Advertisement
ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಕವಿಪ್ರನಿ ನೌಕರರ ಸಂಘದ (659) ಆಶ್ರಯದಲ್ಲಿ ದಿ.ಕೆ. ಕಿಶೋರ್ ಕುಮಾರ್ ಅವರ ಸ್ಮರಣಾರ್ಥ ಚಿಕ್ಕಬಳ್ಳಾಪುರ ವಿಭಾಗ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನುಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸನಿರ್ವಹಿಸುವ ಸರ್ಕಾರಿ ನೌಕರರು ಹಾಗೂ ವಿದ್ಯುತ್‌ಸರಬರಾಜು ವಿಭಾಗಗಳಲ್ಲಿ ಕಾರ್ಯನಿರ್ವಹಿಸುವಅಧಿಕಾರಿಗಳು ಮತ್ತು ಸಿಬ್ಬಂದಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದರು.
Related Articles
Advertisement
ನಗರ ವ್ಯಾಪ್ತಿಯ ಮಾದನಹಳ್ಳಿ ಕೆರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪದವಿ ಪೂರ್ವ ಶಿಕ್ಷಣಇಲಾಖೆಯ ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ನಬಾರ್ಡ್ ಯೋಜನೆಯಲ್ಲಿ ಕೋಟಿ ರೂ.ವೆಚ್ಚದಲ್ಲಿ ನಾಲ್ಕು ದೊಡ್ಡ ಕೊಠಡಿಗಳು ಹಾಗೂ 8 ಶೌಚಾಲಯ, 5 ಲಕ್ಷ ವೆಚ್ಚದ ಕೊಳವೆಬಾವಿಯೂಒಳಗೊಂಡಿದ್ದು, ಮುಂಬರುವ ಶೈಕ್ಷಣಿಕ ವರ್ಷಮೇ-ಜೂನ್‌ನಲ್ಲಿ ತರಗತಿಗಳು ಹೊಸ ಕೊಠಡಿಯಲ್ಲಿ ಪ್ರಾರಂಭವಾಗಲು ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸಿ ಎಂದು ತಿಳಿಸಿದರು.
ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಈ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷೆ ಗಾಯತ್ರಿ ಬಸವರಾಜ್, ಕಾಂಗ್ರೆಸ್ ಮುಖಂಡರಾದ ವೆಂಕಟರಮಣ, ಅಶ್ವತ್ಥಪ್ಪ ಸೇರಿದಂತೆಹಲವಾರು ಮುಖಂಡರು, ನಿವೃತ್ತ ಡಿಡಿಪಿಐ ಅಶ್ವತ್ಥರೆಡ್ಡಿ, ಜಿಪಂ ಅಭಿಯಂತರರು ಉಪಸ್ಥಿತರಿದ್ದರು.