ಉದ್ಯೋಗಿಗಳ “ವೇತನದ ಪ್ಯಾಕೇಜ್’ ಪುನಾರಚಿಸುವ ಅನಿವಾರ್ಯತೆ ಎದುರಾಗಿದೆ.
Advertisement
ಹೊಸ ನಿಯಮ ಎಪ್ರಿಲ್‌ನಿಂದ ಅನ್ವಯ ವಾಗಲಿವೆ. ಉದ್ಯೋಗಿಗಳಿಗೆ ನೀಡುವ ಭತ್ತೆಯು ಆತನ ಒಟ್ಟು ವೇತನದ ಶೇ. 50ನ್ನು ಮೀರಬಾರದು ಎಂದು ಈ ನಿಯಮ ಹೇಳುತ್ತದೆ. ಅಂದರೆ ಉದ್ಯೋಗಿಯ ಮೂಲ ವೇತನವೇ ಶೇ. 50ರಷ್ಟಿರಬೇಕು. ನಿಯಮ ಪಾಲಿಸಬೇಕೆಂದರೆ ಉದ್ಯೋಗದಾತರು ಉದ್ಯೋಗಿಗಳ ಮೂಲವೇತನ ಹೆಚ್ಚಿಸಲೇ ಬೇಕಾಗುತ್ತದೆ. ಪರಿಣಾಮ ಗ್ರಾಚ್ಯುಟಿ ಪಾವತಿ ಮೊತ್ತವೂ ಸ್ವಲ್ಪಮಟ್ಟಿಗೆ ಏರಿಕೆಯಾಗುತ್ತದೆ ಮಾತ್ರವಲ್ಲ ಭವಿಷ್ಯ ನಿಧಿ (ಪಿಎಫ್)ಗೆ ಪಾವತಿಯಾ ಗುವ ಉದ್ಯೋಗಿ ಪಾಲೂ ಹೆಚ್ಚಾಗು ತ್ತದೆ. ಇದೆಲ್ಲದರ ಪರಿಣಾಮವೆಂಬಂತೆ ಉದ್ಯೋಗಿಯ ಕೈಗೆ ಬರುವ ಸಂಬಳ (ಟೇಕ್ ಹೋಂ ಸ್ಯಾಲರಿ) ಕಡಿಮೆಯಾಗುತ್ತದೆ. ಆದರೆ ಉದ್ಯೋಗಿಯ ನಿವೃತ್ತಿ ನಿಧಿ ಹೆಚ್ಚಾಗುವುದ ರಿಂದ ದೀರ್ಘಾವಧಿಯ ಲಾಭ ತರಲಿದೆ.
ಪ್ರಸ್ತುತ ಬಹುತೇಕ ಖಾಸಗಿ ಕಂಪೆನಿಗಳು ಉದ್ಯೋಗಿಯ ಒಟ್ಟಾರೆ ಸಂಭಾವನೆಯ ಶೇ. 50ಕ್ಕಿಂತ ಕಡಿಮೆ ಮೊತ್ತವನ್ನು ಭತ್ತೆ ಯೇತರ ಮೊತ್ತವೆಂದೂ ಶೇ. 50ಕ್ಕಿಂತ ಹೆಚ್ಚಿನದನ್ನು ಭತ್ತೆಯ ಮೊತ್ತವೆಂದೂ ಪಾವತಿಸು ತ್ತವೆ. ಹೊಸ ವೇತನ ನಿಯಮ ಜಾರಿಯಾ ದರೆ ಇದೂ ಬದಲಾಗುತ್ತದೆ. ಹೀಗಾಗಿ ಸಾಮಾನ್ಯವಾಗಿ ಹೆಚ್ಚಿನ ಭತ್ತೆಗಳನ್ನು ಪಡೆಯುತ್ತಿರುವಂಥ ಖಾಸಗಿ ವಲಯದ ಉದ್ಯೋಗಿಗಳ ಕೈಗೆ ಸಿಗುವ ವೇತನದ ಮೊತ್ತ ಕಡಿಮೆಯಾಗುವುದು ಖಚಿತ. ಹೊಸ ನಿಯಮದಿಂದ ಕೈಗೆ ಬರುವ ಸಂಬಳದ ಪ್ರಮಾಣ ಕಡಿಮೆಯಾದರೂ ಅತ್ಯುತ್ತಮ ಸಾಮಾಜಿಕ ಭದ್ರತೆ, ನಿವೃತ್ತಿ ಬಳಿಕದ ಅನುಕೂಲ ಒದಗಿಸುತ್ತದೆ ಎನ್ನುತ್ತಾರೆ ತಜ್ಞರು.