Advertisement
ದೊಡ್ಡಕುಂಚೆ ಸಮುದಾಯ ಆರೋಗ್ಯಕೇಂದ್ರ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಶಾಲೆಯ ಸಂಯುಕ್ತಾಶ್ರಯದಲ್ಲಿ, ಶಾಲೆಯ ಸಭಾಂಗಣದಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿಧ ಬಗೆಯ ಜ್ವರಗಳು ಹಾಗೂ ಅವುಗಳ ನಿಯಂತ್ರಣ ಕುರಿತ ಆರೋಗ್ಯ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
ಮುಂಜಾಗ್ರತೆ ವಹಿಸಿ: ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಮೇಲ್ವಿಚಾರಕ ಕೆ.ವಿನಯ್ ಮಾತನಾಡಿ, ಡೆಂಘೀ ಪ್ರಕರಣಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಮುಂಜಾಗ್ರತೆ ಅನುಸರಿಸದಿದ್ದರೆ ಸಾವು ಸಂಭವಿಸಬಹುದು. ಆದ್ದರಿಂದ ವಿವಿಧಜಾತಿಯ ಸೊಳ್ಳೆಗಳು ರೋಗಗಳನ್ನು ಹರಡುವುದರಿಂದ ತಮ್ಮ ಪಠ್ಯ ಪುಸ್ತಕದಲ್ಲಿ ಬರುವ ರೋಗಗಳ ಜೀವನಚರಿತ್ರೆಯ ಬಗ್ಗೆ ತಿಳಿದುಕೊಂಡು ನಮ್ಮ ಪರಿಸರದ ಬಗ್ಗೆ ಕಾಳಜಿವಹಿಸಿ ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನಹರಿಸಬೇಕೆಂದರು.
ಮಂಗನ ಕಾಯಿಲೆ ಬಗ್ಗೆ ಮಾಹಿತಿ: ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಸಾಂಕ್ರಾಮಿಕ ರೋಗಗಳ ವಿಭಾಗದ ಲಕ್ಷ್ಮಣಗೌಡ ಮಂಗನ ಕಾಯಿಲೆ ಮಾಹಿತಿ ನೀಡಿ, 1957 ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ ಪತ್ತೆಯಾದ್ದರಿಂದ ಈ ರೋಗಕ್ಕೆ ಕ್ಯಾಸನೂರು ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ ಎಂದು ಕರೆಯಲಾಗುತ್ತದೆ.
ಸೋಂಕಿತ ಉಣ್ಣೆಗಳು ಮಂಗವನ್ನು ಆಶ್ರಯಿಸಿದ್ದಲ್ಲಿ ಮಂಗಗಳು ರೋಗಕ್ಕೆಗುರಿಯಾಗಿ ಮಂಗಗಳು ಸತ್ತನಂತರ ಅವುಗಳ ದೇಹದಿಂದ ಬೇರ್ಪಟ್ಟು ಎಲೆಗಳ ಅಡಿಯಲ್ಲಿ ಸೇರಿಕೊಳ್ಳುವ ಈ ವೈರಾಣು ಹೊಂದಿದ ಉಣ್ಣೆಗಳು ಆ ಪ್ರದೇಶದತ್ತ ಸುಳಿಯುವ ಜಾನುವಾರಗಳು ಹಾಗೂ ಸಾರ್ವಜನಿಕರಿಗೆ ಆಶ್ರಯಿಸಿ ರೋಗಹರಡುತ್ತದೆ ಎಂದರು.
ಪ್ರಾಣಿ, ಪಕ್ಷಿಗಳು ಅದರಲ್ಲೂ ಬಾವಲಿಗಳು ಕಚ್ಚಿತಿಂದಂತಹ ಹಣ್ಣುಗಳನ್ನು ತಿನ್ನುವುದರಿಂದ ನಿಫಾ ವೈರಸ್ ಕಾಯಿಲೆ ಬರುವುದರಿಂದ ಮುಂಜಾಗ್ರತೆ ವಹಿಸಿ ಎಂದರು. ಹಳೆಕೋಟೆ ಹಿರಿಯ ಆರೋಗ್ಯ ಸಹಾಯಕ ಆರ್.ಬಿ.ಪುಟ್ಟೇಗೌಡ ಕುಷ್ಠರೋಗದ ಬಗ್ಗೆ ಮಾಹಿತಿ ನೀಡಿದರು. ಕ್ಷಯ, ಎಚ್‌ಐವಿ, ಅಂಧತ್ವ, ಜಂತುಹುಳು, ಹೀಗೆ ಅನೇಕ ರೋಗಗಳ ಬಗ್ಗೆ ಮಾಹಿತಿಗಳನ್ನು ಶಾಲಾ ಮಕ್ಕಳಿಗೆ ಆರೋಗ್ಯ ಇಲಾಖೆ ಅರಿವು ಮೂಡಿಸುತ್ತಿದೆ ಎಂದರು.
ಶಾಲೆಯ ಶಿಕ್ಷಕ ಮಂಜಪ್ಪ ಮಾತಾಡಿ ಭಾರತದಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಪರಿಸರ ಮಾಲಿನ್ಯವೂಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇವೆರಡರ ಜೊತೆ ಆಶ್ಚರ್ಯಪಡುವಂತಹ ಕಂಡು ಕೇಳರಿಯದ ಕೆಲವು ಖಾಯಿಲೆಗಳು ಸಂಭವಿಸುತ್ತಿವೆ ಎಂದು ತಿಳಿಸಿ, ಈ ಬಗ್ಗೆ ವಿದ್ಯಾರ್ಥಿಗಳು ಸಮುದಾಯದ ಜನರು ಎಚ್ಚೆತ್ತುಕೊಳ್ಳುವಂತೆ ಮಾಡಬೇಕಿದೆ ಎಂದರು.
ಶಿಕ್ಷಕ ಕೃಷ್ಣೇಗೌಡ, ಎಸ್.ಸಿ. ಸತ್ತೀಗೌಡ, ಸಿ.ಬಿ.ಪುಟ್ಟರಾಜು, ಎಚ್.ಎಸ್.ಲಕ್ಷ್ಮೀಶ, ಶಿಕ್ಷಕಿಯರಾದ ರೇಖಾ, ಅನುಸೂಯ, ಬಿ.ರಾಧ ಹಿರಿಯ ಆರೋಗ್ಯ ಸಹಾಯಕಿ ಪ್ರೇಮಲತಾ, ಆರೋಗ್ಯ ಸಹಾಯಕರಾದ ರಾಜು, ಸ್ವಾಮಿ, ಸೋಮುಶೇಖರ್, ಜೆ.ಟಿ.ಸ್ವಾಮಿ, ಶ್ರುತಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.