Advertisement

ಚುನಾವಣಾ ಅಕ್ರಮಗಳ ತಡೆಗೆ ಕಟ್ಟೆಚ್ಚರ ವಹಿಸಿ

12:37 PM Apr 21, 2018 | Team Udayavani |

ಹಾಸನ: ವಿಧಾನಸಭಾ ಚುನಾವನೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಅಭ್ಯರ್ಥಿಗಳ ಖರ್ಚು ವೆಚ್ಚಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಂದೀಪ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣೆಗಾಗಿ ರಚಿಸಲಾಗಿರುವ ವಿವಿಧ ಸಮಿತಿಗಳ ನೋಡಲ್‌ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಪ್ರತಿಯೊಂದು ಅಂಶವನ್ನೂ ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು. ಎಲ್ಲಾ ನೋಡಲ್‌ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಅಭ್ಯìರ್ಥಿಗಳ ಚುನಾವಣಾ ವೆಚ್ಚಗಳ ಬಗ್ಗೆ ಅತ್ಯಂತ ಹೆಚ್ಚಿನ ಗಮನ ಹರಿಸಬೇಕು. ಚುನಾವಣೆಯ ಜಿಲ್ಲಾ ಲೆಕ್ಕ ವೆಚ್ಚ ಅಧಿಕಾರಿಗಳು ಎಲ್ಲಾ ತಾಲೂಕುಗಳಿಂದ ಪ್ರತಿನಿತ್ಯ ಮಾಹಿತಿ ಪಡೆದು ಕ್ರೂಢೀಕರಿಸಿ ವಿವರ ನೀಡಬೇಕು. ಜಿಲ್ಲಾಧಿಕಾರಿ ಕಚೇರಿಯ ದೂರು ಕೋಶದಲ್ಲಿ ಬರುವ ದೂರುಗಳ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದರು.

ತಾಲೂಕು ಮಟ್ಟದಲ್ಲಿ ಸ್ಥಾಪನೆಯಾಗಿರುವ ದೂರುಕೋಶಗಳಲ್ಲಿ ದಾಖಲಾಗಿರುವ ದೂರುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರೂಢೀಕರಿಸಿ ಕೈಗೊಳ್ಳುವ ಕ್ರಮಗಳ ಬಗ್ಗೆ ಪ್ರತಿ ದಿನ ವಿವರ ಒದಗಿಸಬೇಕು ಎಂದು ದೂರು ನಿರ್ವಹಣಾ ಕೋಶದ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ರಂದೀಪ್‌ ಸೂಚನೆ ನೀಡಿದರು.

ಪೋಸ್ಟಲ್‌ ಬ್ಯಾಲೆಟ್‌ ನಿರ್ವಹಣಾ ಜವಾಬ್ದಾರಿ ಅತ್ಯಂತ ಮಹತ್ವದ್ದು. ಇದನ್ನು ಎಚ್ಚರಿಕೆಯಿಂದ ನಿರ್ವಹಿಸುವಂತೆ ನೋಡಲ್‌ ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಯವರು ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳುವ ಯಾವುದೇ ಸಿಬ್ಬಂದಿ ಮತದಾನದ ಸೌಲಭ್ಯದಿಂದ ವಂಚಿತರಾಗದಂತೆ ಅಥವಾ ಮತದಾನದಿಂದ ಹೊರಗುಳಿಯದಂತೆ ಗಮನ ಹರಿಸಿ ಸ್ವೀಪ್‌ ಸಮಿತಿಯು ಚುನಾವಣಾ ಸಿಬ್ಬಂದಿ ತರಬೇತಿ ಸಂದರ್ಭಗಳಲ್ಲಿ ಹಾಜರಿದ್ದು ಕಡ್ಡಾಯವಾಗಿ ತಮ್ಮ ಹಕ್ಕು ಚಲಾಯಿಸಬೇಕು ಎಂದರು.

Advertisement

ಮಾಧ್ಯಮ ದೃಢೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯು  ಸುದ್ದಿಮಾಧ್ಯಮಗಳಿ ಬರುವ ಜಾಹೀರಾತು ಮತ್ತು ಪಾವತಿ ಸುದ್ದಿಗಳ ಬಗ್ಗೆ ನಿಗಾ ವಹಿಸಬೇಕು ಮತ್ತು ಕಾಲಕಾಲಕ್ಕೆ ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕು. ಸಾಮಾಜಿಕ ಜಾಲತಾಣಗಳ ಬಗ್ಗೆ ವಿಶೇಷ ನಿಗಾ ವಹಿಸಬೇಕಾಗಿದ್ದು ಎನ್‌.ಐ.ಸಿ. ನೇತ„ತ್ವದಲ್ಲಿ ಇದರ ಜವಾಬ್ದಾರಿ ನಿರ್ವಹಣೆಯಾಗಬೇಕಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷೆ ಕೆ.ಎಂ.ಜಾನಕಿ, ಅಪರ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ, ಚುನಾವಣಾ ಜಿಲ್ಲಾ ವೆಚ್ಚ ನಿರ್ವಹಣಾಧಿಕಾರಿ ಜಿ.ರಾಜೇಂದ್ರ ಕುಮಾರ್‌, ಆಹಾರ ಇಲಾಖೆ ಉಪ ನಿರ್ದೇಶಕ ಹಾಗೂ ಬೇಲೂರು ಕ್ಷೇತ್ರದ ಎಂ.ಸಿ.ಸಿ. ನೋಡಲ್‌ ಅಧಿಕಾರಿ, ಎನ್‌.ಎಸ್‌.ಶ್ರೀಕಂಠಮೂರ್ತಿ, ಡಿ.ಇ.ಎಂ.ಪಿ. ನೋಡಲ್‌ ಅಧಿಕಾರಿ ಸಿದ್ದರಾಜು, ವಾರ್ತಾಧಿಕಾರಿ ವಿನೋದ್‌ಚಂದ್ರ, ಎನ್‌.ಐ.ಸಿ. ಜಿಲ್ಲಾ ಇನ್‌ರೆಟಿಕ್‌ ಅಧಿಕಾರಿ ಸತ್ಯಮೂರ್ತಿ, ಪೋಸ್ಟಲ್‌ ಬ್ಯಾಲೆಟ್‌ ಸೆಕ್ಷನ್‌ ಅಧಿಕಾರಿ ಎಂ. ಜಿನೇಂದ್ರ ಎಂ., ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಕುಲಕರ್ಣಿ,  ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ವೇಮರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next