ್ನು ತೆಗೆದು ಹಾಕಬೇಕು ಎಂಬ ತಿದ್ದುಪಡಿಯನ್ನು ಲೋಕಸಭೆ ತಿರಸ್ಕರಿಸಿದೆ.
Related Articles
Advertisement
ಮಸೂದೆ ಮಂಡನೆಗೆ ಮುನ್ನ ಮಾತನಾಡಿದ್ದ ಸಚಿವ ಪ್ರಸಾದ್ 2017ರ ಜನವರಿಯಿಂದ ಈಚೆಗೆ 477 ತಲಾಖ್ ನೀಡಿದ ಪ್ರಕರಣಗಳು ವರದಿಯಾಗಿವೆ. ಪ್ರಾಧ್ಯಾಪಕರೊಬ್ಬರು ವಾಟ್ಸ್ ಆ್ಯಪ್‌ನಲ್ಲಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡಿದ್ದಾರೆ ಎಂದಿದ್ದಾರೆ.
ಕೇಂದ್ರ ಜವಳಿ ಸಚಿವೆ ಸ್ಮತಿ ಇರಾನಿ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಾನೂನು ಜಾರಿಗೆ ತರಲು ಅವಕಾಶ ವಿ ದ್ದರೂ ಅದನ್ನು ಸದುಪಯೋಗಪಡಿಸಲಿಲ್ಲ ಎಂದು ಟೀಕಿಸಿದರು. ಸತಿ, ವರದಕ್ಷಿಣೆ ನಿಷೇಧದ ಬಗ್ಗೆ ಕಾಯ್ದೆ ತರಲು ಸಾಧ್ಯ ವಿದ್ದಾಗ ತಲಾಖ್ ಬಗ್ಗೆ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಇದೊಂದು ಪ್ರಮುಖ ಮಸೂದೆಹಾಗೂ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದೆ. ಹೀಗಾಗಿ ಅದನ್ನು ಸಂಸತ್‌ನ ಆಯ್ಕೆ ಸಮಿತಿಗೆ ನೀಡಬೇಕು. ಅದರ ಪ್ರತಿಯೊಂದು ಅಂಶವನ್ನೂ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಎಐಎಡಿಎಂಕೆಯ ಪಿ.ವೇಣುಗೋಪಾಲ್, ತೃಣಮೂಲ ಕಾಂಗ್ರೆಸ್‌ನ ಸುದೀಪ್ ಬಂದೋಪಾಧ್ಯಾಯ, ಎಐಎಂಐಎಂನ ಅಸಾದುದ್ದೀನ್ ಒವೈಸಿ, ಎನ್‌ಸಿಪಿಯ ಸುಪ್ರಿಯ ಸುಳೆ ಚರ್ಚೆ ಯಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ವಿಧೇಯಕವನ್ನು ಆಯ್ಕೆ ಸಮಿತಿಗೆ ಒಪ್ಪಿಸಲೇಬೇಕು ಎಂದು ಒತ್ತಾಯಿಸಿದರು.
ಮಿಶ್ರ ಪ್ರತಿಕ್ರಿಯೆಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಮುಖಂಡರು ಈ ನಿರ್ಧಾರ ಸ್ವಾಗ ತಾರ್ಹ ಎಂದರೆ, ಇತರರು ಅತ್ಯಂತ ಅಪಾಯಕಾರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಕಾರ್ಯದರ್ಶಿ ಎಸ್.ಕ್ಯೂ.ಆರ್.ಇಲ್ಯಾಸ್ ಮಾತನಾಡಿ ಮುಂದಿನ ಲೋಕ ಸಭೆ ಚುನಾವಣೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳ ಲಾಗಿದೆ ಎಂದಿದ್ದಾರೆ. ಜತೆಗೆ ಇದೊಂದು ಅಪಾಯಕಾರಿ ಎಂದಿದ್ದಾರೆ. ಭಾರತೀಯ ಮುಸ್ಲಿಂ ಮಹಿಳಾ ಆಂದೋ ಲನದ ನಾಯಕಿ ಝಕಿಯ ಸೋಮನ್ ಇದೊಂದು ಸ್ವಾಗತಾರ್ಹ ನಿರ್ಧಾರ ಎಂದಿದ್ದಾರೆ. ರಾಜ್ಯಸಭೆಯಲ್ಲಿ ಪರೀಕ್ಷೆ
ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಬೇಕು. ಅಲ್ಲಿ ಕೇಂದ್ರ ಸರಕಾರಕ್ಕೆ ಬಹುಮತ ಇಲ್ಲ. ಜ.5ರಂದು ಚಳಿಗಾಲದ ಅಧಿವೇಶನ ಮುಕ್ತಾಯವಾಗುವುದರ ಒಳಗಾಗಿ ಅನುಮೋದನೆ ಪಡೆಯಬೇಕಾಗಿದೆ. ಪ್ರತಿಪಕ್ಷಗಳೆಲ್ಲವೂ ಸರಕಾರದ ಕ್ರಮದ ವಿರುದ್ಧ ಒಂದಾಗಿರುವ ಹಿನ್ನೆಲೆಯಲ್ಲಿ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ. ಮಸೂದೆ ಅಂಗೀಕರಿಸಿದ್ದು ನಿಜಕ್ಕೂ ಐತಿಹಾಸಿಕ. ಅದರಿಂದ ಮುಸ್ಲಿಂ ಮಹಿಳೆಯರಿಗೆ ಸಮಾನತೆ ಮತ್ತು ಗೌರವ ನೀಡಿದಂತಾಗಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
– ಅಮಿತ್ ಶಾ, ಬಿಜೆಪಿ ಅಧ್ಯಕ್ಷ ತಲಾಖ್ ನಿಷೇಧಿಸುವ ನಿಟ್ಟಿನಲ್ಲಿ ಮಸೂದೆ ಮಂಡಿಸಿದ ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆಯೂ ಮಸೂದೆಮಂಡಿಸಿ ಅಂಗೀಕರಿಸಲಿ.
– ಅರವಿಂದ ಸಾವಂತ್, ಶಿವಸೇನೆ ಸಂಸದ