Advertisement

ರಜೆಯಲ್ಲಿ ಕ್ರಿಯಾಶೀಲ ಚಟುವಟಿಕೆ ಕೈಗೊಳ್ಳಿ 

05:45 PM May 18, 2018 | |

ರಾಮದುರ್ಗ: ಮಕ್ಕಳು ರಜಾ ಅವ ಧಿಯನ್ನು ಸಂತಸ ಭರಿತವಾಗಿ ಕಳೆಯಲು ಚಿತ್ರಕಲೆ, ಸಂಗೀತ, ಸಾಹಿತ್ಯ, ಕಥೆ ನಾಟಕಗಳಂತಹ ಸೃಜನಶೀಲ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುವುದರಿಂದ ಅವರ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮಗೊಳ್ಳಲಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಪಾಂಡುರಂಗ ಜಟಗನ್ನವರ ಹೇಳಿದರು.

Advertisement

ತಾಲೂಕಿನ ಸಾಲಾಪುರ ಗ್ರಾಮದಲ್ಲಿ ನಾಟ್ಯ ಯೋಗ ಟ್ರಸ್ಟ್‌ ವತಿಯಿಂದ ಒಂದು ತಿಂಗಳ ಕಾಲ ನಡೆದ ಚಿಣ್ಣರ ಚಿಲುಮೆ ಮಕ್ಕಳ ಸಾಂಸ್ಕೃತಿಕ ಶಿಬಿರದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳ ಶಿಕ್ಷಣ ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯದೇ, ಸುತ್ತಲಿನ ಪರಿಸರದಲ್ಲಿಯೂ ಸಾಕಷ್ಟು
ಕಲಿಕೆ ಯಾಗುತ್ತದೆ ಎಂಬುದನ್ನು ಪಾಲಕರು ಅರಿಯಬೇಕಿದೆ ಎಂದರು. ಮಕ್ಕಳಲ್ಲಿರುವ ಪ್ರತಿಭೆಗೆ
ಸೂಕ್ತ ವೇದಿಕೆ ಕಲ್ಪಿಸುವುದರ ಮೂಲಕ ಪ್ರತಿಭೆ ಹೊರ ಹೊಮ್ಮುವಂತೆ ಮಾಡಲು ಶಾಲಾ ಶಿಕ್ಷಣದಲ್ಲಿಯೂ ಪ್ರತಿಭಾ ಕಾರಂಜಿ ಕ್ರೀಡಾ ಚಟುವಟಿಕೆಗಳು ಹಾಗೂ ಅವುಗಳಿಗೆ ಪೂರಕ ತಯಾರಿ ನೀಡಲು ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕಾಧ್ಯಕ್ಷ ಕೆ.ಎನ್‌. ಯಡ್ರಾವಿ ಮಾತನಾಡಿ, ಮಕ್ಕಳು ನಾಟಕಗಳಲ್ಲಿ ಅಭಿನಯಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅಭಿನಯ ಅನುಕರಣೆ ಧ್ವನಿ ಏರಿಳಿತ ಮುಂತಾದವು ಶಿಕ್ಷಣಕ್ಕೆ ಪೂರಕವಾದ ಅಂಶಗಳೇ ಆಗಿರುತ್ತವೆ ಎಂದು ಹೇಳಿದರು.

ಶಿಬಿರದ ನಿರ್ದೇಶಕ ರಂಗಕರ್ಮಿ ಕಲ್ಲಪ್ಪ ಪೂಜಾರ, ಮಹಿಬೂಬ್‌ ಬಾಗವಾನ ಶಿಬಿರಾರ್ಥಿಗಳಾದ ಭಾಗ್ಯ ಸಂಸ್ಥೆಯ ಲಕ್ಷ್ಮೀ ದೇವರೆಡ್ಡಿ, ಪ್ರದೀಪ್‌ ಕಂಬಾರ ಮಾತನಾಡಿದರು. ಶಿಬಿರಾರ್ಥಿಗಳು ನಾಟಕ ಪ್ರದರ್ಶನ ನೀಡಿದರು. ವೇದಿಕೆಯ ಮೇಲೆ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಾ ಹಂಪಿಹೊಳಿ, ಎ.ಎಸ್‌. ಗಾಣಗಿ, ಎಫ್‌.ಬಿ ಅರಳಿಮಟ್ಟಿ, ಸಂತೋಷ ಕೋಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಚೇತನ್‌ ಪೂಜಾರ ಸ್ವಾಗತಿಸಿದರು. ಕೆ.ಟಿ. ಜಾಡರ ನಿರೂಪಿಸಿದರು. ವಿಠ್ಠಲ್  ಕಟಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next