Advertisement

ಪಾಲಿಸಿ ಕೊಳ್ಳುವ ಮೊದಲು ಇವೆಲ್ಲ ಪಾಲಿಸಿ

02:29 PM Dec 25, 2017 | |

ವಿಮೆ ಮಾಡಿಸುವವರಲ್ಲಿ ಹೆಚ್ಚಿನವರು ಅಲ್ಲಿನ ನಿಯಮಗಳನ್ನು ಓದುವುದಿಲ್ಲ. ಏಜೆಂಟ್‌ ಹೇಳಿದ ಮೇಲೆಯೇ ಎಲ್ಲವೂ ತಿಳಿಯುವುದು. ಅದಕ್ಕೂ ಮೊದಲು ಆತ ಹೇಳಿದ ವರ್ಣರಂಜಿತ ಮಾತುಗಳಿಗೆ ಮನಸೋತು ವಿಮೆ ಮಾಡಿಸುತ್ತೇವೆಯೇ ಹೊರತು, ನಮ್ಮ ಅವಶ್ಯಕತೆಗೆ ತಕ್ಕುದಾದ ವಿಮೆ ಮಾಡಿಸುವುದಿಲ್ಲ. ಹಾಗಾದರೆ ವಿಮೆ ಮಾಡಿಸುವ ಮುನ್ನ ಏನು ಮಾಡಬೇಕು? ಇಲ್ಲಿದೆ ಮಾಹಿತಿ. 

Advertisement

ವಿಮೆ ಅಂದರೆ ಭಯ ಬೀಳುವವರೇ ಹೆಚ್ಚು. ಏಕೆಂದರೆ ಮಾರುಕಟ್ಟೆಯಲ್ಲಿ ಪಾಲಿಸಿ ಕೊಡುವ ಕಂಪೆನಿಗಳು ಅಷ್ಟೊಂದಿವೆ.  ಯಾವುದನ್ನು ಪಡೆಯಬೇಕು, ಇದರಲ್ಲಿ ಯಾರು ಹೇಳುವುದು ಸತ್ಯ ಹೀಗೆ ಅನೇಕ ಗೊಂದಲಗಳು ವಿಮಾ ಮಾಡಿಸುವವರಿಗೆ ಇದ್ದೇ ಇದೆ. ಈ ಪಾಲಿಸಿಗಳನ್ನು ಕೊಳ್ಳುವ ಭರಾಟೆಯಲ್ಲಿ ತಾವೇಕೆ ವಿಮೆ ಮಾಡಿಸುತ್ತಿದ್ದೇವೆ ಅನ್ನೋ ಮೂಲ ಉದ್ದೇಶವೇನು, ಅಗತ್ಯೆಗಳೇನು ಅನ್ನೋದನ್ನೇ ಮರೆತು ಹೋಗುತ್ತಾರೆ.

ಹೀಗಾಗಿ ವಿಮೆ ಮಾಡಿಸೋದು ಅಂದರೆ ಒಂಥರ ಗೊಂದಲದಾಯಕ ಕಾಯಕವಾಗಿದೆ.  ಹೀಗಾಗಿ ನೀವು   ವಿಮಾ ಪಾಲಿಸಿ ಮಾಡಿಸಲು ತೀರ್ಮಾನಿಸಿದ್ದರೆ ಸ್ವಲ್ಪ ನಿಲ್ಲಿ. ನೀವು ಪಾಲಿಸಿ ಖರೀದಿ ಮಾಡುವ ಮೊದಲು ತಾಳ್ಮೆಯಿಂದ ನೋಡಬೇಕಾದ ಕೆಲವೊಂದು ಕೆಲಸಗಳು ಇವೆ. ಅದು ಹೀಗಿವೆ. 

ವಿಮೆ ಮಾಡಿಸುವುದಾದರೂ ಏತಕ್ಕೆ?: ವಿಮೆ ಎಂದರೆ ಆಪತ್‌ಕಾಲಕ್ಕೆ ನೆರವಾಗಬೇಕು ಅನ್ನೋದು ಅನ್ನೋದು ತಿಳಿದಿರಲಿ.  ಹಾಗಾಗಿ, ವಿಮೆ ಮಾಡಿಸುವುದು ಏತಕ್ಕೆ ಅನ್ನೋ ಪ್ರಶ್ನೆಯನ್ನು ನಿಮಗೆ ನೀವೇ ಮೊದಲು ಕೇಳಿ ಕೊಳ್ಳಿ. ಇವತ್ತು ವಿಮಾ ರಂಗದಲ್ಲಿ ಸ್ಪರ್ಧೆ ಹೆಚ್ಚು. ಪ್ರತಿ ದಿನ ಒಂದಲ್ಲಾ ಒಂದು ರೀತಿಯ ಹೊಸ ಪಾಲಿಸಿಗಳು ಮಾರುಕಟ್ಟೆಗೆ ಬರುತ್ತಿರುತ್ತವೆ. ಅವುಗಳ ಉದ್ದೇಶ ಜನರನ್ನು ಆಕರ್ಷಿಸುವುದು ಅಷ್ಟೇ. ಸೌಲಭ್ಯಕೊಡುವುದಲ್ಲ.  ಈ ಕಾರಣದಿಂದ ನಿಮ್ಮಲ್ಲಿ ಪಾಲಿಸಿ ಇದ್ದರೆ ಏಜೆಂಟರ ಮಾತಿಗೆ ಮಣಿದು ಮತ್ತೆ, ಮತ್ತೆ ಪಾಲಿಸಿಗಳನ್ನು ಕೊಳ್ಳುವ ಅಗತ್ಯವಿಲ್ಲ. 

ಕ್ಲೈಮ್‌ ನೋಡಿ: ಮೊದಲು ಕಂಪೆನಿಯ ಕ್ಲೈಮ್‌ ರೇಶ್ಯೋ (Claim Ratio).  ಇದು ಆಯಾ ಕಂಪೆನಿಗಳ ವೆಬ್‌ಸೈಟ್‌ಗಳಲ್ಲಿ ದೊರೆಯುತ್ತದೆ.   ಪ್ರಸ್ತುತ ಸೆಟಲ್‌ಮೆಂಟ್‌ ರಾಜ ಎಂದರೆ ಎಲ್ಲೆ„ಸಿ. ಅದು ಶೇ. 97.93ರಷ್ಟು ಕ್ಲೈಮುಗಳನ್ನು ಸೆಟ್ಲು ಮಾಡಿದೆ. ನಂತರ ಐಸಿಐಸಿಐ, ಎಚ್‌ಡಿಎಫ್ಸಿ ಇತ್ಯಾದಿ, ಇತ್ಯಾದಿ. ಕ್ಲೈಮು ನೋಡಬೇಕಾದಾಗ ಇನ್ನೊಂದು ಅಂಶ ಗಮನದಲ್ಲಿರಬೇಕು.

Advertisement

ಅದೇನೆಂದರೆ, ಬೇಗ ಸೆಟ್ಲಮೆಂಟ್‌ ಮಾಡಬಹುದು. ಆದರೆ ಒಂದು ವರ್ಷ ಹಾಗೂ  ಅದಕ್ಕಿಂತ ಕಡಿಮೆ ಅವಧಿಯ ಕ್ಲೈಮಿಗೆ ಹೆಚ್ಚು ಪ್ರೀಮಿಯಮ್‌ ಹಾಕಿರುವ ಸಾಧ್ಯತೆಯೂ ಇರುತ್ತದೆ. ಅಂಥ ಪಾಲಿಸಿಗಳು ಕಷ್ಟಕ್ಕಾಗುವ ನೆಂಟನಲ್ಲ.ಈ ಅನುಪಾತಗಳೆಲ್ಲವೂ ಜಾತಕ ಇದ್ದ ಹಾಗೆ. ಪಾಲಿಸಿಗಳ ಯೋಗ್ಯಾನುಯೋಗ್ಯತೆಗಳನ್ನು ಇದರಿಂದ ಅಳೆಯಬಹುದು. ಇದರಲ್ಲಿ ಹೆಚ್ಚು ಅನುಪಾತ ಇರುವ ಕಂಪೆನಿಗಳ ಪಾಲಿಸಿಕೊಳ್ಳುವುದು ಒಳಿತು.

ನಿಮ್ಮ ವಯಸ್ಸು ಮುಖ್ಯ: ವಿಮೆ ಮಾಡಿಸುವುದು ಹೂಡಿಕೆಯಾ, ಹೌದು, ಹೂಡಿಕೆ ಅಲ್ಲವೇ ಹೌದು. ಎರಡಕ್ಕೂ ಒಂದೇ ಉತ್ತರ. ಏಕೆಂದರೆ, ವಿಮೆಯನ್ನು ಯಾವ ವಯಸ್ಸಲ್ಲಿ ಮಾಡಿಸುತ್ತೀರಿ ಎನ್ನುವುದರ ಮೇಲೆ ಇದು ಹೂಡಿಕೆ ಹೌದೋ, ಅಲ್ಲವೋ ಎನ್ನುವುದು ನಿರ್ಧಾರವಾಗುತ್ತದೆ.  ನಿಮ್ಮ ವಯಸ್ಸು 50 ದಾಟಿದ್ದರೆ ಇದನ್ನು ಹೂಡಿಕೆ ಎನ್ನುವುದು ಕಷ್ಟ. ಆಗ ಬದುಕಿನ ಭದ್ರತೆಗೆ ವಿಮೆ ಮಾಡಿಸಬೇಕಾಗುತ್ತದೆ.  

ಹೂಡಿಕೆ ಎನಿಸಿಕೊಳ್ಳುವುದು 20-25 ವಯಸ್ಸಿನಲ್ಲಿ ವಿಮೆಗೆ ಹೂಡಿದಾಗ. ಕಾಲಾವಕಾಶ ಹೆಚ್ಚಿರುವುದರಿಂದ ವಿಮೆ ಒಂದು ರೀತಿಯ ಹೂಡಿಕೆ, ಅದರಿಂದ ತೆರಿಗೆ ವಿನಾಯಿತಿಗಳನ್ನು ಹೆಚ್ಚೆಚ್ಚು ಪಡೆಯಬಹುದು. ಹೀಗಾಗಿ ವಿಮೆ ಮಾಡಿಸುವಾ ವಯಸ್ಸು ಎಷ್ಟು ಮುಖ್ಯ ಅನ್ನೋದನ್ನು ತಿಳಿದಿರಬೇಕು. ವಯಸ್ಸಾದಂತೆ ಅತಿ ಹೆಚ್ಚು ಸೌಲಭ್ಯಗಳನ್ನು ಕೊಡುವ ಗ್ರೂಪ್‌ ಇನುರೆನ್ಸ್‌ ಮಾಡಿಸುವುದು ಒಳಿತು.

ಮನೆಯಲ್ಲಿ ಐದು ಜನ ಇದ್ದು ಐವರಿಗೂ ಒಂದೊಂದು ಪಾಲಿಸಿ ಮಾಡಿಸುವುದಕ್ಕಿಂತ ಒಂದೇ ವಿಮೆ ಇದ್ದರೆ ಕಂತು ಹೊರೆಯಾಗುವುದಿಲ್ಲ. ಆದರೆ ಇಲ್ಲೂ ಕೂಡ ವಯಸ್ಸು ತುಂಬಾ ಮುಖ್ಯ. ವಯಸ್ಸಿನ ಅಂತರ 3-4 ವರ್ಷ ಇದ್ದರೆ ತೊಂದರೆ ಇಲ್ಲ.  ಮಕ್ಕಳಿಗೆ ಪ್ರತ್ಯೇಕ ವಿಮೆ ಮಾಡಿಸುವುದು ಒಳಿತು. ಅದರಲ್ಲೂ 10-15 ವಯಸ್ಸು ದಾಟಿದವರನ್ನು ವಯಸ್ಸಾದವರ ಗುಂಪು ವಿಮೆಯಲ್ಲಿ ಸೇರಿಸುವುದು ಸೂಕ್ತವಲ್ಲ ಎನಿಸುತ್ತದೆ. 

ಎಂಥ ವಿಮೆ ಬೇಕು?: ಇದೇ ಗೊಂದಲ. ಬಹುತೇಕರು ವಿಮೆ ಎಂದರೆ ಭಯ ಬೀಳುವುದು ಇದೇ ಪ್ರಶ್ನೆಗೆ.  ನಾನು ವಿಮೆ ಮಾಡಿಸುತ್ತೇನೆ ಅಂದರೆ ನೂರಾರು ಕಂಪೆನಿಗಳು ಸಿದ್ಧವಿರುತ್ತದೆ. ನೂರಾರು ಸೌಲಭ್ಯಗಳನ್ನು ಮುಂದಿಡುತ್ತವೆ. ಆದರೆ ಆಯ್ಕೆ ಮಾಡಿಕೊಳ್ಳಬೇಕಾದ ಹಣೆಬರಹ ನಿಮ್ಮದೇ. ಹೀಗಾಗಿ ಮೊದಲು ಎಂಥ ವಿಮೆ ಬೇಕು ಅನ್ನೋದು ನೀವೇ ನಿರ್ಧರಿಸಬೇಕು. ಅದಕ್ಕೆ ನಿಮ್ಮ ಅಗತ್ಯಗಳನ್ನು ಗುಡ್ಡೆ ಹಾಕಿ ಆಮೇಲೆ ಎಂಥ ವಿಮೆ ಬೇಕು ಅಂತ ನಿರ್ಧರಿಸಬೇಕಾಗುತ್ತದೆ. 

ಈಗಂತೂ ಟ್ರಡೀಷನ್‌ ಪ್ಲಾನ್‌ಗಳ ಬೆಲೆ ಹೆಚ್ಚಾಗಿವೆ.  ಇದಕ್ಕೆ ಪ್ರೀಮಿಯಮ್‌ನ ಶೇ.30ರಷ್ಟು ಹಣವನ್ನು ಕಟ್ಟಬೇಕಾಗುತ್ತದೆ. ಜೊತೆಗೆ,  ಇದು ಯೂನಿಟ್‌ಲಿಂಕ್ಡ್ ಪಾಲಿಸಿಗಿಂತ ಹೆಚ್ಚು. ಪ್ರಾರಂಭಿಕ ವರ್ಷಗಳಲ್ಲಿ ಪಾಲಿಸಿ ಹಂಚಿಕೆಯ ಫೀ ಶೇ.7-10ರಷ್ಟು ಇರುತ್ತದೆ. ಆಡ್ಮಿನಿಸ್ಟ್ರೇಷನ್‌ ಫೀ, ಫ‌ಂಡ್‌ ಮೇನೇಜ್‌ಮೆಂಟ್‌ ಫೀ ಶೇ. 1.35ರಷ್ಟು ಇರುತ್ತದೆ. ಇವನ್ನೆಲ್ಲ ಮೊದಲೇ ಗಮನಿಸಿ, ಎಲ್ಲ ರೀತಿಯ ಲೆಕ್ಕಾಚಾರ ಮಾಡಿ ಆನಂತರವೇ ನೀವು ಪಾಲಿಸಿ ಮಾಡಿಸಬೇಕು. 

ಎಷ್ಟು ದುಡ್ಡು ಕಟ್ಟಬೇಕು?: ವಿಮೆ ಮಾಡಿಸಲು ಹೋದವರಿಗೆ ಗೊತ್ತಿರಬೇಕಾದದ್ದು ಏನೆಂದರೆ ಅಷೂರ್ಡ್‌ ಅಮೌಂಟ್‌ ಹೆಚ್ಚಾದಷ್ಟೂ ಪ್ರೀಮಿಯಮ್‌ ಮೊತ್ತ ಹೆಚ್ಚುತ್ತದೆ ಎನ್ನುವ ವಿಚಾರ. ಹಾಗಾಗಿ, ನೀವು ಕೊಳ್ಳಲು ಹೊರಟಿರುವ ವಿಮೆಯನ್ನು ಬೇರೆ ಕಂಪನಿಗಳ ವಿಮೆಗಳೊಂದಿಗೆ ಹೊಂದಿಸಿ ನೋಡಬೇಕು.   ಆದರೆ ನೀವು ಯಾವುದೇ ಕಾರಣಕ್ಕೂ ಪ್ರೀಮಿಯಮ್‌ ಕಡಿಮೆ ಅಂತ ಯೂನಿಟ್‌ಲಿಂಕ್ಡ್ ಮತ್ತು ಸಾಂಪ್ರದಾಯಿಕ ಪ್ಲಾನ್‌ಗಳಿಗೆ ಮೊರೆ ಹೋಗಬೇಡಿ. ಒಂದು ಪಕ್ಷ ನಿಮಗೆ  45-50 ವರ್ಷ ಆಗಿದ್ದರೆ ಪೆನನ್‌ ಪ್ಲಾನ್‌ ಕೊಳ್ಳುವುದು ಒಳಿತಲ್ಲ.  ಏಕೆಂದರೆ ಪ್ರೀಮಿಯಮ್‌ ರೇಟು ಹೆಚ್ಚಾಗಿರುವುದರಿಂದ ಕಂತುಗಳು ಹೊರೆಯಾಗುವ ಸಾಧ್ಯತೆ ಹೆಚ್ಚು.  ಕೊನೆಯಲ್ಲಿ ಸಿಗುವ ಇಡುಗಂಟು ಕೂಡ ಕಡಿಮೆಯೇ ಇರುತ್ತದೆ.
 
ಅವರಿಗೆ ಇದೇ ಪ್ಲಸ್‌ ಪಾಯಿಂಟ್‌: ನೀವು ಹೆಚ್ಚು ಹೆಚ್ಚು ಸಂಪಾದನೆ ಮಾಡಿದರೆ, ಹೆಚ್ಚೆ ಹೆಚ್ಚು ಆದಾಯ ಗಳಿಸುವಂತಾದರೆ ನಿಮಗಿಂತ ಹೆಚ್ಚು ಖುಷಿ ಪಡುವುದು ಈ  ವಿಮಾ ಕಂಪೆನಿಗಳು. ಒಂದು ಪಾಲಿಸಿ ಮಾಡಿಸಿಬಿಡಿ ಅಂತ ವಿಮಾ ಕಂಪೆನಿಯ ಪ್ರತಿನಿಧಿಗಳು ಬೆನ್ನುಬೀಳುತ್ತಾರೆ.   ಹೆಚ್ಚು ಆದಾಯ ಇದ್ದರೆ ಹೆಚ್ಚು ತೆರಿಗೆ ಕಟ್ಟಬೇಕು. ಆ ಹೊಡೆತದಿಂದ ತಪ್ಪಿಸಿಕೊಳ್ಳಲು ನೀವು ವಿಮೆ ಮಾಡಿಸಲೇ ಬೇಕು.

ಆದ್ದರಿಂದ ವಿಮಾ ಕಂಪೆನಿಗಳು ನಿಮ್ಮ ತೆರಿಗೆ ಉಳಿತಾಯವನ್ನೇ ಮುಂದಿಟ್ಟು ಪಾಲಿಸಿಗೆ ಒತ್ತಾಯಿಸುತ್ತವೆ.  ತೆರಿಗೆ ಉಳಿಸುವ ಸಲುವಾಗಿಯೇ ಪಾಲಿಸಿಗಳನ್ನು ರೂಪಿಸುತ್ತವೆ. ವಿಮಾ ಪಾಲಿಸಿಗಳವರಿಗೆ ಪ್ಲಸ್‌ ಪಾಯಿಂಟ್‌ ಏನೆಂದರೆ- ಕಡಿಮೆ ಎಂದರೂ 20-25ವರ್ಷ ಪಾಲಿಸಿ ತೆಗೆದುಕೊಳ್ಳಬೇಕು. ಆ ನಂತರ ರಿಟೈರ್‌ ಆಗುವುದರಿಂದ ಪಾಲಿಸಿಗಳ ಅವಧಿ 20-25 ವರ್ಷ ಸಾಮಾನ್ಯವಾಗಿದೆ. 

ಟರ್ನ ಪ್ಲಾನ್‌ ಆಗಿದ್ದರೆ…: ನಿಮ್ಮ ಟರ್ಮ್ ಪ್ಲಾನ್‌ ಆಗಿದ್ದರೆ, ನಿಮಗೆ ಈ ಪಾಲಿಸಿ ಬೇಡ ಅನಿಸಿ ವಾಪಸು ಪಡೆಯಲು ಮುಂದಾದರೆ ನೀವು ಹೆಚ್ಚಿನ ಸರಂಡರ್‌ ಫೀ ಕಟ್ಟಬೇಕು. ಯುಲಿಪ್ಸ್‌ -ಶೇ.10-15ರಷ್ಟು. ಸಾಂಪ್ರದಾಯಿಕ ವಿಮೆಗಳಲ್ಲಿ ಶೇ. 30ರಷ್ಟು ಎರಡು, ಮೂರು ವರ್ಷದಲ್ಲಿ, ಶೇ. 70ರಷ್ಟನ್ನು ನಾಲ್ಕನೇ ವರ್ಷದಲ್ಲಿ ಕಟ್ಟಬೇಕು.   ಒಂದು ಪಕ್ಷ ನೀವು ಕಡಿಮೆ ಬೆಲೆಯ ವಿಮೆ ಮಾಡಿಸುವುದಾದರೆ ಟರ್ಮ್ ಪ್ಲಾನ್‌ ಚಾಯ್ಸ ನಿಮ್ಮದೇ. 

* ವಿಮಾನಂದ

Advertisement

Udayavani is now on Telegram. Click here to join our channel and stay updated with the latest news.

Next