Advertisement

ತಲಕಾವೇರಿ ತೀರ್ಥೋದ್ಭವ; ಭಕ್ತರಿಗೆ ಮುಕ್ತ ಅವಕಾಶ: ಕೋಟ ಶ್ರೀನಿವಾಸ ಪೂಜಾರಿ

08:25 PM Oct 06, 2021 | Team Udayavani |

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಇದೇ ಅ.17 ರಂದು ಜರುಗುವ ಪವಿತ್ರ ತೀರ್ಥೋದ್ಭವಕ್ಕೆ ಭಕ್ತಾದಿಗಳು ತೆರಳಲು ಮುಕ್ತ ಅವಕಾಶ ನೀಡಲಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪವಿತ್ರ ತೀರ್ಥೋದ್ಭವ ಸಂಬಂಧ ಮಾಹಿತಿ ನೀಡಿದರು.

ಕಾವೇರಿ ತುಲಾ ಸಂಕ್ರಮಣ ಜಾತ್ರಾ ದಿನದಂದು ಕೋವಿಡ್‌ 19 ನಿಂದಾಗಿ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು, ಸದ್ಯ ಜಿಲ್ಲೆಯಲ್ಲಿ ಕೋವಿಡ್‌ 19 ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆ ಭಕ್ತಾಧಿಗಳ ಭಾವನೆಗೆ ಸ್ಪಂದಿಸಿ ತಲಕಾವೇರಿಗೆ ತೆರಳಲು ಅವಕಾಶ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯ ಜನತೆ ತಾಯಿ ಕಾವೇರಿ ಮಾತೆಯನ್ನು ಭಾವನಾತ್ಮಕ ಪೂಜಿಸುತ್ತಾರೆ. ಆ ದಿಸೆಯಲ್ಲಿ ಜನರ ಭಾವನೆಗೆ ಸ್ಪಂದಿಸಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ, ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೋವಿಡ್‌ 19 ನಿಯಮಗಳನ್ನು ಪಾಲಿಸಿ ಪವಿತ್ರ ತುಲಾ ಸಂಕ್ರಮಣ ತೀರ್ಥೋದ್ಭವಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಶಾಸಕಾರದ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ಮಾತನಾಡಿ ಕಳೆದ ಸಭೆಯಲ್ಲಿ ಕೋವಿಡ್‌ ಹಿನ್ನಲೆ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು, ಆದರೆ ಕೋವಿಡ್‌ 19 ಪ್ರಕರಣಗಳು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಭಕ್ತಾದಿಗಳು ತಲಕಾವೇರಿಗೆ ತೆರಳಲು ಅವಕಾಶ ಮಾಡಲಾಗಿದೆ ಎಂದು ಸಚಿವರು ಹೇಳಿದರು.

Advertisement

ಇದನ್ನೂ ಓದಿ:ಬೆಂಜಮಿನ್ ಲಿಸ್ಟ್, ಮೆಕ್ ಮೆಲನ್‌ರಿಗೆ ಒಲಿದ ರಸಾಯನ ಶಾಸ್ತ್ರ ನೊಬೆಲ್

ಶಾಸಕ‌ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರಾದ ಸುನೀಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಪಶ್ಚಿಮ ಘಟ್ಟ ಕಾರ್ಯಪಡೆ ಸಮಿತಿಯ ಅಧ್ಯಕ್ಷ‌ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ‌ ರಮೇಶ್‌ ಹೊಳ್ಳ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ, ಜಿ.ಪಂ.ಸಿಇಒ ಭನ್ವರ್‌ ಸಿಂಗ್‌ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ್‌ ಕುಮಾರ್‌ ಖಂಡೂ ಇತರರು ಇದ್ದರು. ಫೋಟೋ :: ಮಿನಿಸ್ಟರ್‌

ಅ.7 ರಿಂದ ಮಡಿಕೇರಿ ದಸರಾ ಕರಗೋತ್ಸವ ಆರಂಭ
ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾ ಕರಗೋತ್ಸವ ಅ.7 ರಿಂದ ಆರಂಭಗೊಳ್ಳಲಿದೆ. ನಗರದ ಶಕ್ತಿ ದೇವತೆಗಳಾದ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀಕಂಚಿ ಕಾಮಾಕ್ಷಿಯಮ್ಮ, ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಯಗಳ ಕರಗಗಳು ಸಂಜೆ ನಗರದ ಬನ್ನಿ ಮಂಟಪದ ಬಳಿಯಿಂದ ನಗರ ಸಂಚಾರವನ್ನು ಆರಂಭಿಸಲಿವೆ.

ಕರಗ ಮಹೋತ್ಸವಕ್ಕೆ ಆಗಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಇಂದು ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ರಮೇಶ್‌ ಹೊಳ್ಳ ಹಾಗೂ ಸದಸ್ಯರು ಆಹ್ವಾನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next