Advertisement

ಕೋವಿಡ್ 2ನೇ ಅಲೆ ತಡೆಗೆ ಕ್ರಮ ಕೈಗೊಳ್ಳಿ

03:55 PM Apr 24, 2021 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಮಹಾಮರಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಣಮಾಡಲು ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಪಶು ಸಂಗೋಪನೆ ಸಚಿವಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವಪ್ರಭು ಚವ್ಹಾಣ್‌ ಹೇಳಿದರು.ನಗರದ ಜಿಪಂ ಸಭಾಂಗಣದಲ್ಲಿ ಕೋವಿಡ್‌-19ನಿಯಂತ್ರಣ ಕುರಿತು ಜನಪ್ರತಿನಿ ಧಿಗಳು ಹಾಗೂಅ ಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ,ಜಿಲ್ಲೆಯ ಎಲ್ಲಾ ಚೆಕ್‌ ಪೋಸ್ಟ್‌ಗಳಲ್ಲಿ ಬಿಗಿಯಾದಬಂದೋಬಸ್ತ್ ಮಾಡುವಂತೆ ಸೂಚಿಸಿದರು.ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿಜಿಲ್ಲಾಡಳಿತ ತೆಗೆದುಕೊಳ್ಳಬಹುದಾದ ಕ್ರಮಗಳಿಗೆರಾಜ್ಯ ಸರ್ಕಾರದಿಂದ ಸಂಪೂರ್ಣ ಬೆಂಬಲನೀಡುವುದಾಗಿ ಹೇಳಿದರು.

Advertisement

ಈ ಸಂದರ್ಭದಲ್ಲಿಮಾತನಾಡಿದ ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾಆರ್‌. ಅವರು, 10 ಮಂದಿ ಕೋವಿಡ್‌ ಡಾಕ್ಟರ್ಹಾಗೂ 15 ಸ್ಟಾಪ್‌ ನರ್ಸ್‌ಗಳನ್ನು ಹೆಚ್ಚುವರಿಯಾಗಿನೀಡುವಂತೆ ಸಚಿವರ ಗಮನಕ್ಕೆ ತಂದರು.ಜಿಲ್ಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಲಸಿಕೆ ನೀಡುವಸಲುವಾಗಿ ಪಂಚಾಯತ ಮಟ್ಟದಲ್ಲಿ ಗ್ರಾಮಸಭೆನಡೆಸಿ, ಶೇ.100ರಷ್ಟು ವ್ಯಾಕ್ಸಿನ್‌ ನೀಡಲು ನಿರ್ಣಯಕೈಗೊಳ್ಳಲಾಗಿದೆ. ಶಿಕ್ಷಕ-ಶಿಕ್ಷಕಿಯರಿಗೆ ಹಾಗೂಇತರೆ ಬೇರೆ-ಬೇರೆ ಇಲಾಖೆಗೆ ಈ ಜವಾಬ್ದಾರಿನೀಡಲಾಗಿದೆ.

ಜನರನ್ನು ಕರೆದುಕೊಂಡು ಬಂದುವ್ಯಾಕ್ಸಿನ್‌ ನೀಡುವ ಕೆಲಸ ನಡೆಯುತ್ತಿದೆಂದುಜಿಲ್ಲಾಧಿ ಕಾರಿ ಮಾಹಿತಿ ನೀಡಿದರು.ಮಾಸ್ಕ್ ಇಲ್ಲದೆ ಓಡಾಟ ಮಾಡುವವರಿಗೆನಗರಾಭಿವೃದ್ಧಿ ಇಲಾಖೆಯಿಂದ ಸುಮಾರು19,892 ಜನರಿಗೆ ದಂಡ ವಿ ಧಿಸಿ 22,50,336ಮೊತ್ತವನ್ನು ಸಂಗ್ರಹಿಸಲಾಗಿದೆ. ಪೊಲೀಸ್‌ಇಲಾಖೆಯಿಂದ 23,516 ಜನರಿಗೆ ದಂಡವಿ ಧಿಸಿ ಸುಮಾರು 25,25,600 ರೂ.ಗಳನ್ನುಸಂಗ್ರಹಿಸಲಾಗಿದೆ.

ಅಲ್ಲದೆ ಗ್ರಾಮೀಣಾಭಿವೃದ್ಧಿಇಲಾಖೆಯಿಂದ 2,895 ಜನರಿಗೆ ದಂಡ ವಿ ಧಿಸಿಸುಮಾರು 2,89,500 ರೂ. ಸಂಗ್ರಹಿಸಲಾಗಿದೆ.ಒಟ್ಟಾರೆ ಜಿಲ್ಲೆಯಲ್ಲಿ 46,303 ಜನರಿಗೆ ದಂಡವಿ ಧಿಸಲಾಗಿದ್ದು, ಸುಮಾರು 50,65,436 ರೂ.ಮೊತ್ತವನ್ನು ಸಂಗ್ರಹಿಸಿ ಕೊರೊನಾ ಬಗ್ಗೆ ಜಾಗೃತಿಮೂಡಿಸಲಾಗುತ್ತಿದೆ ಎಂದು ಸಭೆಯ ಗಮನಕ್ಕೆತಂದರು.ಮಾರುಕಟ್ಟೆ ಸೇರಿದಂತೆ ಜನದಟ್ಟಣೆ ಇರುವಪ್ರದೇಶವನ್ನು ಬೇರೆಕಡೆ ಸ್ಥಳಾಂತರಿಸುವುದುಹಾಗೂ ಜನದಟ್ಟಣೆಯಿಂದ ಕೊಡಿರದಂತೆನೋಡಿಕೊಳ್ಳಬೇಕೆಂದು ಸಂಸದ ರಾಜಾ ಅಮರೇಶನಾಯಕ ಅ ಧಿಕಾರಿಗಳಿಗೆ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಶಿಲ್ಪಾಶರ್ಮಾ, ಜಿಲ್ಲೆಯಲ್ಲಿ ಇಲ್ಲಿಯವರೆಗೂ ಸುಮಾರುಒಂದು ಲಕ್ಷ ಜನರಿಗೆ ಕೆಲಸವನ್ನು ನೀಡಲಾಗಿದೆ.ಸುಮಾರು 16 ಸಾವಿರ ಎನ್‌ಎಮ್‌ಆರ್‌(ಕೂಲಿಕಾರರ ಹಾಜರಾತಿ) ಇದ್ದು, ಇನ್ನೂ 7ಗ್ರಾಪಂನಲ್ಲಿ ಎನ್‌ಎಮ್‌ಆರ್‌ ಜನರೇಟ್‌ ಆಗಿಲ್ಲ.ಈ ಬಗ್ಗೆ ಪಿಡಿಒಗಳ ಜೊತೆಯಲ್ಲಿ ಮಾತನಾಡಿದ್ದು,ಕೂಡಲೇ ಜನರೇಟ್‌ ಮಾಡುವುದಾಗಿಹೇಳಿರುತ್ತಾರೆ ಎಂದರು.ಯಾದಗಿರಿ ಮತಕ್ಷೇತ್ರ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಜಿಪಂ ಅಧ್ಯಕ್ಷ ಬಸನಗೌಡಪಾಟೀಲ್‌ ಯಡಿಯಾಪುರ, ನಗರಾಭಿವೃದ್ಧಿಪ್ರಾ ಧಿಕಾರದ ಅಧ್ಯಕ್ಷ ಬಸವರಾಜ ಎಸ್‌.ಚಂಡ್ರಿಕಿ, ನಗರಸಭೆ ಅಧ್ಯಕ್ಷ ವಿಲಾಸ್‌ ಪಾಟೀಲ್‌,ಹಿರಿಯ ಸಹಾಯಕ ಆಯುಕ್ತ ಶಂಕರಗೌಡಸೋಮನಾಳ, ಜಿಲ್ಲಾ ಪೊಲೀಸ್‌ವರಿಷ್ಠಾ ಧಿಕಾರಿ ಪ್ರಸನ್ನ ದೇಸಾಯಿ, ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿ ಕಾರಿಡಾ| ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕಬಸವರಾಜ ಹಿರೇಮಠ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next