Advertisement

ಬೆಂಕಿ ಅವಘಡ ಎಚ್ಚರ ವಹಿಸಿ ಅಪಾಯ ತಪ್ಪಿಸಿ

01:00 AM Feb 25, 2019 | Harsha Rao |

ಉಡುಪಿ: ವಿವಿಧೆಡೆ ಬೆಂಕಿ ಅವಘಡಗಳು ಸಂಭವಿಸುತ್ತಿವೆ. ಕಾರಣಗಳು ಅನೇಕವಿದ್ದರೂ ಜಾಗರೂಕತೆಯನ್ನು ಪಾಲಿಸಿದರೆ ನಿಯಂತ್ರಣ ಸಾಧ್ಯವಿದೆ. ಅಗ್ನಿ ಅವಘಡಗಳಲ್ಲಿ ಸಂಭವಿಸಬಹುದಾದ ಸಾವು-ನೋವು, ಆಸ್ತಿಪಾಸ್ತಿಗಳ ನಷ್ಟದ ಕುರಿತು ಮತ್ತು ಅಗ್ನಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಗ್ನಿಶಾಮಕ ಇಲಾಖೆಯು ಆಗಾಗ ಅಣಕು ಪ್ರದರ್ಶನ, ಉಪನ್ಯಾಸ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತದೆ. 

Advertisement

ಜಾಗೃತಿ ಅಗತ್ಯ
ಅಗ್ನಿ ಅವಘಡ ಸಂಭವಿಸಿದಾಗ ಏನು ಮಾಡಬೇಕು, ಎಂಬ ಅರಿವು ಜನರಲ್ಲಿದ್ದರೆ ಸಣ್ಣ ಪುಟ್ಟ ಬೆಂಕಿಯನ್ನು ಸ್ವತಃ ನಿಯಂತ್ರಿಸಲು ಸಾಧ್ಯ. ಸಾರ್ವಜನಿಕರಲ್ಲಿ ಸಾಮಾಜಿಕ ಬದ್ಧತೆ ಇರಬೇಕು. 18ರಿಂದ 20 ಪ್ರಕರಣಗಳು ಏಕಕಾಲಕ್ಕೆ ಉಂಟಾದಾಗ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್‌. 

ಮಾಲ್‌ಗ‌ಳಲ್ಲಿ ಅವಘಡ 
ಎಕ್ಸಾಸ್ಟ್‌ ಪೈಪ್‌ಗ್ಳನ್ನು ಸ್ವತ್ಛಗೊಳಿಸದೆ ಇರುವು ದರಿಂದ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಬಾಟಲ್‌, ಪೇಪರ್‌ಗಳ ಅಸಮರ್ಪಕ ನಿರ್ವಹಣೆಯಿಂದ ಇಂಥ ಸಮಸ್ಯೆ ಉಂಟಾಗುತ್ತದೆ. ಮಾಲ್‌ಗ‌ಳಲ್ಲಿ ಸುಲಭ ವಾಗಿ ಬೆಂಕಿ ಹೊತ್ತಿಕೊಳ್ಳುವ ಥರ್ಮಾಕೋಲ್‌, ಪ್ಲೆ„ವುಡ್‌ ಇತ್ಯಾದಿಗಳು ಇಂಟೀರಿಯರ್‌ ಡಿಸೈನ್‌ಗಳಿಗೆ ಬಳಕೆ ಯಾಗುತ್ತವೆ. ಇದರಿಂದಲೂ ಸಮಸ್ಯೆಯಾಗುತ್ತದೆ.

ಪರಿಹಾರ
ಮಾಲ್‌ ನಿರ್ಮಾಣ ಸಂದರ್ಭದಲ್ಲಿ ಮುಖ್ಯ ಅಗ್ನಿಶಾಮಕ ಅಧಿಕಾರಿಗಳು ಎನ್‌ಒಸಿ ಕೊಡುತ್ತಾರೆ. ನ್ಯಾಷನಲ್‌ ಬಿಲ್ಡಿಂಗ್‌ ಕೋಡ್‌ ಪ್ರಕಾರ ಕಟ್ಟಡಗಳು ಸೂಕ್ತ ಮುನ್ನೆಚ್ಚರಿಕೆ ಸಲಕರಣೆಗಳನ್ನು ಇರಿಸಿಕೊಳ್ಳುವುದು ಕಡ್ಡಾಯ. ಬೆಂಕಿಯನ್ನು ನಂದಿಸುವ‌ ಎಲ್ಲ ಪರಿಕರಗಳು ಇರಬೇಕು. ನಿರ್ಗಮನ ದಾರಿಯ ಸೂಚನೆ ಸಹಿತ ಪ್ರತಿಯೊಂದು ವ್ಯವಸ್ಥೆ ಇರಬೇಕಾಗುತ್ತದೆ. ಜಿಲ್ಲೆಯ ಇನ್ನೂ ಕೆಲವು ಮಾಲ್‌ಗ‌ಳು ಎನ್‌ಒಸಿ ಪಡೆದರೂ ಕ್ಲಿಯರೆನ್ಸ್‌ ತೆಗೆದುಕೊಳ್ಳುತ್ತಿಲ್ಲ. ಇದು ಸಮಸ್ಯೆಗೆ ಮೂಲ ಕಾರಣ. ಎನ್‌ಒಸಿ ಪಡೆಯದಿದ್ದರೆ ಸಂಸ್ಥೆಯ ಮಾಲಕರ ವಿರುದ್ಧ ಪ್ರಕರಣ ದಾಖಲಿಸಬಹುದಾದ ಕಾನೂನು ಇದೆ. ಉಡುಪಿ ಜಿಲ್ಲೆಯಲ್ಲೂ ಕೆಲವು ಮಾಲ್‌ಗ‌ಳು ಇನ್ನೂ ಅಗ್ನಿಶಾಮಕ ಎನ್‌ಒಸಿ ಪಡೆದುಕೊಂಡಿಲ್ಲ. ಇಲ್ಲಿ ಜನರ ಕ್ಷೇಮ ಮುಖ್ಯವಾಗಿದ್ದು, ಇಂತಹ ಪ್ರಕರಣ ಉಂಟಾದಾಗ ಜನರು ಜಾಗೃತರಾಗಬೇಕು.

ಮನೆ ಸುತ್ತಮುತ್ತ ಸ್ವತ್ಛತೆ ಇರಲಿ
ಉಡುಪಿಯಲ್ಲಿ ಜನವರಿಯಿಂದೀಚೆಗೆ 110 ಅಗ್ನಿ ಅವಘಡಗಳು ಸಂಭವಿಸಿವೆ. ಮಲ್ಪೆಯಲ್ಲಿ 40 ಅಗ್ನಿ ಅವಘಡಗಳಾಗಿವೆ. ಒಣಗಿರುವ ಹುಲ್ಲು, ಎಲೆಗಳಿಂದ ಬೆಂಕಿ ಶೀಘ್ರ ಪಸರಿಸುವ ಸಾಧ್ಯತೆ ಇರುತ್ತದೆ. ಮನೆ ಸುತ್ತಮುತ್ತ ಸ್ವತ್ಛವಾಗಿಟ್ಟುಕೊಂಡರೆ ಅಪಾಯ ತಪ್ಪುತ್ತದೆ. 
-ವಸಂತ ಕುಮಾರ್‌, ಉಡುಪಿ ಜಿಲ್ಲಾ  ಅಗ್ನಿಶಾಮಕ ಅಧಿಕಾರಿ

Advertisement

ಜನರಲ್ಲಿ ಜಾಗೃತಿ
ಶಾಲೆ, ಕಾಲೇಜುಗಳಲ್ಲಿ ತಿಂಗಳಿಗೆ 25 ಜಾಗೃತಿ ತರಗತಿಗಳನ್ನು ನೀಡಲಾಗುತ್ತಿದೆ. ಗ್ಯಾಸ್‌ ಸೋರಿಕೆ ಆದಾಗ, ಬೆಂಕಿ ತಗುಲಿ ದಾಗ ಸಿಲಿಂಡರ್‌ ಸ್ಫೋಟ ಆಗುವ ಸಾಧ್ಯತೆ ಇರುತ್ತದೆ. 

ಸಣ್ಣ ಪುಟ್ಟ ಅಂಗಡಿಗಳು
ಸಣ್ಣಪುಟ್ಟ ಅಂಗಡಿಗಳು ಕೂಡ ಫೈರ್‌ ಎಕ್ಸ್‌ಟಿಂಗ್ವಿಶರ್‌  ಇಟ್ಟುಕೊಳ್ಳಬೇಕು. ಇದು ಸುಮಾರು 1,500 ರೂ. ದರದಿಂದ ಲಭ್ಯವಿದೆ. 

ಅಡುಗೆ ಅನಿಲ ನಿರ್ವಹಣೆ
ಅಡುಗೆ ಅನಿಲದ ಕೊಳವೆಯನ್ನು 2 ವರ್ಷಕ್ಕೊಮ್ಮೆ ಬದಲಾಯಿಸಬೇಕು. ರಾತ್ರಿ ರೆಗ್ಯುಲೇಟರ್‌ ಆಫ್ ಮಾಡಬೇಕು. ಟ್ಯೂಬ್‌ ಮೇಲೆ ಬಿದ್ದಿರುವ ಆಹಾರ ಪದಾರ್ಥಗಳನ್ನು ಒ¨ªೆ ಬಟ್ಟೆಯಿಂದ ಸ್ವತ್ಛಗೊಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next