ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆಯ ಅಂಗಸಂಸ್ಥೆ ಚಾರಿಟೆಬಲ್ ಟ್ರಸ್ಟ್ ನ ಮಹತ್ವದ “ರೋಟಾಲೇಕ್’ ಯೋಜನೆಯಡಿ, ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸುದರ್ಶನ ಉಗ್ಗುಗುತ್ತು ಮೂಡುಬಿದಿರೆ ಇವುಗಳ ಸಹಭಾಗಿತ್ವದಲ್ಲಿ 8.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸುಭಾಷ್ ನಗರ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಗಾಂಧೀ ಜಯಂತಿಯಂದು ಬಾಗಿನ ಸಮರ್ಪಿಸಿ, ಲೋಕಾರ್ಪಣೆಗೊಳಿ ಸಿ ದರು.
ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತ ನಾಡಿ, ಸ್ವಾತಂತ್ರ್ಯ ಲಭಿಸಿದ ಅನಂತರ ನಾವು ಕೆರೆ, ಮದಕ, ಬಾವಿಗಳನ್ನು ಮರೆಯತೊಡಗಿ ಸರ ಕಾರದ ನಳ್ಳಿನೀರಿಗೇ ಅವಲಂಬಿತರಾಗ ತೊಡ ಗಿದ ಕಾರಣ ನಮ್ಮ ಜಲ-ಮೂಲ ನಾಶವಾಗತೊಡಗಿತು. ಮತ್ತೆ ನಾವು ಈ ಎಲ್ಲ ಜಲಮೂಲಗಳನ್ನು ಉಳಿಸಿ, ಜಲ ಸಂವರ್ಧನೆಗಾಗಿ ಪಣತೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸುಭಾಷ್‌ನಗರ ಕೆರೆಯು ಜೀವಂತವಾಗಿ ಸದಾ ಈ ಭಾಗದ ಜನರಿಗೆ ಉಪಯುಕ್ತವಾಗಿ ಒದಗಿಬರಲಿ. ಇಂಥ ಕಾಮಗಾರಿಗಳಿಂದ ಕೃಷಿಕಾರ್ಯಕ್ಕೆ ಅನುಕೂಲವಾಗಲಿದೆ; ಬಾವಿ, ಬೋರ್‌ವೆಲ್‌ಗಳ ಜಲ ಸಂಪತ್ತೂ ವೃದ್ಧಿಯಾಗುವುದು. ಸರಕಾರಿ ಯೋಜನೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಕೆರೆಯ ಕೆಲಸ ನಡೆದಿದೆ ಇದೊಂದು ದೈವಿಕ ಕಾರ್ಯ ಎಂದು ಅಭಿನಂದನೆ ಸಲ್ಲಿಸಿದರು.
ರೋಟರಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ| ಮುರಳೀಕೃಷ್ಣ ವರುಸ್ವಾಗತಿಸಿ ಪ್ರಸ್ತಾವಿಸಿ, ಸುಭಾಷ್‌ನಗರ ಕೆರೆಗೆ ನಿರ್ಮಾಣಕ್ಕೆ ಡಾ| ಹೆಗ್ಗಡೆಯವರು ಎಸ್‌ಕೆಡಿಆರ್‌ಡಿಪಿ ಮೂಲಕ 3 ಲಕ್ಷ ರೂ. ಅನುದಾನವನ್ನು ನೀಡಿರುವುದಕ್ಕೆ ಕೃತಜ್ಞತೆ ಸಮರ್ಪಿಸಿದರು.
ಟ್ರಸ್ಟ್ ಕಾರ್ಯದರ್ಶಿ ಡಾ| ಹರೀಶ್ ನಾಯಕ್ ನಿರೂಪಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ, ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಚ್. ಅಬ್ದುಲ್ ಗಪೂರ್, ಕಾರ್ಯದರ್ಶಿ ನಾಗರಾಜ್ ಬಿ., ತಹಶೀಲ್ದಾರ್ ಅನಿತಾಲಕ್ಷ್ಮೀ, ಪುರಸಭಾ ಮುಖ್ಯಾಧಿಕಾರಿ ಇಂದೂ ಎಂ., ಪರಿಸರ ಅಭಿಯಂತರೆ ಶಿಲ್ಪಾ ಎಸ್., ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ, ಪಿ.ಕೆ. ಥೋಮಸ್, ಸುರೇಶ್ ಕೋಟ್ಯಾನ್, ಮಾಜಿ ಸದಸ್ಯೆ ರಮಣಿ, ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಪುರಸ್ಕಾರ
ಕೆರೆಯ ಹೂಳುಮಣ್ಣನ್ನು ಸ್ವಯಂಸ್ಫೂರ್ತಿಯಿಂದ ಹೊರಸಾಗಿಸಿ ಕಾಮಗಾರಿಗೆ ಮಹತ್ವದ ಕೊಡುಗೆ ನೀಡಿದ ಉಗ್ಗುಗುತ್ತು ಮನೆಯ ದೇವು ಶೆಟ್ಟಿ ಹಾಗೂ ಕೆರೆಗೆ ಹೋಗುವ ಹಾದಿಯನ್ನು ತಮ್ಮ ಖಾಸಗಿ ಜಾಗದಲ್ಲಿ ಉಚಿತವಾಗಿ ತೆರೆದುಕೊಟ್ಟಿರುವ ಕೃಷ್ಣ ದೇವಾಡಿಗ-ಶಂಕರಿ ದಂಪತಿಯನ್ನು ಡಾ| ಹೆಗ್ಗಡೆಯವರು ಪುರಸ್ಕರಿಸಿದರು.