Advertisement

ಗುಂಗುರು ಕೂದಲಿನ ಆರೈಕೆ ಹೀಗಿರಲಿ

01:23 AM Jan 07, 2020 | Sriram |

ಗುಂಗುರು ಕೂದಲು ಹುಡುಗಿಯರಿಗೆ ಸೌಂದರ್ಯವನ್ನು ನೀಡುತ್ತದೆ. ಆದರೆ ಇದರ ನಿರ್ವಹಣೆ ತುಂಬಾ ಕಷ್ಟ. ಕೆಳಗಿನಿಂದ ಬಾಚಿಕೊಳ್ಳಿ ಗುಂಗುರು ಕೂದಲಿನ ಗಂಟುಗಳನ್ನು ಬಿಡಿಸಿಕೊಳ್ಳಲು ಕೂದಲಿನ ಕೆಳ ಭಾಗದಿಂದ ಬಾಚುತ್ತಾ ಬರಬೇಕು. ವಿಶಾಲ ಹಲ್ಲಿನ ಬಾಚಣಿಗೆಯನ್ನು ಬಳಸುವುದು ಉತ್ತಮ.

Advertisement

ಎಣ್ಣೆ ಬಳಸಿ
ಕೂದಲು ಒದ್ದೆಯಾಗಿರುವಾಗ ಗುಂಗುರು ಕೂದಲಿಗೆಂದೇ ಇರುವ ಉತ್ಪನ್ನಗಳನ್ನು ಅನ್ವಯಿಸಿ. ಇದು ತೇವಾಂಶವನ್ನು ಲಾಕ್‌ ಮಾಡಲು ಮತ್ತು ನಿಮ್ಮ ಸುರುಳಿಗಳನ್ನು ದಪ್ಪ ಮತ್ತು ಕಾಂತಿಯುತವಾಗಿಡಲು ಸಹಾಯ ಮಾಡುತ್ತದೆ. ಸುಂದರವಾಗಿ ಆರೋಗ್ಯಕರವಾಗಿ ಕಾಣುವ ಕೂದಲಿಗೆ ಡವ್‌ ಎರ್ಲಿಕ್ಸ್‌ ಪೌಷ್ಟಿಕ ಶೈನ್‌ ಹೇರ್‌ ಆಯಿಲ್‌ ಬಳಕೆಯಿಂದ ಕೂದಲಿಗೆ ಹೊಳಪನ್ನು ನೀಡುತ್ತದೆ.

ನಿಯಮಿತ ಟ್ರಿಮ್‌ ಮಾಡಿ
ಗುಂಗುರು ಕೂದಲಿನ ತುದಿ ಹೆಚ್ಚಾಗಿ ಒಡೆಯುತ್ತದೆ. ಹಾಗಾಗಿ ಗುಂಗುರು ಕೂದಲು ಹೊಂದಿರುವವರು ಕನಿಷ್ಠ 6-8 ವಾರಗಳಿಗೊಮ್ಮೆ ಕೂದಲಿನ ತುದಿಯನ್ನು ಟ್ರಮ್‌ ಮಾಡಿಕೊಳ್ಳಿ.

ಅದರಷ್ಟಕ್ಕೆ ಬಿಟ್ಟು ಬಿಡಿ
ನೀವು ಎಷ್ಟು ಸುರುಳಿಯಾಕಾರದ ಕೂದಲನ್ನು ನಿರ್ವಹಿಸುತ್ತೀರೋ ಅಷ್ಟೇ ಘರ್ಷಣೆಯನ್ನು ಕಡಿತಗೊಳಿಸುವುದು ಮುಖ್ಯ. ಆದ್ದರಿಂದ ಒದ್ದೆಯಾದ ಕೂದಲನ್ನು ಟೆರ್ರಿ ಬಟ್ಟೆಯ ಟವಲಿನಿಂದ ಉಜ್ಜುವುದನ್ನು ನಿಲ್ಲಿಸಿ ಮತ್ತು ಬದಲಿಗೆ ಅದನ್ನು ಮೈಕ್ರೊಫೈಬರ್‌ ಬಟ್ಟೆಯಿಂದ ಉಜ್ಜಿಕೊಳ್ಳಿ.

-   ಪೂರ್ಣಿ

Advertisement
Advertisement

Udayavani is now on Telegram. Click here to join our channel and stay updated with the latest news.

Next