Advertisement

ಸೌರ ವಿದ್ಯುತ್‌ ಲಾಭ ಪಡೆಯಿರಿ

12:08 PM Dec 10, 2019 | Suhan S |

ಬೀದರ: ಪರ್ಯಾಯ ವಿದ್ಯುತ್‌ ಸೋಲಾರ್‌ ಬೆಳಕಿನ ಲಾಭ ಪಡೆಯಬೇಕು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ವಿಠಲರೆಡ್ಡಿ ಎಡಮಲ್ಲೆ ಸಲಹೆ ನೀಡಿದರು.

Advertisement

ಪಟ್ಟಣದ ಡಿಸಿಸಿ ಬ್ಯಾಂಕ್‌ ಶಾಖೆಯಲ್ಲಿ ಭಾಲ್ಕಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಮನೆಯಲ್ಲಿಯೂ ಈಗ ವಿದ್ಯುತ್‌ ಬೆಳಕನ್ನು ಕಾಣಬಹುದು. ನೀರಿನ ಅಭಾವದಿಂದ ವಿದ್ಯುತ್‌ ಪೂರೈಕೆ ಕಡಿಮೆಯಾದಾಗ ಸೋಲಾರ್‌ನ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಸೋಲಾರ್‌ ಹೆಚ್ಚು ಮಹತ್ವ ಪಡೆಯಲಿದೆ. ಸೋಲಾರ್‌ನಿಂದ ರೊಟ್ಟಿ ಮಾಡುವ ಯಂತ್ರ, ಹೊಲಿಗೆಯಂತ್ರ, ಫ್ಯಾನ್‌ಗಳು ಹೀಗೆ ಮಾನವನ ಮೂಲಭೂತ ಸೌಕರ್ಯಗಳು ಕಾರ್ಯ ನಿರ್ವಹಿಸಲು ಸಹಕರಿಯಾಗುತ್ತದೆ. ಸೋಲಾರ್‌ನ ವ್ಯವಸ್ಥೆಗೆ ಬ್ಯಾಂಕಿನಿಂದ ಬೇಕಾದ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಮಾತನಾಡಿ, ಸೋಲಾರ್‌ ಸಿಸ್ಟ್‌ಂಗೆ ಒಂದು ಬಾರಿ ಹೂಡಿಕೆ ಮಾಡಿದರೆ ಸುಮಾರು 20-25 ವರ್ಷಗಳ ಕಾಲ ಕಾರ್ಯ ನಿರ್ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಬೆಳಕಿನ ಅವಶ್ಯಕತೆ ಬಹಳಯಿದೆ. ಬೆಳಕಿನ ಜೊತೆಗೆ ದಿನಬಳಕೆಗೆ ಬೇಕಾಗುವ ವಿದ್ಯುತ್‌ ಕೂಡ ದೊರಯುತ್ತದೆ. ಸೋಲಾರ್‌ ಕುರಿತು ಮಾಹಿತಿ ಕೊಡುವ ಬಗ್ಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಿದ್ದು, ಇದರ ಉಪಯೋಗ ಪಡೆದುಕೊಂಡು ಹೆಚ್ಚಿನ ರೀತಿಯಲ್ಲಿ ಅದರ ಪ್ರಯೋಜನ ಪಡೆಯಬೇಕು. ಗ್ರಾಮೀಣ ಭಾಗದಲ್ಲಿಯೂ ಸಹ ಇದರ ಉಪಯೋಗ ಮಾಡಿಕೊಳ್ಳಲು ಮುಂದಾಗಬೇಕು ಎಂದರು.

ಟ್ರಸ್ಟ್‌ ವ್ಯವಸ್ಥಾಪಕ ಮನೋಹರ ಕಟಗೇರಿ, ಸಹಾರ್ದ ಉಪನ್ಯಾಸಕ ಎಸ್‌.ಜಿ. ಪಾಟೀಲ ಮತ್ತು ಸೆಲ್ಕೋ ಕಂಪನಿ ವ್ಯವಸ್ಥಾಪಕ ರಘುನಾಥ ಮೂಲಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಅನೀಲಕುಮಾರ ಪಾಟೀಲ, ಶಾಖಾ ವ್ಯವಸ್ಥಾಪಕ ದೀಪಕ ಮೂಲಗೆ, ತಾಲೂಕ ಅಭಿವೃದ್ಧಿ ಅಧಿ ಕಾರಿ ಕರಿಬಸಯ್ಯ ಸ್ವಾಮಿ ಸೇರಿದಂತೆ ಪಿಕೆಪಿಎಸ್‌ ಅಧ್ಯಕ್ಷರು ಮತ್ತು ಸಿಇಒಗಳು ಭಾಗವಹಿಸಿದ್ದರು. ರೇಖಾ ಗಾಯಕವಾಡ ನಿರೂಪಿಸಿದರು.

Advertisement

ಯೂನಿಯನ್‌ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಎಚ್‌.ಆರ್‌. ಮಲ್ಲಮ್ಮ ವಂದಿಸಿದರು. ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್‌, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌, ಭಾರತೀಯ ವಿಕಾಸ ಟ್ರಸ್ಟ್‌ ಮಣಿಪಾಲ್‌ ಮತ್ತು ಸೆಲ್ಕೋ ಫೌಂಡೇಶನ್‌ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next