Advertisement
ತಲಕಾವೇರಿ ಕ್ಷೇತ್ರದ ಪ್ರವೇಶದ್ವಾರದಿಂದ ಸ್ವತ್ಛತೆ ಪ್ರಾರಂಭಿಸಲಾಯಿತು. ರಸ್ತೆ ಎರಡು ಬದಿಯಲ್ಲಿದ್ದ ಬಾಟಲಿ, ಪ್ಲಾಸ್ಟಿಕ್ ವಸ್ತುಗಳನ್ನು ಹೆಕ್ಕುವುದರ ಮೂಲಕ ಸ್ವತ್ಛಗೊಳಿಸಲಾಯಿತು. ಈ ವೇಳೆ ವಾಹನಗಳಲ್ಲಿ ಆಗಮಿಸಿದ ಪ್ರವಾಸಿಗರಿಗೆ ಸ್ವತ್ಛತೆ ಕಾಪಾಡುವಂತೆ ಮನವಿ ಮಾಡಲಾಯಿತು. ದಕ್ಷಿಣ ಭಾರತದ ಜೀವನದಿ ಕಾವೇರಿ ಕ್ಷೇತ್ರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂಬ ಸಂದೇಶ ರವಾನಿಸಲಾಯಿತು. ನಾಲ್ಕು ವರ್ಷದಿಂದ ಕಾವೇರಿತೀಥೋìದ್ಭವಕ್ಕೆ ಮುನ್ನ ತಲಕಾವೇರಿಯಿಂದ ಭಾಗಮಂಡಲದವರೆಗೂ ಸ್ವತ್ಛತೆ ಮಾಡಲಾಗುತ್ತಿದೆ. ನಮ್ಮ ನಡೆ ಸ್ವತ್ಛತೆ ಕಡೆ ಎಂಬ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಸ್ವತ್ಛತೆ ಮಾಡಲಾಗುತ್ತಿದೆ ಎಂದು ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಹೇಳಿದರು.
Related Articles
ಒಂದು ತಿಂಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಇರಾನಿ ಪ್ರಜೆ ನಾದೀರ್ ಖಾನ್ ಸ್ವತ್ಛತೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ನಮ್ಮ ವಾತಾವರಣವನ್ನು ಸ್ವತ್ಛವಾಗಿಟ್ಟುಕೊಳ್ಳ ಬೇಕೆಂಬ ಆಸಕ್ತಿ ಪ್ರತಿಯೊಬ್ಬರಲ್ಲಿಯೂ ಇರಬೇಕು. ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಒಳ್ಳೆಯದಲ್ಲ. ಇಂತಹ ಮನಸ್ಥಿತಿ ಮೊದಲು ದೂರವಾಗಬೇಕೆಂದು ಖಾನ್ ಹೇಳಿದರು. ಸ್ವಯಂ ಸೇವಾ ಸಂಘಟನೆಗಳು, ವಿದ್ಯಾರ್ಥಿಗಳು ಸ್ವತ್ಛತೆ ಮಾಡುವುದರ ಮೂಲಕ ಜನಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ. ಎಂದರು.
Advertisement