Advertisement

ತಲಪಾಡಿ ಗಡಿ ಬಂದ್‌; ವಾರ್‌ ರೂಂ ಮೂಲಕ ಸ್ಪಂದನೆ: ನಳಿನ್‌

10:15 AM Mar 31, 2020 | sudhir |

ಮಂಗಳೂರು: ತಲಪಾಡಿಯಿಂದ ಕಾಸರಗೋಡಿನ ಯಾವುದೇ ಅಂತಾರಾಜ್ಯ ವಾಹನವು ದ.ಕ. ಜಿಲ್ಲೆಯನ್ನು ಪ್ರವೇಶಿಸದಂತೆ ಬಂದ್‌ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯ ಜತೆ ಮಾತುಕತೆ ನಡೆಸಲಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಆ್ಯಂಬುಲೆನ್ಸ್‌ ಸಹಿತ ಯಾವುದೇ ವಾಹನವನ್ನೂ ಜಿಲ್ಲೆಗೆ ಬಿಡದಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರಕಾರ ಅಥವಾ ಕೇಂದ್ರ ಸಚಿವರು ಕೂಡ ವಾಹನ ಬಿಡುವಂತೆ ಸೂಚನೆ ನೀಡಿಲ್ಲ. ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ತೆರೆದಿರುವ “ವಾರ್‌ ರೂಂ’ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಬೆಳಗ್ಗೆ 7ರಿಂದ ರಾತ್ರಿ 10 ಗಂಟೆಯ ತನಕ ದೂರು ಸ್ವೀಕರಿಸಿ, ಪರಿಹರಿಸುತ್ತಿದ್ದೇವೆ. ಕರೆ ಮಾಡಿದವರಿಗೆ ಊಟದ ವ್ಯವಸ್ಥೆ, ಆರ್ಥಿಕವಾಗಿ ಹಿಂದುಳಿದವರಿಗೆ 1ತಿಂಗಳ ಆಹಾರ ಸಾಮಗ್ರಿ ವಿತರಣೆ, ಅನಾರೋಗ್ಯ ಇದ್ದವರಿಗೆ ಔಷಧ ಮತ್ತು ಆ್ಯಂಬುಲೆನ್ಸ್‌, ಮೃತರ ಶವ ಸಂಸ್ಕಾರಕ್ಕೆ ನೆರವು ನೀಡಲು ಈ ವಾರ್‌ ರೂಂ ತೆರೆಯಲಾಗಿದೆ. ಇದು ಮಾಹಿತಿ ಕೇಂದ್ರವಾಗಿಯೂ ಕಾರ್ಯಾಚರಿಸುತ್ತಿದೆ. ಈವರೆಗೆ 3,200 ಮಂದಿಗೆ ಊಟ, 1,120 ಮಂದಿಗೆ ಆಹಾರ ವಸ್ತುಗಳ ಕಿಟ್‌, 110 ಮಂದಿಗೆ ಆ್ಯಂಬುಲೆನ್ಸ್‌, 28 ಮಂದಿಗೆ ಔಷಧ ಮತ್ತು 44 ಮಂದಿಗೆ ಇತರ ಸೇವೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next