Advertisement

“ಅಧ್ಯಯನ ನಡೆಸಿ’

01:10 AM Mar 08, 2019 | |

ಚೆನ್ನೈ: ವಿವಾಹೇತರ ಸಂಬಂಧಗಳು ಹಾಗೂ ಅವುಗಳ ಪರಿಣಾಮದಿಂದ ಉಂಟಾಗುತ್ತಿರುವ ಅಪರಾಧಗಳಿಗೆ ಟಿವಿಯಲ್ಲಿ ಬರುತ್ತಿರುವ ಮೆಗಾ ಧಾರಾವಾಹಿಗಳೂ ಕಾರಣವಾಗುತ್ತಿವೆಯೇ ಎಂಬುದನ್ನು ಕೂಲಂಕಷವಾಗಿ ಅಧ್ಯಯನ ನಡೆಸುವಂತೆ ಮದ್ರಾಸ್‌ ಹೈಕೋರ್ಟ್‌, ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.  

Advertisement

ನ್ಯಾಯಮೂರ್ತಿಗಳಾದ ಎನ್‌. ಕಿರುಬಾಕರನ್‌ ಹಾಗೂ ಅಬ್ದುಲ್‌ ಖುದೋಸ್‌ ನೇತೃತ್ವದ ನ್ಯಾಯಪೀಠ “ನಮ್ಮ ದೇಶದಲ್ಲಿ ಮದುವೆ ಎನ್ನುವುದು ನಂಬಿಕೆ, ಪ್ರೀತಿ, ವಿಶ್ವಾಸದಿಂದ ನಡೆಯುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ಇಂಥ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದ್ದು, ಇದರ ಪರಿಣಾಮವಾಗಿ ಕೊಲೆ, ಅಪಹರಣ ಪ್ರಕರಣ ಹೆಚ್ಚಾಗುತ್ತಿವೆ” ಎಂದಿದೆ.
 

Advertisement

Udayavani is now on Telegram. Click here to join our channel and stay updated with the latest news.

Next