ಆನೇಕಲ್: ಮನುಷ್ಯ ನಿರಂತರವಾಗಿ ಎಚ್ಚರದಿಂದ ಇದ್ದರೆ ಕಾಯಿಲೆಗಳು ಆತನ ಬಳಿ ಸುಳಿಯುವುದಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾ ಕಾರ್ಯ ನಿರ್ವಾಹಕ ಡಾ. ಶ್ರೀನಿವಾಸ್ ಹೇಳಿದರು.
ತಾಲೂಕಿನ ಅತ್ತಿಬೆಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಲೇರಿಯಾ ದಿನಾಚರಣೆ ಹಾಗೂ ಡೆಂಘೀ ಮಲೇರಿಯಾ ಮಾಸಾಚರಣೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮನುಷ್ಯ ಕಾಯಿಲೆ ಬಂದ ಮೇಲೆ ಎಚ್ಚರ ವಹಿಸುವ ಬದಲು ಕಾಯಿಲೆ ಬರುವ ಮೊದಲೇ ಜಾಗೃತರಾದರೆ ಉತ್ತಮ ಆರೋಗ್ಯ ಹೊಂದಬಹುದು. ಮನೆಯ ಸುತ್ತ ಮತ್ತು ಮನೆ ಒಳಗಿನ ಜಾಗವನ್ನು ಸ್ವಚ್ಛವಾಗಿ ಇರಿಸಿಕೊಂಡು ಶುದ್ಧ ನೀರು ಸೇರಿದಂತೆ ಉತ್ತಮ ಆಹಾರ ಸೇವಿಸುವುದರಿಂದ ಮನುಷ್ಯ ಉತ್ತಮ ಆರೋಗ್ಯದಿಂದ ಇರಬಹುದು. ಬೆಂಗಳೂರು ನಗರ ಹಾಗೂ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮಲೇರಿಯಾ ಸುಧಾರಣೆ ಯಾಗಿದೆ. ಆದರೆ ಇತ್ತೀಚೆಗೆ ಕೆಲವು ಕಡೆ ಡೆಂಘೀ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈ ಮಾರಕ ಕಾಯಿಲೆ ಸೊಳ್ಳೆಗಳಿಂದ ಮಾತ್ರ ಬರುತ್ತದೆ. ಶುದ್ಧ ನೀರಿನಲ್ಲಿ ಉತ್ಪತ್ತಿಯಾಗುವ ಈ ಸೊಳ್ಳೆಗಳು ಮನುಷ್ಯನನ್ನು ಕಚ್ಚುವುದರಿಂದ ಡೆಂಘೀ ಬರುತ್ತದೆ. ನಿಮ್ಮ ಮನೆಗಳಲ್ಲಿ ಹಾಗೂ ಸುತ್ತ-ಮುತ್ತಲು ತೆರೆದ ವಸ್ತುಗಳಲ್ಲಿ ಶುದ್ಧ ನೀರನ್ನು ಶೇಖರಿಸಿಡುವುದರಿಂದ ಈ ಸೊಳ್ಳೆಗಳು ಉತ್ಪತ್ತಿಯಾಗಿ ಬರುತ್ತದೆ. ಆದುದರಿಂದ ಶುದ್ಧ ನೀರನ್ನು 3 ದಿನಗಳಿಗಿಂತ ಹೆಚ್ಚಿಗೆ ಬಳಸಬಾರದು ಎಂದು ಸಲಹೆ ನೀಡಿದರು.
ಅತ್ತಿಬೆಲೆ ವೈದ್ಯಾಧಿಕಾರಿ ಡಾ. ನಿರ್ಮ ಲಾದೇವಿ ಮಾತನಾಡಿ, ನಮ್ಮ ವ್ಯಾಪ್ತಿ ಯಲ್ಲಿ ಮಲೇರಿಯಾ ನಿರ್ಮೂಲ ವಾಗಿದೆ. ಆದರೂ ಮಲೇರಿಯಾ, ಡೆಂಘೀ ಆಗಲಿ, ಹರಡದಂತೆ ಮುಂಜಾ ಗ್ರತೆ ಕ್ರಮ ವಹಿಸಲಾಗುತ್ತಿದೆ. ಅತ್ತಿಬೆಲೆ ವ್ಯಾಪ್ತಿಯ ಬಿದರಗುಪ್ಪೆ, ಇಂಡ್ಲ ಬೆಲೆ, ಚಿಕ್ಕನಹಳ್ಳಿ, ಅರೇನೂರು, ಜಿಗಳ, ಸಿಲ್ಕ್ ಪಾರಂ ಗ್ರಾಮಗಳಲ್ಲಿ ಸುಮಾರು 36 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಎಲ್ಲಾ ಕಡೆ ಆಶಾ ಕಾರ್ಯ ಕರ್ತೆಯರು ಮನೆ ಮನೆಗೆ ತೆರಳಿ ಸ್ವಚ್ಛತೆಯ ಬಗ್ಗೆ ಮತ್ತು ಡೆಂಘೀ ಹರಡದಂತೆ ಮುನ್ನೆಚ್ಚರಿಕ್ಕೆ ಕ್ರಮಗಳನ್ನು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಜಿಪಂ ಸದಸ್ಯೆ ಮಮತಾ ಜಯಕೃಷ್ಣ, ಬಿಜೆಪಿ ಮುಖಂಡ ಬಿದರಗುಪ್ಪೆ ಗ್ರಾಪಂ ಸದಸ್ಯ ಜಯಕೃಷ್ಣ, ಡಿಎಚ್ಇಒ ನಾಗ ರಾಜು, ಬಿಎಚ್ಇಒ ನರೇಶ್, ಆರೋಗ್ಯ ಅಧಿಕಾರಿಗಳಾದ ರಾಧಾ, ವರಲಕ್ಷ್ಮೀ, ಶಿಲ್ಪಾ ಮತ್ತು ಆಶಾ ಕಾರ್ಯರ್ತೆಯರು ಶಾಲಾ ಮಕ್ಕಳು ಹಾಜರಿದ್ದರು.