Advertisement

ಯುವ ಮತದಾರರ ನೋಂದಣಿಗೆ ಕ್ರಮ ಕೈಗೊಳ್ಳಿ

09:51 AM Dec 04, 2020 | Suhan S |

ದೇವನಹಳ್ಳಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಯುವಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡಿಸುವ ಸಂಬಂಧ ಜ.1,2021ಕ್ಕೆ 18 ವರ್ಷ ತುಂಬುವಯುವ ಮತದಾರರ ನೋಂದಣಿಗೆ ಅಗತ್ಯ ಕ್ರಮ ವಹಿಸಿ ಎಂದು ಸಕಾಲ ಮಿಷನ್‌ನ ಅಪರ ನಿರ್ದೇಶಕರು ಹಾಗೂ ಗ್ರಾಮಾಂತರ ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕರಾದ ಡಾ.ಬಿ.ಆರ್‌. ಮಮತಾ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಮಾಂತರ ಜಿಲ್ಲೆಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2021ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಸುವಿಕೆ ಹಾಗೂ ಸಂಬಂಧಿತ ಕಾರ್ಯಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

18 ವರ್ಷ ಪೂರೈಸಿರುವ ಯುವ ಮತದಾರರ ನೋಂದಣಿ ನಮ್ಮ ಗುರಿಯಾಗಿದ್ದು, ಕಾಲೇಜಿನ ಪ್ರಾಂಶುಪಾಲರೊಂದಿಗೆ ಮಾತನಾಡಿ,ಹೊಸದಾಗಿ ಮತದಾರರ ಪಟ್ಟಿಗೆ ಸೇರಬೇಕಿರುವ ಪಿಯುಸಿ ದ್ವಿತೀಯ ವರ್ಷ ಹಾಗೂ ಪದವಿ ಪ್ರಥಮ ವರ್ಷ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ನೋಂದಣಿ ಮಾಡಿಸಲು ನಮೂನೆ-6ರಅರ್ಜಿಯನ್ನು ಭರ್ತಿ ಮಾಡಿ, ಸಲ್ಲಿಸಬೇಕು. ಮತದಾರರ ಪಟ್ಟಿಗೆ ಹೊಸದಾಗಿ ಸೇರಿಸುವ ಹಾಗೂ ಹೆಸರು ತೆಗೆದು ಹಾಕಬೇಕಿರುವುದರ ಎಚ್ಚರಿಕೆ ವಹಿಸಿ ಕಾರ್ಯವಹಿಸಿ ಎಂದರು.

ನೆಲಮಂಗಲ ತಾಲೂಕಿನಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ, ಮತದಾರರ ಪಟ್ಟಿಯಲ್ಲಿ ಹೆಸರುನೋಂದಾಯಿಸಲು ಸಲ್ಲಿಸುವ ಅರ್ಜಿಗಳನ್ನುಸರಿಯಾಗಿ ಪರಿಶೀಲಿಸಿ, ನೋಂದಣಿಮಾಡಿಕೊಳ್ಳುವಂತೆ ತಿಳಿಸಿದರಲ್ಲದೆ, ಕೋವಿಡ್‌ -19 ಹಿನ್ನೆಲೆ ವಲಸೆ ಹೋಗುವವರು ಹೆಚ್ಚಾಗಿರುವ ಕಾರಣ ಸೂಕ್ತ ಪರಿಶೀಲನೆಯೊಂದಿಗೆ ಮತದಾರರನೋಂದಣಿಗೆಕ್ರಮವಹಿಸಬೇಕು.ಕೋವಿಡ್‌-19 ಕಾರಣದಿಂದಾಗಿ ಮತದಾರರ ನೋಂದಣಿ ಬಗ್ಗೆ ಹೆಚ್ಚಿನ ಪ್ರಚಾರ ನಡೆಸಲು ಸಾಧ್ಯವಾಗದಿರುವ ಕಾರಣ ಜಿಲ್ಲೆಗೆ ಒಬ್ಬರು ಯುವ ಐಕಾನ್‌ ಆಯ್ಕೆ ಮಾಡಿ ಯುವ ಜನರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಪ್ರೇರಿತರಾಗುವಂತೆ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಪಂ ಸಿಇಒ ಎನ್‌.ಎಂ.ನಾಗರಾಜ ಮಾತನಾಡಿ, ಡಿ.7 ರಿಂದ ಮತದಾರರ ನೋಂದಣಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚುನಾವಣಾ ಆಯೋಗಸೂಚಿಸಿದ್ದು, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ರಸಪ್ರಶ್ನೆ ಸ್ಪರ್ಧೆ ಇನ್ನಿತರ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.

Advertisement

ಅಪರ ಜಿಲ್ಲಾಧಿಕಾರಿ ಜಗದೀಶ್‌.ಕೆ.ನಾಯಕ್‌ ಮಾತನಾಡಿ, ಮನೆ-ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿದ್ದು, ಸೇವಾಸಿಂಧೂ ಕೇಂದ್ರಗಳ ಮೂಲಕ ಮತದಾರರ ನೋಂದಣಿಗೆ ಅರ್ಜಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ನಿರ್ದೇಶಕಿಸುಮಾ,ವಾರ್ತಾಮತ್ತುಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಎನ್‌.ಎಸ್‌. ಮಹೇಶ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಮಾರೇಗೌಡ ಸೇರಿದಂತೆ ಜಿಲ್ಲೆಯ ತಹಶೀಲ್ದಾರ್‌ಗಳು, ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು, ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

ಮೊಬೈಲ್‌ ಮೂಲಕ ಅರಿವು :

ಜಿಲ್ಲಾದ್ಯಂತ ಮತದಾರರ ಮಿಂಚಿನ ನೋಂದಣಿಯನ್ನು ಪರಿಣಾಮಕಾರಿಯಾಗಿಅಧಿಕಾರಿಗಳು ನಡೆಸಬೇಕು. ಕೋವಿಡ್‌-19 ಕಾರಣದಿಂದ ಹೊರಾಂಗಣ ಕಾರ್ಯಕ್ರಮ ನಡೆಸಲಾಗಿಲ್ಲವಾದರೂ, ಮೊಬೈಲ್‌ ಬಳಸಿ, ಸಾಮಾಜಿಕ ಮಾಧ್ಯಮಗಳ ಮೂಲಕ ಮತದಾರರ ನೋಂದಣಿ ಕುರಿತು ಅರಿವು ಮೂಡಿಸಲಾಗುವುದು ಎಂದು ಜಿಲ್ಲಾಧಿಕಾರಿಪಿ.ಎನ್‌.ರವೀಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next