ಕೊಲ್ಲೂರು: ಶಿಕ್ಷಣ ಕ್ಷೇತ್ರದಲ್ಲಿ ವಿಫುಲವಾದ ಅವಕಾಶವಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಅದನ್ನು ಅವಕಾಶವನ್ನು ಸದ್ಭಳಕೆ ಗೊಳಿಸುವುದರೊಡನೆ ಸಮಾಜದ ಉನ್ನತ ಸ್ಥಾನದಲ್ಲಿ ಬೆಳಗಬೇಕು. ಅಂಕ ಗಳಿಸುವುದರೊಡನೆ ಸಮಾಜಮುಖೀಯಾಗಿ ಜನಪರ ಕಾಳಜಿಯೊಡನೆ ಸೇವೆ ಸಲ್ಲಿಸುವ ಮನೋಭಾವನೆ ಬೆಳೆಸುವುದರ ಮೂಲಕ ಜನಾನುರಾಗಿಯಾಗಬೇಕು. ಶಿಕ್ಷಣ ಕ್ಷೇತ್ರದಲ್ಲಿ ಲಭ್ಯವಿರುವ ಸರಕಾರದ ಸವಲತ್ತನ್ನು ಸದುಪಯೋಗಪಡಿಸಬೇಕು ಎಂದು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ, ನಾಡೋಜ ಡಾ| ಜಿ. ಶಂಕರ್ ಹೇಳಿದರು.
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಕುಂದಾಪುರ ಶಾಖೆ ವತಿಯಿಂದ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಳ ಸಭಾಂಗಣದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯಮಿ ಕೋಟ ಆನಂದ ಸಿ. ಕುಂದರ್ ಮಾತನಾಡಿ ಜೀವನದಲ್ಲಿ ಮಾನವೀಯ ಮೌಲ್ಯವನ್ನು ಬೆಳೆಸುವುದರ ಮೂಲಕ ಸುಸಂಸ್ಕೃತ ನಾಗರಿಕರಾಗಿ ಸಮಾಜಮುಖೀಯಾಗಿ ಬೆಳೆಯಬೇಕೆಂದರು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಅಧ್ಯಕ್ಷ ಕೆ.ಕೆ. ಕಾಂಚನ್ ಅಧ್ಯಕ್ಷತೆ ವಹಿಸಿದ್ದರು .
ಕುಂದಾಪುರ ಚಿನ್ಮಯಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ| ಉಮೇಶ್ ಪುತ್ರನ್, ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಮಹಾಬಲ ಕುಂದರ್, ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಉಪಾಧ್ಯಕ್ಷ ಪುಂಡಲೀಕ ಬಂಗೇರ, ಕಾರ್ಯದರ್ಶಿ ಸುರೇಶ್ ವಿಠಲವಾಡಿ, ಮಾಜಿ ಅಧ್ಯಕ್ಷ ಹಿರಿಯಣ್ಣ ಚಾತ್ರಬೆಟ್ಟು, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಗಣೇಶ್ ಕಾಂಚನ್ ಪಾಲ್ಗೊಂಡಿದ್ದರು.
ಶಾಖಾ ಘಟಕಗಳ ಅಧ್ಯಕ್ಷ ರಮೇಶ್ ಟಿ.ಟಿ., ಮಂಜುನಾಥ ಚಂದನ್ ನೆಂಪು, ಗಂಗಾಧರ್, ಶ್ರೀಧರ್ ಮೆಂಡನ್, ಕೃಷ್ಣ ಪುತ್ರನ್ ಆರ್ಡಿ ಮತ್ತಿತರರು ಉಪಸ್ಥಿತರಿದ್ದರು. ಸಿಎ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ರೋಹಿತ್ ಆರ್. ಶ್ರೀಯಾನ್ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ರೋಹಿತ್, ಶ್ರೀಲಕ್ಷ್ಮಿà, ನವೀನ್, ಸುಶ್ಮಿತಾ ಬಿ.ಎಸ್., ಪೂರ್ಣಿಮಾ, ದೀಪ್ತಿ ಕುಂದರ್, ಸುಕನ್ಯಾ, ಪ್ರೀತಿ ಆರ್., ಶƒತಿ, ಸುಮಂತ ಹಾಗೂ ಪ್ರಶಸ್ತಿ ಅವರನ್ನು ಸಮ್ಮಾನಿಸಲಾಯಿತು.
ಸದಸ್ಯ ರಾಜೀವ ಶ್ರೀಯಾನ್ ಸ್ವಾಗತಿಸಿ, ಶಿಕ್ಷಕ ಪಾಂಡುರಂಗ ಕಾರ್ಯಕ್ರಮ ನಿರೂಪಿಸಿದರು. ಘಟಕಗಳ ಪದಾದಿಕಾರಿಗಳು ಮಹಾಜನ ಸೇವಾ ಸಂಘದ ಅಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.