ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ -66 ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಒಟ್ಟು 643 ಕಿ. ಮೀ. ಉದ್ದದ ಹೆದ್ದಾರಿಯ ಶೇ. 70ರಿಂದ 80ರಷ್ಟು ಕಾಮಗಾರಿ ಪೂರ್ತಿಗೊಂಡಿದೆ. ಸಿಗ್ನಲ್ ಗಳಿರುವುದಿಲ್ಲ.
ಈಗ ಕಾಸರಗೋಡಿನಿಂದ ತಿರುವನಂತಪುರಕ್ಕೆ ತಲುಪಲು ರಸ್ತೆಯಲ್ಲಿ 18 ಗಂಟೆ ಬೇಕು. ಕಾಮಗಾರಿ ಪೂರ್ಣವಾದಾಗ ಸುಮಾರು 7ರಿಂದ 8 ಗಂಟೆಯೊಳಗೆ ತಿರುವನಂತಪುರ ತಲುಪಬಹುದು ಎಂದು ಅಂದಾಜಿಸಲಾಗಿದೆ. ರಸ್ತೆಯಲ್ಲಿ ಎಲ್ಲೂ ಸಿಗ್ನಲ್ ಗಳು ಇಲ್ಲದಿರುವ ಕಾರಣ ವಾಹನ ನಿಲ್ಲಿಸಬೇಕಿಲ್ಲ. 45 ಮೀ. ಅಗಲದಲ್ಲಿ ನಿರ್ಮಿಸುವ ರಸ್ತೆಯ ಇಕ್ಕೆಲಗಳಲ್ಲಿ 3 ಪಥಗಳು, ಸರ್ವೀಸ್ ರಸ್ತೆ ಇದೆ.
ರಾಷ್ಟ್ರೀಯ ಹೆದ್ದಾರಿ – 66ರ ಕಾಮಗಾರಿ 17 ಹಂತಗಳಲ್ಲಿ ನಡೆಯುತ್ತಿದೆ. ಈ ಪೈಕಿ ಬಹುತೇಕ ಕಡೆ ಕಾಮಗಾರಿ ಪೂರ್ಣವಾಗುವ ಹಂತದಲ್ಲಿದೆ. ವಳಾಂಚೇರಿ-ಕಾಪ್ಪಿರಿಕಾಡ್‌ನಲ್ಲಿ ಸುಮಾರು 85 ಶೇ. ಕಾಮಗಾರಿ ಪೂರ್ಣಗೊಂಡಿದೆ.
ತಲಪಾಡಿ- ಚೆಂಗಳ 74 ಶೇ., ಕಾಮಗಾರಿ ಪೂರ್ತಿಯಾಗಿದೆ. ಚೆಂಗಳ – ನೀಲೇಶ್ವರ 50 ಶೇ., ನೀಲೇಶ್ವರ-ತಳಿಪರಂಬ 50 ಶೇ., ರಾಮನಾಟ್ಟುಕರ-ವಳಾಂಚೇರಿ 75 ಶೇ., ವೆಂಗಳಂ ಜಂಕ್ಷನ್- ರಾಮನಾಟ್ಟುಕರ 73 ಶೇ., ತಳಿಪರಂಬ-ಮುಳಪ್ಪಿಲಂಗಾಡ್ 60
ಶೇ., ಅಳಿಯೂರು-ವೆಂಗಳಂ 50 ಶೇ., ಕಾಪ್ಪಿರಿಕ್ಕಾಡ್ – ತಳಿಕುಳಂ 50 ಶೇ. ಎಂಬಂತೆ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.
2025 ಡಿಸೆಂಬರ್‌ನಲ್ಲಿ ಪೂರ್ತಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ 2025 ಡಿಸೆಂಬರ್ ತಿಂಗಳೊಳಗೆ ಪೂರ್ಣವಾಗಲಿದೆ ಎಂದು ಲೋಕೋಪಯೋಗಿ ಹಾಗೂ ಟೂರಿಸಂ ಸಚಿವ ಪಿ.ಎ.ಮುಹಮ್ಮದ್ ರಿಯಾಸ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:Mangalore: “ಚಡ್ಡಿ ಗ್ಯಾಂಗ್’ನಿಂದ ದೇಶದ ವಿವಿಧೆಡೆ ದರೋಡೆ?