Advertisement
ಇದೀಗ ಅಂತಿಮ ಹಂತದಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿ ಕೊಳವೆ ಪರೀಕ್ಷೆ (ಟೆಸ್ಟಿಂಗ್) ಕಾರ್ಯ ಭರದಿಂದ ಸಾಗಿದೆ. ಕಾವೇರಿ 5ನೇ ಹಂತದ ಯೋಜನೆಯ ಕಾಮಗಾ ರಿಯು ಕೊನೆಗೂ ಮುಕ್ತಾಯಗೊಂಡಿದ್ದು, ಕೊಳವೆಗಳ ಟೆಸ್ಟಿಂಗ್ ಕಾರ್ಯ ಮುಗಿಯುತ್ತಿದ್ದಂತೆ 110 ಹಳ್ಳಿಗಳಿಗೆ ಕಾವೇರಿ ಹರಿದು ಬರಲಿದ್ದಾಳೆ. ಸೆಪ್ಟೆಂಬರ್ 2ನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯೋಜನೆಗೆ ಚಾಲನೆ ನೀಡುವ ಸಾಧ್ಯತೆಗಳಿವೆ. ಇನ್ನೂ ಸೂಕ್ತ ದಿನಾಂಕ ನಿಗದಿಯಾಗಿಲ್ಲ. ಸದ್ಯ ಕಿಲೋಮೀಟರ್ ಲೆಕ್ಕದಲ್ಲಿ ಪ್ರತಿದಿನ ಜಲಮಂಡಳಿ ಅಧಿಕಾರಿಗಳು ಹಂತ-ಹಂತ ವಾಗಿ ನೀರಿನ ಕೊಳವೆಗಳನ್ನು ಪರಿಶೀಲಿಸುತ್ತಿದ್ದಾರೆ.
Related Articles
Advertisement
ನೀರಿನ ಸಂಪರ್ಕ ಪಡೆಯಲು ಹಿಂದೇಟು: ಕಾವೇರಿ 5ನೇ ಹಂತದ ಯೋಜನೆಯ ಮೂಲಕ ಒಟ್ಟು 775 ಎಂಎಲ್ಡಿ ಕಾವೇರಿ ನೀರನ್ನು ಬೆಂಗಳೂರಿನ 110 ಹಳ್ಳಿಗಳಿಗೆ ಹರಿಸುವ ಸಾಮರ್ಥ್ಯವಿದೆ. 110 ಹಳ್ಳಿಗಳಲ್ಲಿ 3.50 ಲಕ್ಷ ಕಡೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ಅವಕಾಶಗಳಿದ್ದರೂ, ಇದುವರೆಗೆ ಕೇವಲ 55 ಸಾವಿರ ಪ್ರದೇಶಗಳಲ್ಲಿ ಮಾತ್ರ ಕಾವೇರಿ 5ನೇ ಹಂತದ ಯೋಜನೆಯ ಸಂಪರ್ಕ ಅಳವಡಿಸಲಾಗಿದೆ. ಹೀಗಾಗಿ 775 ಎಂಎಲ್ಡಿ ಕಾವೇರಿ ನೀರು ತರಿಸಿದರೆ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಪೂರೈಕೆ ಮಾಡಲು ಜಲಮಂಡಳಿಯು ನಿರ್ಧರಿಸಿದೆ.
ಕಾವೇರಿ ನೀರಿನ ಸೌಲಭ್ಯ ಪಡೆಯುವ ಅವಕಾಶಗಳಿದ್ದರೂ 3 ಲಕ್ಷ ಕುಟುಂಬಗಳು ಬೋರ್ ವೆಲ್ ನೀರನ್ನೇ ಆಶ್ರಯಿಸಲು ಹೆಚ್ಚಿನ ಒಲವು ತೋರುತ್ತಿದೆ. ಈ ಪ್ರದೇಶಗಳಿಗೆ ಸರ್ಕಾರವು ಉಚಿತವಾಗಿ ಬೋರ್ವೆಲ್ ನೀರನ್ನು ಹರಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
5ನೇ ಹಂತದ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯ ಅಂತಿಮ ಹಂತದಲ್ಲಿ ಪರೀಕ್ಷಿಸುವ ಕಾರ್ಯಗಳು ನಡೆಸಲಾಗುತ್ತಿದೆ. ಆ ವೇಳೆ ಯಾವುದೇ ಸಮಸ್ಯೆಗಳು ಕಂಡು ಬಂದರೆ ಅದನ್ನು ಬಗೆಹರಿಸಲಾಗುವುದು. ಶೀಘ್ರದಲ್ಲೇ ಯೋಜನೆಗೆ ಚಾಲನೆ ನೀಡಲು ಸಿದ್ಧತೆಗಳು ಭರದಿಂದ ಸಾಗಿದೆ. –ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಲಮಂಡಳಿ ಅಧ್ಯಕ್ಷ