Advertisement

ಪೋಷಕರೇ ನಿಮ್ಮ  ಮಕ್ಕಳ ಮೇಲೆ ನಿಗಾವಹಿಸಿ : ಮಿಮ್ಸ್‌ ನಿರ್ದೇಶಕ ಡಾ.ಹರೀಶ್‌

07:46 PM Feb 03, 2021 | Team Udayavani |

ಮಂಡ್ಯ: ವೈದ್ಯಕೀಯ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಹೇಳಿದರು.

Advertisement

ಪ್ರಸಕ್ತ ಸಾಲಿನಲ್ಲಿ ಮಂಡ್ಯ ವೈದ್ಯಕೀಯ ವಿಜ್ಙಾನ ಕಾಲೇಜಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು (15ನೇ ಬ್ಯಾಚ್‌) ಕಾಲೇಜಿನ ಆಡಳಿತ ಮಂಡಳಿ ಸ್ವಾಗತಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಲ್ಲಿ ಪ್ರವೇಶ ಸಿಕ್ಕಿರುವುದು ಅವರ ಕಠಿಣ ಪರಿಶ್ರಮದ ಓದು ಹಾಗೂ ಪೋಷಕರ ಕೊಡುಗೆ ಅಪಾರವಾಗಿದೆ. ಪ್ರತಿ ವಿದ್ಯಾರ್ಥಿಯ ವಿದ್ಯಾ ಭ್ಯಾಸದ ಸಮಯದಲ್ಲಿ ಪೋಷಕರು ಕಾಲೇಜಿಗೆ ಬಂದು ಅವರ ಅಧ್ಯಯನದ ಬಗ್ಗೆ ಹಾಗೂ ವಸತಿ ನಿಲಯದಲ್ಲಿನ ವ್ಯವಸ್ಥೆ ಪರಿಶೀಲಿಸಬೇಕು ಎಂದರು.

ಕೇವಲ ವಿದ್ಯಾರ್ಥಿಗಳು ತರಗತಿಗೆ ಸೇರ್ಪಡೆಗೊಂಡಿ ರುವುದು ಅಷ್ಟೇ ಅಲ್ಲದೆ, ನಿಮ್ಮ ಮಕ್ಕಳ ವೈದ್ಯಕೀಯ ಶಿಕ್ಷಣ  ಪೂರ್ಣಗೊಳ್ಳುವವರೆಗೂ ನಿಮ್ಮ ನಿಗಾ ಇರಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳ ಪ್ರಗತಿಗೆ ಆದ್ಯತೆ: ಪ್ರಾಂಶುಪಾಲ ಡಾ.ಕೆ.ಎಂ.ಶಿವಕುಮಾರ್‌ ಮಾತನಾಡಿ, ಕಾಲೇಜು ನಡೆದುಬಂದ ದಾರಿ,  ರಾಜ್ಯದಲ್ಲೇ ಮಂಡ್ಯ ವೈದ್ಯಕೀಯ ವಿಜಾnನ ಸಂಸ್ಥೆ ಹೆಚ್ಚಿನ ಕಾಳಜಿ ವಹಿಸಿ ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರು ಅವರ ಏಳಿಗೆಗೆ ಶ್ರಮಿಸುತ್ತಾ, ಅನೇಕ ವಿದ್ಯಾರ್ಥಿಗಳಿಗೆ ವೇತನ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಉತ್ತೇಜನ ಪ್ರಶಸ್ತಿ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತಾ, ಆಸ್ಪತ್ರೆಗೆ ಬರುವ ರೋಗಿಗಳ ಸೇವೆಗೆ ಹುರಿದುಂಬಿಸಲಾಗುತ್ತಿದೆ ಎಂದು ಹೇಳಿದರು.

ಶ್ರದ್ಧೆ, ಶ್ರಮದಿಂದ ವಿದ್ಯಾರ್ಜನೆ ಮಾಡಿ: ಮಿಮ್ಸ್ ನ ಆರ್ಥಿಕ ಸಲಹೆಗಾರ ಲಕ್ಷ್ಮೀಕಾಂತ್‌ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆಗೊಂಡ ನಂತರ ಸತತ ನಾಲ್ಕು ವರ್ಷಗಳ ಕಾಲ ಶ್ರದ್ಧೆ, ಕಠಿಣ ಶ್ರಮದಿಂದ ವಿದ್ಯಾರ್ಜನೆ ಮಾಡಬೇಕು. ಬಿದಿರಿನ ಮಾದರಿಯಲ್ಲಿ ಆಳವಾಗಿ ಅಧ್ಯಯನ ಮಾಡಬೇಕು. ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ಕಠಿಣ ಪರಿಶ್ರಮದಿಂದ ಇಡೀ ವಿಶ್ವವೇ ಬೆರಗಾಗುವಂತೆ ಸಾಧನೆ ಮಾಡಿದರು. ಅವರ ತತ್ವಾದರ್ಶಗಳಾದ ಗುರಿ, ಜಾnನ, ಕಠಿಣ ಪರಿಶ್ರಮ ಹಾಗೂ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಇದನ್ನೂ ಓದಿ : ಬಂಡವಾಳಶಾಹಿ ಪರ ಕೇಂದ್ರ ಬಜೆಟ್‌ : ಕೆಪಿಸಿಸಿ ವಕ್ತಾರ ಚಲುವರಾಯಸ್ವಾಮಿ

ಆತಂಕಪಡುವ ಅಗತ್ಯವಿಲ್ಲ: ಮಿಮ್ಸ್‌ ಮುಖ್ಯ ನಿಲಯಪಾಲಕ ಡಾ.ಬಿ.ಆರ್‌.ಹರೀಶ್‌ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಯಾವುದೇ ರ್ಯಾಗಿಂಗ್‌ ಇನ್ನಿತರೆ ಚಟುವಟಿಕೆಗಳನ್ನು ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರಲ್ಲದೆ, ಈ ಬಗ್ಗೆ ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಅಕಾಡೆಮಿಕ್‌ ರಿಜಿಸ್ಟ್ರಾರ್‌ ಡಾ.ಡಿ.ರವಿ, ಡಾ.ರಘುನಾಥ್‌, ಸಹಾಯಕ ನಿಲಯಪಾಲಕರಾದ ಡಾ.ಆರ್‌.ಮನೋಹರ್‌, ಡಾ.ಚೈತ್ರ, ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ್‌, ಕ್ರೀಡಾ ನಿರ್ದೇಶಕ  ಡಾ. ಎಸ್‌.ಎಂ.ಸುರೇಶ್‌ ಮತ್ತಿತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next