Advertisement

Supreme Court: ಯಾವ ಧರ್ಮವೂ ಮಾಲಿನ್ಯವನ್ನುಉತ್ತೇಜಿಸುವುದಿಲ್ಲ

11:58 PM Nov 11, 2024 | Team Udayavani |

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿ ಮೀರುತ್ತಿರುವ ವಾಯುಮಾಲಿನ್ಯದಿಂದ ಕೆಂಡಾಮಂಡಲವಾಗಿರುವ ಸುಪ್ರೀಂ ಕೋರ್ಟ್‌, ಪಟಾಕಿ ಸಿಡಿಸುವಿಕೆಯನ್ನು ನಿಯಂತ್ರಿಸುವಲ್ಲಿ ವಿಫ‌ಲವಾದ ದೆಹಲಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

Advertisement

“ಯಾವ ಧರ್ಮವೂ ಮಾಲಿನ್ಯವನ್ನು ಉತ್ತೇಜಿಸುವುದಿಲ್ಲ. ಇದೇ ರೀತಿ ಪಟಾಕಿ ಸಿಡಿಸುವುದನ್ನು ಮುಂದುವರಿಸಿದರೆ, ಅದು ನಾಗರಿಕರ ಮೂಲಭೂತ ಆರೋಗ್ಯದ ಹಕ್ಕಿನ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದಿದೆ. ಜತೆಗೆ, ನಗರದಲ್ಲಿ ಪಟಾಕಿಗಳ ಮಾರಾಟ ಮತ್ತು ಸಿಡಿಸುವಿಕೆಯನ್ನು ನಿಲ್ಲಿಸಲು ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ನ್ಯಾ. ಅಭಯ್‌ ಎಸ್‌. ಓಕಾ ಮತ್ತು ನ್ಯಾ. ಅಗಸ್ಟಿನ್‌ ಜಾರ್ಜ್‌ ಮಾಸಿಹ್‌ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿದೆ. ಪಟಾಕಿ ನಿಷೇಧವನ್ನು ಸಮಗ್ರವಾಗಿ ಅನುಷ್ಠಾನ ಮಾಡುವಲ್ಲಿ ವಿಫ‌ಲವಾದ ಮತ್ತು ಕೇವಲ ಕಚ್ಚಾ ವಸ್ತುಗಳನ್ನಷ್ಟೇ ವಶಪಡಿಸಿಕೊಂಡಿರುವ ದೆಹಲಿ ಪೊಲೀಸರ ಕ್ರಮವನ್ನು ನ್ಯಾಯಾಲಯ “ಕಣ್ಣೊರೆಸುವ ತಂತ್ರ’ ಎಂದೂ ಬಣ್ಣಿಸಿದೆ.

ಸುಡುಮದ್ದುಗಳಿಂದಾಗಿ ದೆಹಲಿಯ ಪರಿಸರದಲ್ಲಿ ವಿಷಕಾರಿ ರಾಸಾಯನಿಕ ಕಣಗಳ ಹೊದಿಕೆ ಸೃಷ್ಟಿಯಾಗಿದ್ದು, ನಿವಾಸಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತಿವೆ. ಹೀಗಾಗಿ ದೆಹಲಿ ಸರ್ಕಾರವು ಪಟಾಕಿಗಳಿಗೆ ಶಾಶ್ವತವಾಗಿ ನಿಷೇಧ ಹೇರುವ ಬಗ್ಗೆ ಚಿಂತನೆ ನಡೆಸಬೇಕು ಎಂದೂ ನ್ಯಾಯಪೀಠ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next