2013ರ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ, ಕುಂದಾಪುರ ಹೊರತುಪಡಿಸಿ ಬೈಂದೂರು, ಕಾಪು, ಉಡುಪಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ವಿಜಯಿಯಾಗಿ ದ್ದರು. ಆಗಿನ ಸರಕಾರದ ಆರಂಭ ಕಾಲದಲ್ಲಿ ವಿನಯ ಕುಮಾರ ಸೊರಕೆ ಸಚಿವರಾದರೆ, ಉತ್ತರಾರ್ಧದಲ್ಲಿ ಪ್ರಮೋದ್ ಮಧ್ವರಾಜ್ ಸಚಿವರಾದರು.
Advertisement
2014ರ ಲೋಕಸಭಾ ಚುನಾವಣೆ ಯಲ್ಲಿ ಮೋದಿ ಗಾಳಿ ಬೀಸಲು ಆರಂಭವಾಯಿತು. ಆಗ ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಶೋಭಾ ಈಗ ಮತ್ತೆ ದಾಖಲೆ ಸೃಷ್ಟಿಸಿ ವಿಜಯಿಯಾಗಿದ್ದಾರೆ. ಈ ಮಧ್ಯೆ 2018ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ದಾಖಲೆ ನಿರ್ಮಿಸಿತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿ ಉಳಿದೆಡೆ ಬಿಜೆಪಿ ಪಾರಮ್ಯ ಸಾಧಿಸಿತು.
Related Articles
ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಸ್ಥಾಪನೆಯಾಯಿತು. ಜಿಲ್ಲೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಪ್ರತಾಪಚಂದ್ರ ಶೆಟ್ಟಿಯವರು ಸಭಾಪತಿಯಾದರೆ, ಕರಾವಳಿ ಮೂಲದ ಡಾ| ಜಯಮಾಲಾ ಉಸ್ತುವಾರಿ ಸಚಿವರಾದರು. ಆದರೆ ಸರಕಾರದ ಈ ಬಲ ಮತ್ತೆ ನಡೆದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಮೇಲೆ ಪರಿಣಾಮ ಬೀರಲಿಲ್ಲ.
Advertisement