Advertisement
ಶಿಕ್ಷಣ ಸಚಿವ ಸುರೇಶಕುಮಾರ್ ಅಧ್ಯಕ್ಷತೆ,ಶಿಕ್ಷಣ ಇಲಾಖೆ ಆಯುಕ್ತರ ಉಪಸ್ಥಿತಿಯಲ್ಲಿಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದಂತೆ ನಡೆದ ವಿಡಿಯೋ ಕಾನ್ಫರೆನ್ಸ್‌ನಂತರ ಜಿಪಂ ಸಿಇಒ ಕೆ.ಆರ್. ನಂದಿನಿಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕರು ಹಾಗೂ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.
Related Articles
Advertisement
ಶಾಲೆಗೆ ಹಾಜರಾಗುವ ಎಲ್ಲ ಮಕ್ಕಳನ್ನು ಪ್ರತಿದಿನ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನ್ ಮೂಲಕ ಪರೀಕ್ಷಿಸುವುದು. ರೋಗ ಲಕ್ಷಣ ಕಂಡು ಬಂದರೆ ಶಾಲೆಗೆ ಹಾಜರಾಗುವಂತಿಲ್ಲ. ಒಂದು ವೇಳೆ ಯಾವುದೇ ರೀತಿಯರೋಗಲಕ್ಷಣಗಳು ಇದ್ದಲ್ಲಿ ಪೋಷಕರಗಮನಕ್ಕೂ ಹಾಗೂ ಆರೋಗ್ಯ ಇಲಾಖೆ ಗಮನಕ್ಕೆ ತರುವುದು ಕಡ್ಡಾಯ ಎಂದು ಅವರು ವಿವರಿಸಿದ್ದಾರೆ.
ಸೋಂಕು ತಗುಲದಂತೆ ಮುನ್ನೆಚ್ಚರಿಕಾ ಕ್ರಮಗಳಾಗಿ ಶಾಲಾ ಕಟ್ಟಡದ ಗೋಡರೀಲಿಂಕ್ಸ್ ಲಿಫೈ, ಸೈರ್‌ಕೇಸ್, ವಾಹನಗಳು ಪೀಠೊಪಕರಣಗಳು ಇತ್ಯಾದಿಗಳನ್ನು 1%ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಿಸುವುದು, ಸೇವಾ ಸಂಸ್ಥೆಗಳಾದ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಸೌಟ್ ಮತ್ತು ಗೈಡ್ ಹಾಗೂ ದಾನಿಗಳ ನೆರವನ್ನು ಪಡೆದು ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಲಭ್ಯತೆ ಒದಗಿಸುವುದು. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶಾಲಾ ಪ್ರಾರಂಭೋತ್ಸವಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದ್ದಾರೆ.
ಹೆಚ್ಚುವರಿ ಕೊಠಡಿಮೀಸಲಿಡಬೇಕು ಎಂದು ಸೂಚಿಸಿರುವಅವರು ಎಲ್ಲ ಶಾಲೆಗಳ ಶೌಚಾಲಯ, ಕೊಠಡಿಗಳು, ಮೈದಾನ, ಶಾಲಾ ಆವರಣವು ಸ್ವಚ್ಛ ಮಾಡಿಸುವುದು. ಶಾಲೆಗಳನ್ನುತಳೀರು ತೋರಣಗಳಿಂದ ಸಿಂಗರಿಸಿ ಶಾಲಾಅಂಗಳದಲ್ಲಿ ರಂಗೋಲಿ ಬಿಡಿಸಿ ಶಾಲಾಆವರಣ ಅಂದಗೊಳಿಸಬೇಕು ಎಂದು ತಿಳಿಸಿದ್ದಾರೆ.