Advertisement
ಮಳೆಯ ಸಂದರ್ಭದಲ್ಲಿ ಹೆಚ್ಚು ನೀರು ರಾಜಕಾಲುವೆಗಳಲ್ಲಿ ಹರಿಯುವ ಜೊತೆಗೆ ಕೆಲ ವಾಸ ಪ್ರದೇಶ/ ಬಡಾವಣೆಗಳಲ್ಲಿ ನೀರು ಹರಿಯಲಿದ್ದು, ಆ ಅನಾಹುತಗಳು ತಪ್ಪಿಸುವ ಸಲುವಾಗಿ ಜಂಟಿಯಾಗಿ ಸಭೆ ನಡೆಸಿ ತುರ್ತು ಅಗತ್ಯ ಕ್ರಮ ಜರೂರು ವಹಿಸಲು ಸೂಚಿಸಿದರು.
Related Articles
Advertisement
ಜೆಎಸ್‌ಎಸ್ ಜಂಕ್ಷನ್ ರಾಜಕಾಲುವೆ ಪರಿಶೀಲನೆ: ಜೆಎಸ್‌ಎಸ್ ಜಂಕ್ಷನ್ ರಾಜಕಾಲುವೆ ಯಲ್ಲಿ ಮಳೆಯ ಅವಧಿಯಲ್ಲಿ ಹೆಚ್ಚು ನೀರು ರಭಸವಾಗಿ ಒಮ್ಮೆಲೆ ಹರಿಯುವುದರಿಂದ ರಸ್ತೆ ಮೇಲೆ ಹಾಗೂ ಅಕ್ಕ ಪಕ್ಕದ ಬಡವಾಣೆ ನೀರಿನಿಂದ ಅವೃತ್ತವಾಗಲಿದೆ. ಪಕ್ಕದವರೇ ಎಸ್.ಟಿ.ಪಿ ಘಟಕವಿದ್ದರೂ ಸಹ ಪ್ರಯೋಜನ ವಾಗುತ್ತಿಲ್ಲ, ಅದ್ದರಿಂದ ಪಕ್ಕದ ತಡೆಗೊಡೆ ಹೆಚ್ಚಿಸಲು ಕ್ರಮ ಹಾಗೂ ಸಂಬಂದಿಸಿದ ಬಡಾವಣೆಯಲ್ಲಿ ಎಸ್.ಟಿ.ಪಿ ಘಟಕಗಳ ಸೂಕ್ತ ನಿರ್ವಹಣೆ ಹಾಗೂ ಅನುಷ್ಠಾನಕ್ಕೆ ಒತ್ತು ನೀಡುವಂತೆ ತಿಳಿಸಿದರು.
ಅಗರ ಕೆರೆ ಅಭಿವೃದ್ಧಿ ಕಾಮಗಾರಿಗೆ ಸೂಚನೆ: ಅಗರ ಕೆರೆ ಯನ್ನು ವೀಕ್ಷಿಸಿ ಸದರಿ ಕೆರೆ ಅಭಿವೃದ್ಧಿ ಪಡಿಸಲು 5 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದ್ದು, ಸದರಿ ಅಭಿವೃದ್ಧಿಯ ಕಾಮಗಾರಿಯನ್ನು ಕೂಎಲೇ ಪ್ರಾರಂಭಿಸುವಂತೆ ಸೂಚಿಸಿ ದರು. ಸಿಲ್ಕ್ ಬೋರ್ಡ್ ಜಂಕ್ಷನ್ – ಹೊಸರು ರಸ್ತೆಯ ಅಕ್ಸಫರ್ಡ್ ಕಾಲೇಜು ಮುಂಭಾಗದ ಹತ್ತಿರ ರಾಜಕಾಲುವೆ ಪರಿಶೀಲನೆ ನಡೆಸಿದರು. ಶಾಸಕ ಸತೀಶ್ ಮಾತನಾಡಿ, ಎಚ್.ಆರ್ ಎಸ್ ಬಡಾವಣೆಯ 5ನೇ ಮುಖ್ಯ ರಸ್ತೆ ಯಿಂದ 9ನೇ ಮುಖ್ಯ ರಸ್ತೆ ಯ ವರೆಗೆ ಮಳೆಗಾಲದಲ್ಲಿ ರಾಜಕಾಲುವೆ ಮತ್ತು ಮ್ಯಾನ್‌ಹೋಲ್ ಗಳಿಂದ ನೀರು ರಭಸವಾಗಿ ಹರಿದು ಬಡಾವಣೆಯಲ್ಲಿ ಭಾರಿ ಅನಾಹುತ ಸಂಭವಿಸುವುದು ವಾಡಿಕೆಯಾಗಿದೆ.
ಶಾಶ್ವತ ಪರಿಹಾರ ವಾಗಿ ಸಮಾನಾಂತರ ಕಿರುಕಾಲುವೆ ನಿರ್ಮಿಸುವುದು ಅವಶ್ಯಕ ಹಾಗೂ ಸದರಿ ಪ್ರದೇಶವು ತಗ್ಗಿನಿಂದ ಕೊಡಿರುವುದರಿಂದ ರಾಜಕಾಲುವೆಯ ಎತ್ತರವನ್ನು ನಿರ್ಮಿಸಿ ನೀರು ರಸ್ತೆಗೆ ಹೊರಬರದಂತೆ ತಡೆಗಟ್ಟಲು ಪರ್ಯಾಯ ಕಾಮಗಾರಿಯ ಯೋಜನೆ ಸಿದ್ದಪಡಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು. ಪಾಲಿಕೆಯ ಹಾಗೂ ಜಲಮಂಡಳಿಯ ಹಿರಿಯ ಅಧಿಕಾರಿಗಳು ಪರಿಶೀಲನೆ ವೇಳೆ ಹಾಜರಿದ್ದರು.
ಅಭಿವೃದ್ಧಿ ಕಾರ್ಯಗಳ ವೀಕ್ಷಣೆ-
ಮಡಿವಾಳ ಕೆರೆಯ ಹಿಂಭಾಗದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಸದರಿ ಕೆರೆಯ ಪಕ್ಕದಲ್ಲಿ ಬೃಹತ್ ರಾಜಕಾಲುವೆ ನಿರ್ಮಿಸಿರುವುದರಿಂದ, ರಾಜಕಾಲುವೆಯ ನೀರು ಕೆರೆಗೆ ಹರಿಯದೆ ಪ್ರತ್ಯೇಕವಾಗಿ ಹರಿಯುತ್ತಿದ್ದು, ಕರೆಯ ನೀರು ಮಲಿನಗೊಳ್ಳದೆ ಶುದ್ಧೀಕರಣವಾಗಿದೆ.
ಕೆರೆ ಏರಿ ಆಗಲದ ವಿಸ್ತೀರ್ಣ ಸಂಬಂಧ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಕೆರೆಯ ಹತ್ತಿರ ಎಸ್.ಟಿ.ಪಿ ಘಟಕ ಹೆಚ್ಚಿನ ಸಾಮಾರ್ಥ್ಯದೊಂದಿಗೆ ಜರೂರು ಸ್ಥಾಪಿಸಲು ಜಲಮಂಡಳಿಯು ಕ್ರಮವಹಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಕೋರಿದರು.