Advertisement
ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಉತ್ತರಿಸಿದ ಹೆಚ್ ಡಿಕೆ, ಮುಖ್ಯ ಕಾರ್ಯದರ್ಶಿ ಕೂಡಲೇ ಇಬ್ಬರನ್ನು ಕರೆದು ಎಚ್ಚರಿಕೆ ನೀಡಬೇಕು. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಸರಕಾರ ಇದೆಯಾ? ಇಲ್ಲವಾ? ಎನ್ನುವ ಅನುಮಾನ ಉಂಟಾಗಿದೆ ಎಂದರು.
Related Articles
Advertisement
ಗೃಹ ಸಚಿವರು ಸರಕಾರಿ ಅಧಿಕಾರಿಗಳನ್ನು ದೇವ ಮಾನವರು ಅಂತಾರೆ. ಹಾಗೆಂದರೆ ಏನರ್ಥ? ಅವರೇನು ಇಂದ್ರಲೋಕದಿಂದ ಇಳಿದು ಬಂದವರಾ? ಇದೆಲ್ಲಾ ವಿಚಾರಗಳು ನನಗೆ ಗೊತ್ತಿದೆ. ಸಾರಾ ಮಹೇಶ್ ಅವರ ಮೇಲೆ ಒಬ್ಬ ಮಹಿಳಾ ಅಧಿಕಾರಿ ಆರೋಪ ಮಾಡಿದ್ದು ಗೊತ್ತಿದೆ, ಆ ಅಧಿಕಾರಿ ಎಲ್ಲಿ ಹೋದರೂ ವಿವಾದವೇ. ಯಾಕೆ ಬೇಕು ಇಂಥ ವಿವಾದಗಳು? ನನಗೆ ಗೊತ್ತಿರುವ ಕೆಲ ಮಾಹಿತಿಗಳನ್ನು ಹೊರಗೆ ಇಟ್ಟರೆ ಸರಕಾರಕ್ಕೆ ತಲೆ ಎತ್ತಿ ನಿಲ್ಲಲು ಆಗುವುದಿಲ್ಲ ಎಂದರು.
ಸಾರಾ ಮಹೇಶ್ ಅವರು ಆ ಮಹಿಳಾ ಅಧಿಕಾರಿ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿದಾಗ, ಆ ಅಧಿಕಾರಿಯ ಪರವಾಗಿ ಯಾರೆಲ್ಲ, ಹೇಗೆಲ್ಲಾ ಒತ್ತಡ ಹಾಕಿದರು, ಎಂತೆಂಥ ಹುದೆಯಲ್ಲಿದ್ದವರು ಪ್ರಭಾವ ಬೀರಿದರು ಎನ್ನುವುದು ನನಗೆ ಗೊತ್ತಿದೆ. ಕೊನೆಗೆ ನಾನೇ ಸಾರಾ ಮಹೇಶ್ ಅವರಿಗೆ, ಹೋಗಲಿ ಬಿಟ್ಟು ಬಿಡಿ ಎಂದು ಹೇಳಿದೆ ಎಂದರು.
ಡಬಲ್ ಎಂಜಿನ್ ಸರಕಾರದಲ್ಲಿ ಇದೆಲ್ಲಾ ಎಗ್ಗಿಲ್ಲದೆ ನಡೆಯುತ್ತಿದೆ. ಒಂದೆಡೆ ರಾಜ್ಯದಿಂದ ಕೈಗಾರಿಕೆಗಳು ಬೇರೆ ರಾಜ್ಯದ ಪಾಲಾಗುತ್ತಿವೆ. ಇಲ್ಲಿ ನೋಡಿದರೆ ಅಧಿಕಾರಿಗಳು ಕಿತ್ರಾಡಿಕೊಳ್ಳುತ್ತಿದ್ದಾರೆ. ಎಲೆಕ್ಟ್ರಿಕ್ ಬಸ್ ಯೋಜನೆ ಎಲ್ಲಿಗೆ ಹೋಯ್ತು? ತಮಿಳುನಾಡಿಗೆ ಹೋಗಿದೆ ಅದು. ಸರಕಾರಕ್ಕೆ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ ಎಂದು ಅವರು ಕಿಡಿ ಕಾರಿದರು.
ಎ.ಟಿ.ರಾಮಸ್ವಾಮಿ ಮಾತು ಸರಿ ಇಲ್ಲಹಾಸನದ ರಾಜಕೀಯಕ್ಕೆ ಸಂಬಂಧಿಸಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಬಗ್ಗೆ ಹಿರಿಯ ಶಾಸಕ ಎ.ಟಿ.ರಾಮಸ್ವಾಮಿ ಅವರು ಬಳಕೆ ಮಾಡಿರುವ ಪದ ಸರಿ ಇಲ್ಲ ಎಂದರು. ಎರಡು ಮೂರು ವರ್ಷದಿಂದ ರಾಮಸ್ವಾಮಿ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿಲ್ಲ, ಯಾವ ಸಭೆಗಳಿಗೆ ಕೂಡ ಬಂದಿಲ್ಲ. ಎರಡು ವರ್ಷದಿಂದಲೇ ಅನೇಕರು ಬೇರೆ ಪಕ್ಷದ ಜತೆ ಸಂಪರ್ಕದಲ್ಲಿ ಇದ್ದರು. ಅರಕಲಗೂಡಿನ ರಾಜಕಾರಣ ಹೇಗಾಯ್ತು, ಯಾಕೆ ಹೀಗಾಯ್ತು ಅಂತ ನನಗಿಂತ ರಾಮಸ್ವಾಮಿ ಅವರಿಗೇ ಚೆನ್ನಾಗಿ ಗೊತ್ತಿದೆ. ಅವರು ನಾನು ಹಿಂದೆ ನೀಡಿದ್ದ ಮಹತ್ವದ ಹೊಣೆಯನ್ನು ಬಹಳ ಉತ್ತಮವಾಗಿ ನಿಭಾಯಿಸಿದ್ದರು. ಅಂತವರು ರೇವಣ್ಣ ಅವರನ್ನು ರಾವಣ ಎಂದು ಕರೆಯಬಾರದಿತ್ತು ಎಂದರು. ಆದಷ್ಟು ಬೇಗ ಎರಡನೇ ಪಟ್ಟಿ
ನಮ್ಮ ಪಕ್ಷದಲ್ಲಿ ಟಿಕೆಟ್ ಗೊಂದಲ ಇಲ್ಲ. ಎರಡನೇ ಪಟ್ಟಿ ಶೀಘ್ರದಲ್ಲಿ ಹೊರಬರಲಿದೆ. ಅದರಲ್ಲಿ ಹಾಸನ ಅಭ್ಯರ್ಥಿಯ ಹೆಸರು ಇರುತ್ತದೆ ಎಂದು ತಿಳಿಸಿದರು ಕುಮಾರಸ್ವಾಮಿ. ಕುಕ್ಕರ್ ಬ್ಲಾಸ್ಟ್ ಬಗ್ಗೆ ಕಿಡಿ
ಜನರಿಗೆ ಹಂಚಿರುವ ಅಗ್ಗದ ಕುಕ್ಕರ್ ಗಳು ಜೀವ ತೆಗೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕುಮಾರಸ್ವಾಮಿ ಅವರು, 150 ಸೀಟು ಗೆದ್ದಾಯ್ತು ಅನ್ನುವವರು ಕುಕ್ಕರ್ ಸೀರೆ ಹಂಚಿಕೊಂಡು ಹೋಗ್ತಾ ಇದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಕಾಂಗ್ರೆಸ್ ನವರು ಅಗ್ಗದ ಕುಕ್ಕರ್ ಕೊಟ್ಟು ಜನರ ಬದುಕು ಹಾಳು ಮಾಡುತ್ತಿದ್ದಾರೆ. ಇಂಥ ಅಗ್ಗದ ತಂತ್ರಗಳಿಗೆ ನನ್ನ ವಿರೋಧ ಇದೆ. ಕೆಲಸ ಮಾಡಿ ಜನರ ಮನಸ್ಸು ಗೆಲ್ಲಬೇಕು. ನನ್ನನ್ನು ಜನತೆ ಪ್ರೀತಿಯಿಂದ ಕಾಣ್ತಾರೆ. ಜನರ ಕಷ್ಟ ಸುಖದಲ್ಲಿ ಭಾಗಿಯಾದರೆ ಇಂಥವೆಲ್ಲ ಹಂಚುವ ಅಗತ್ಯ ಇರಲ್ಲ. ಜನರೇ ತೀರ್ಮಾನ ಮಾಡಬೇಕು, ಇಂಥವನೆಲ್ಲಾ ತಿರಸ್ಕಾರ ಮಾಡಬೇಕು. ಮಾಧ್ಯಮಗಳು ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು. ಯತ್ನಾಳ್ ಹೇಳಿಕೆ ತಪ್ಪು
ಅಡುಗೆ ಅನಿಲ ದರ ಏರಿಕೆ ಬಗ್ಗೆ ಮಾತನಾಡಿದ ಜನರು ಪಾಕಿಸ್ತಾನಕ್ಕೆ ಹೋಗಲಿ, ಪಾಕಿಸ್ತಾನದಲ್ಲಿ ಗ್ಯಾಸ್ ದರ ಎಷ್ಟಿದೆ ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸರಿ ಇಲ್ಲ. ಪಾಕಿಸ್ಥಾನದಲ್ಲಿ ಜನರ ಬವಣೆ ಏನಾಗಿದೆ ಎನ್ನುವುದು ಅವರಿಗೆ ಗೊತ್ತಿಲ್ಲವೆ? ಅಂದರೆ ನಮ್ಮ ಜನರು ಪಾಕಿಸ್ತಾನಕ್ಕೆ ಹೋಗಬೇಕಾ? ಅಲ್ಲಿ ಬೆಲೆ ದುಬಾರಿ ಆದರೆ ಇಲ್ಲಿಯೂ ಬೆಲೆ ಏರಿಕೆ ಮಾಡುತ್ತೀರಾ? ಎಂದು ಪ್ರಶ್ನಿಸಿದರು.