Advertisement
ಋತುಚಕ್ರದ ರಕ್ತವನ್ನು ಹೊರಹಾಕುವುದಕ್ಕಾಗಿ ಗರ್ಭಕೋಶವನ್ನು ಹಿಂಡುವ ಪ್ರೊಸ್ಟಾಗ್ಲಾಂಡಿನ್ಸ್ ಎಂಬ ಅಂಶವನ್ನು ದೇಹವು ಸ್ರವಿಸುವುದೇ ಮುಟ್ಟಿನ ಹೊಟ್ಟೆನೋವು ಉಂಟಾಗಲು ಕಾರಣ.
Related Articles
Advertisement
ಮುಟ್ಟಿನ ನೋವಿಗೆ ನೋವು ನಿವಾರಕ ಸೇವಿಸುವುದರಿಂದ ಅಡ್ಡ ಪರಿಣಾಮಗಳು
ಮಲಬದ್ಧತೆ ಮುಟ್ಟಿನ ನೋವಿನಿಂದಾಗಿ ನಿಮಗೆ ಈಗಾಗಲೇ ತೊಂದರೆಯಾಗುತ್ತಿರಬಹುದು. ಆದರೆ ಮುಟ್ಟಿನ ನೋವಿನಿಂದ ಪಾರಾಗುವುದಕ್ಕಾಗಿ ಸತತವಾಗಿ ನೋವು ನಿವಾರಕಗಳನ್ನು ಸೇವಿಸುವುದಕ್ಕೆ ಆರಂಭಿಸಿದರೆ ಮಲಬದ್ಧತೆ ಕಾಣಿಸಿಕೊಂಡು ಅದರ ಉಪಟಳವನ್ನೂ ಎದುರಿಸಬೇಕಾದೀತು.
- ಬಾಯಿಯಲ್ಲಿ ಹುಳಿನೀರು ಬರುವುದು ಮತ್ತು ಹೊಟ್ಟೆನೋವು ನೋವು ನಿವಾರಕಗಳನ್ನು ಸೇವಿಸಿದರೆ ಗ್ಯಾಸ್ಟ್ರೈಟಿಸ್ ಉಂಟಾಗಿ ಬಾಯಿಯಲ್ಲಿ ಹುಳಿನೀರು ಬರುವುದು, ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಅಪರೂಪದ ಪ್ರಕರಣಗಳಲ್ಲಿ ಇದು ಜಠರದ ಹುಣ್ಣಿಗೂ ಕಾರಣವಾಗಬಹುದು.
- ಹೊಟ್ಟೆ ತೊಳೆಸುವುದು ಮತ್ತು ವಾಂತಿ ನೋವು ನಿವಾರಕ ಸೇವಿಸಿದ ಬಳಿಕ ಹೊಟ್ಟೆ ತೊಳೆಸಿದಂತಾಗಿ ವಾಂತಿ ಮಾಡಿಕೊಳ್ಳಬಹುದು.
- ಹೃದಯ ಬಡಿತದ ಗತಿಯಲ್ಲಿ ಏರುಪೇರು, ಎದೆ ಹಿಡಿದಂತಾಗುವುದು ನೋವು ನಿವಾರಕ ಸೇವಿಸಿದ ಬಳಿಕ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು.
- ತಲೆ ತಿರುಗುವುದು ಮುಟ್ಟಿನ ದಿನಗಳಲ್ಲಿ ಹೊಟ್ಟೆ ನೋವಿಗಾಗಿ ನೋವು ನಿವಾರಕ ಸೇವಿಸಿದ ಬಳಿಕ ತಲೆ ತಿರುಗಬಹುದು. ಇದರಿಂದಾಗಿ ನಿಮಗೆ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು ಕಷ್ಟವಾಗಬಹುದು.
- ಭೇದಿ ಇದು ನೋವು ನಿವಾರಕಗಳ ಇನ್ನೊಂದು ಅಡ್ಡ ಪರಿಣಾಮವಾಗಿದೆ. ನೋವು ನಿವಾರಕಗಳನ್ನು ಸೇವಿಸಿದ ಬಳಿಕವೂ ಮುಟ್ಟನ ನೋವು ನಿವಾರಣೆಯಾಗದೆ ಇದ್ದರೆ ಅಥವಾ ತೀವ್ರ ತರಹದ ನೋವು ಕಾಣಿಸಿಕೊಳ್ಳುತ್ತಿದ್ದಲ್ಲಿ ದಯಮಾಡಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಬೇಕು. ಎಂಡೊಮೆಟ್ರಿಯೋಸಿಸ್, ಫೈಬ್ರಾಯ್ಡ ಅಥವಾ ಒವೇರಿಯನ್ ಸಿಸ್ಟ್‌ನಂತಹ ಇತರ ತೊಂದರೆಗಳು ಕೂಡ ಇದಕ್ಕೆ ಕಾರಣವಾಗಿರಬಹುದಾಗಿದ್ದು, ಇದಕ್ಕಾಗಿ ಪರೀಕ್ಷಿಸಿಕೊಳ್ಳುವುದು ಉತ್ತಮ.
- ಆರೋಗ್ಯಕರ ಆಹಾರಾಭ್ಯಾಸವನ್ನು ಪಾಲಿಸಿ ಸಾಕಷ್ಟು ಹಣ್ಣುಹಂಪಲು, ತರಕಾರಿಗಳು, ಇಡೀ ಧಾನ್ಯಗಳು ಮತ್ತು ಪ್ರೊಟೀನ್ ಸಹಿತವಾದ ಆಹಾರ ಸೇವಿಸಿ. ಕ್ಯಾಲ್ಸಿಯಂ, ಮೆಗ್ನಿಷಿಸಿಯಂ, ವಿಟಮಿನ್ ಬಿ 6 ನೋವಿನಿಂದ ಉಪಶಮನ ನೀಡುತ್ತವಾದ್ದರಿಂದ ಇವು ಹೇರಳವಾಗಿರುವ ಆಹಾರ ಸೇವಿಸಿ.
- ಸಾಕಷ್ಟು ನೀರಿನಂಶ ಸೇವಿಸಿ ದಿನಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಸಾಕಷ್ಟು ನೀರು ಕುಡಿಯುವುದರಿಂದ ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ, ಋತುಸ್ರಾವದ ದಿನಗಳಲ್ಲಿ ಒಟ್ಟಾರೆ ಆರೋಗ್ಯ ಚೆನ್ನಾಗಿರುತ್ತದೆ.
- ನಿಯಮಿತವಾಗಿ ವ್ಯಾಯಾಮ ಮಾಡಿ ನಡಿಗೆ, ಯೋಗ ಅಥವಾ ಈಜಿನಂತಹ ದೈಹಿಕ ಚಟುವಟಿಕೆಗಳಲ್ಲಿ ನಿಯಮಿತವಾಗಿ ತೊಡಗಿಕೊಳ್ಳಿ. ವ್ಯಾಯಾಮದಿಂದ ನೈಸರ್ಗಿಕ ನೋವು ನಿವಾರಕವಾಗಿರುವ ಎಂಡೋರ್ಫಿನ್ ಸ್ರಾವವನ್ನು ಹೆಚ್ಚಿಸುತ್ತದೆ. ಇದರಿಂದ ಮುಟ್ಟಿನ ಹೊಟ್ಟೆ ನೋವಿನಿಂದ ಉಪಶಮನ ಸಿಗುತ್ತದೆ.
- ಶಾಖ ಕೊಡಿ ಶಾಖದ ಪ್ಯಾಡ್ ಅಥವಾ ಬಿಸಿನೀರು ತುಂಬಿದ ಬಾಟಲಿಯನ್ನು ಕೆಳಹೊಟ್ಟೆಯ ಮೇಲಿರಿಸಬಹುದು. ಹೀಗೆ ಶಾಖ ಕೊಟ್ಟಾಗ ಸ್ನಾಯುಗಳು ಸಡಿಲಗೊಂಡು ನೋವಿನಿಂದ ಉಪಶಮನ ಸಿಗುತ್ತದೆ.
- ವಿಶ್ರಾಮದಾಯಕ ತಂತ್ರಗಳನ್ನು ಅಭ್ಯಾಸ ಮಾಡಿ ಆಳವಾದ ಉಸಿರು ತೆಗೆದುಕೊಂಡು ಮಾಡುವ ವ್ಯಾಯಾಮಗಳು, ಧ್ಯಾನ ಅಥವಾ ದೇಹವನ್ನು ಲಘುವಾಗಿ ವಿಸ್ತರಿಸಿ ಮಾಡುವ ವ್ಯಾಯಾಮಗಳನ್ನು ಮಾಡಬಹುದು. ಇದರಿಂದ ದೇಹಕ್ಕೆ ವಿಶ್ರಾಂತಿ ದೊರಕಿ, ಒತ್ತಡ ನಿವಾರಣೆಯಾಗುತ್ತದೆ. ನೋವಿನಿಂದ ಮುಕ್ತಿ ಸಿಗುತ್ತದೆ.
- ಸಾಕಷ್ಟು ನಿದ್ದೆ ಮಾಡಿ ಒಂದೇ ರೀತಿಯ ನಿದ್ದೆಯ ವೇಳಾಪಟ್ಟಿಯನ್ನು ಅನುಸರಿಸುವ ಮೂಲಕ ರಾತ್ರಿಯ ನಿದ್ದೆ ಚೆನ್ನಾಗಿ ಸಿಗುವಂತೆ ಮಾಡಿ. ಸಾಕಷ್ಟು ನಿದ್ದೆ ಮಾಡಿ ವಿಶ್ರಾಂತಿ ಪಡೆಯುವುದರಿಂದ ನಿಮ್ಮ ಒಟ್ಟಾರೆ ದೇಹಾರೋಗ್ಯ ಚೆನ್ನಾಗಿದ್ದು ಮುಟ್ಟಿನ ಅವಧಿಯ ಕಿರಿಕಿರಿಗಳು ಕಡಿಮೆಯಾಗುತ್ತವೆ.
- ಮಿತಿಮೀರಿ ಕೆಫೀನ್ ಸೇವನೆ ಕಾಫಿ, ಚಹಾ ಮತ್ತು ಎನರ್ಜಿ ಪಾನೀಯಗಳಲ್ಲಿ ಕೆಫೀನ್ ಇರುತ್ತದೆ. ಇವುಗಳ ಸೇವನೆಯನ್ನು ಮಿತಗೊಳಿಸಿ. ಕೆಫೀನ್ ಒತ್ತಡವನ್ನು ಹೆಚ್ಚಿಸುವ ಮೂಲಕ ಋತುಸ್ರಾವದ ಅವಧಿಯ ನೋವು, ಕಿರಿಕಿರಿಗಳನ್ನು ಹೆಚ್ಚಿಸುತ್ತದೆ.
- ಮದ್ಯಪಾನ ಮದ್ಯಪಾನದಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ, ಉರಿಯೂತಕ್ಕೆ ಕಾರಣವಾಗುತ್ತದೆ. ಇವುಗಳಿಂದಾಗಿ ಮುಟ್ಟಿನ ಅವಧಿಯ ನೋವು, ತೊಂದರೆಗಳು ಹೆಚ್ಚಬಹುದು. ಹೀಗಾಗಿ ಮುಟ್ಟಿನ ಅವಧಿಯಲ್ಲಿ ಮದ್ಯಪಾನ ಕಡಿಮೆ ಮಾಡುವುದು ಅಥವಾ ತ್ಯಜಿಸುವುದು ಉತ್ತಮ.
- ಉಪ್ಪಿನಂಶ ಸೇವನೆ ಉಪ್ಪನ್ನು ಮಿತಿಮೀರಿ ಸೇವಿಸಿದರೆ ದೇಹದಲ್ಲಿ ನೀರಿನಂಶ ಹೆಚ್ಚಬಹುದು ಮತ್ತು ಹೊಟ್ಟೆಯು ಬ್ಬರ ಉಂಟಾಗ ಬಹುದು. ಇದರಿಂದ ಮುಟ್ಟಿನ ಅವಧಿಯ ತೊಂದರೆಗಳು ಉಲ್ಬಣಿಸಬಹುದು. ಹೀಗಾಗಿ ಉಪ್ಪಿನಂಶ ಸೇವನೆಯನ್ನು ಕಡಿಮೆ ಮಾಡಿ.
- ಧೂಮಪಾನ ಧೂಮಪಾನವು ಮುಟ್ಟಿನ ಅವಧಿಯ ತೊಂದರೆಗಳನ್ನು ಹೆಚ್ಚಿಸುತ್ತದೆ. ಧೂಮಪಾನವನ್ನು ತ್ಯಜಿಸುವುದು ಮತ್ತು ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಳ್ಳದೆ ಇರುವುದರಿಂದ ಮುಟ್ಟಿನ ಅವಧಿಯ ಕಿರಿಕಿರಿಗಳನ್ನು ಕಡಿಮೆ ಮಾಡಿಕೊಳ್ಳಬಹುದು.
- ಊಟ-ಉಪಾಹಾರಗಳನ್ನು ತಪ್ಪಿಸಿಕೊಳ್ಳುವುದು ಊಟ-ಉಪಾಹಾರ ಸೇವನೆಯನ್ನು ಹೊತ್ತು ಹೊತ್ತಿಗೆ ಸರಿಯಾಗಿ ಮಾಡಿ ಮತ್ತು ಹೊಟ್ಟೆ ಖಾಲಿ ಇರಿಸಿಕೊಳ್ಳಬೇಡಿ. ಸಮತೋಲಿತ ಮತ್ತು ಸಮಯಕ್ಕೆ ಸರಿಯಾದ ಆಹಾರ ಸೇವನೆಯಿಂದ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳು ಮತ್ತು ಶಕ್ತಿ ಪೂರೈಕೆಯಾಗುತ್ತದೆ, ಒಟ್ಟಾರೆ ದೇಹಾರೋಗ್ಯ ಚೆನ್ನಾಗಿರುತ್ತದೆ.
- ಸಂಸ್ಕರಿತ ಮತ್ತು ಸಕ್ಕರಭರಿತ ಆಹಾರ ಸೇವನೆ ಸಂಸ್ಕರಿತ ಮತ್ತು ಸಕ್ಕರೆ ಭರಿತ ಸಿಹಿಯಾದ ತಿನಿಸುಗಳು ಉರಿಯೂತ ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗಬಹುದು. ಇದರಿಂದ ಋತುಸ್ರಾವದ ತೊಂದರೆಗಳು ಉಲ್ಬಣಿಸಬಲ್ಲವು. ಇದರ ಬದಲಾಗಿ ಆರೋಗ್ಯಪೂರ್ಣವಾದ ಉತ್ತಮ ಆಹಾರ ಸೇವಿಸಿ.
- ನಿಮ್ಮ ದೇಹದ ಅಗತ್ಯಗಳತ್ತ ನಿರ್ಲಕ್ಷ್ಯ ನಿಮ್ಮ ದೇಹದ ಅಗತ್ಯಗಳನ್ನು ನಿರ್ಲಕ್ಷಿಸದೆ ಅವುಗಳತ್ತ ಗಮನ ಕೊಡಿ ಮತ್ತು ಅಗತ್ಯವಿದ್ದಾಗ ವಿಶ್ರಾಂತಿ ಪಡೆಯಿರಿ. ಮುಟ್ಟಿನ ಅವಧಿಯಲ್ಲಿ ಕಠಿನ ಕೆಲಸಗಳನ್ನು ಮಾಡುವುದರಿಂದ ದಣಿವು ಮತ್ತು ಕಿರಿಕಿರಿಗಳು ಹೆಚ್ಚುತ್ತವೆ.