Advertisement
ಎಲ್ಲ ಸೇತುವೆ, ರಸ್ತೆಗಳ ನಿರಂತರ ಪರಿ ಶೀಲನೆ, ಅಂಗನವಾಡಿ, ಶಾಲೆಗಳ ಕಟ್ಟಡ ಪರಿಶೀಲನೆ ನಡೆಸಿ ಅನಾಹುತ ಆಗದಂತೆ ಮುನ್ನೆಚ್ಚರಿಕೆ ವಹಿಸುವು ದರ ಜತೆಗೆ ರಾಜ್ಯದ ಸೇತುವೆಗಳ ದೃಢತೆ ಖಾತ್ರಿಗೆ ವರದಿ ನೀಡು ವಂತೆಯೂ ಸೂಚನೆ ನೀಡಿ ದ್ದಾರೆ. ಜಲಾಶಯಗಳಲ್ಲಿ ದಿಢೀರ್ ನೀರು ಹೆಚ್ಚಾದಾಗ ಅನಾಹುತ ಆಗದಂತೆ ನೋಡಿಕೊಳ್ಳಲು ಸಿಎಂ ನಿರ್ದೇಶನ ನೀಡಿದ್ದಾರೆ.
Related Articles
Advertisement
ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ ಶಿಥಿಲಗೊಂಡ ಮನೆಗಳಲ್ಲಿರುವವರನ್ನು ಖಾಲಿ ಮಾಡಿ ಪುನರ್ವಸತಿ ಕಲ್ಪಿಸಬೇಕು. ಪ್ರವಾಹ ಇರುವಾಗ ನೀರಿಗೆ ಇಳಿಯಲು ಬಿಡಬಾರದು ಎಂದು ಸಿಎಂ ಸೂಚಿಸಿದರು.
ನಿಗಾ ಇಡಿಅಂಗನವಾಡಿ, ಶಾಲೆ ಕಟ್ಟಡಗಳ, ಸೇತುವೆಗಳು, ಕೆರೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಮಲೆನಾಡು, ಕರಾವಳಿ ಭಾಗಗಳಲ್ಲಿ ಇರುವ ಹಳೇ ಶಾಲಾ ಕಟ್ಟಡಗಳನ್ನು ಗುರುತಿಸಿ, ಆದ್ಯತೆ ಮೇರೆಗೆ ದುರಸ್ತಿಗೊಳಿಸಬೇಕು. ಪಂಚಾ ಯತ್ ಮಟ್ಟದಲ್ಲಿ ಕಾರ್ಯಪಡೆ ರಚಿಸಿ 20 ಸಾವಿರ ರೂ. ಅನುದಾನ ಒದಗಿಸ ಲಾಗಿದೆ. ಶಿಥಿಲಗೊಂಡ ಮನೆಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಮಮಟ್ಟದಲ್ಲಿ ಮೊದಲೇ ಗುರುತಿಸಬೇಕು ಎಂದರು. ಮಳೆ, ಹಾನಿ ವಿವರ
-ಶೇ. 22: ಜೂ. 1ರಿಂದ ಆ. 15ರ ವರೆಗೆ ವಾಡಿಕೆಗಿಂತ ಹೆಚ್ಚುವರಿ ಮಳೆ
-13 ಜಿಲ್ಲೆ ಗಳಲ್ಲಿ ಹೆಚ್ಚು ಮಳೆ
-70 ಲಕ್ಷ ಹೆಕ್ಟೇರ್: ರಾಜ್ಯದಲ್ಲಿ ಬಿತ್ತನೆ
-81,589 ಹೆಕ್ಟೇರ್: ಬೆಳೆ ಹಾನಿ
-67- ಅತಿವೃಷ್ಟಿಯಿಂದ ಸಾವು
-29 – ಮನೆಕುಸಿತದಿಂದ ಸಾವು
-66 ಪ್ರಕರಣಗಳಿಗೆ 3.29 ಕೋಟಿ ಪರಿಹಾರ ವಿತರಣೆ
-ರಾಜ್ಯದ ಜಲಾಶಯಗಳು ಶೇ.89ರಷ್ಟು ಭರ್ತಿ