Advertisement

ಕರ್ಫ್ಯೂ ಮೀರುವವರ ವಿರುದ್ಧ ಕ್ರಮ ಜರುಗಿಸಿ

05:59 PM Apr 01, 2020 | Team Udayavani |

ಹಗರಿಬೊಮ್ಮನಹಳ್ಳಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಜನಸಂದಣಿ ಸೇರುತ್ತಿರುವ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆ ಸ್ಥಗಿತಗೊಳಿಸಿ ತಳ್ಳುಬಂಡಿಗಳಲ್ಲಿ ಮಾರಾಟ ನಡೆಸಬೇಕು ಎಂದು ಶಾಸಕ ಎಸ್‌.ಭೀಮಾನಾಯ್ಕ ತಿಳಿಸಿದರು.

Advertisement

ಪಟ್ಟಣದ ಸರ್ಕ್ನೂಟ್‌ ಹೌಸ್‌ನಲ್ಲಿ ನಡೆದ 3 ತಾಲೂಕುಗಳ ಅಧಿಕಾರಿಗಳ ಸಭೆಯಲ್ಲಿ ಮಂಗಳವಾರ ಅವರು ಮಾತನಾಡಿದರು. ಪ್ರಮುಖವಾಗಿ ಕೊಟ್ಟೂರು, ಮರಿಯಮ್ಮನಹಳ್ಳಿ ಮತ್ತು ಪಟ್ಟಣದಲ್ಲಿ ಸಂಚಾರ ತಡೆಗೆ ಕಾನೂನು ಕ್ರಮ ಕೈಗೊಳ್ಳಬೇಕು. ಕೊರೊನಾ ತಡೆ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ತುರ್ತುಕ್ರಮ ಅನುಸರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ರಚನೆಯಾದ ಟಾಸ್ಕ್ಫೋರ್ಸ್‌ ಕಾರ್ಯನಿರ್ವಹಣೆ ವಿಫಲವಾಗುತ್ತಿದೆ. ಕೂಡಲೇ ಸರಿಪಡಿಸಿ ಎಂದು ಆದೇಶಿಸಿದರು. ಪಟ್ಟಣವೂ ಸೇರಿ 3 ತಾಲೂಕುಗಳಲ್ಲಿ ಚೆಕ್‌ ಪೋಸ್ಟ್‌ ನಿರ್ಮಿಸಿ ಸಂಚಾರ ತಡೆಗಟ್ಟಬೇಕು. ಅನಗತ್ಯವಾಗಿ ಮನೆಬಿಟ್ಟು ಹೊರಬರುವವರು ಎಷ್ಟೇ ದೊಡ್ಡವಾಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು. ಕೋವಿಡ್ 19  ಭೀತಿ ಹೆಚ್ಚುತ್ತಿರುವುದರಿಂದ ಯಾವ ಮುಲಾಜಿಲ್ಲದೆ ಕ್ರಮ ಜರುಗಿಸಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿದರು.

ಸಿಪಿಐ ರಾಜೇಶ್‌ ಪ್ರತಿಕ್ರಿಯಿಸಿ ಈಗಾಗಲೇ ಬೈಕ್‌ ಓಡಾಟಕ್ಕೆ ಬ್ರೇಕ್‌ ಹಾಕಲಾಗಿದೆ. ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.  ಕೋವಿಡ್ 19 ನೆಪದಲ್ಲಿ ಕಿರಾಣಿ ಅಂಗಡಿಯವರು ಆಹಾರ ಸಾಮಾಗ್ರಿಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್‌ ಆಶಪ್ಪ ಪೂಜಾರ್‌ ತಿಳಿಸಿದರು.

ಈಗಾಗಲೇ ಕಿರಾಣಿ ಅಂಗಡಿ ಮಾಲೀಕರಿಗೆ ಎಚ್ಚರಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು. 332 ನಿರಾಶ್ರಿತರಿಗೆ ಆಹಾರ ಪೂರೈಸುತ್ತಿರುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ| ದಿನೇಶ್‌ ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ| ಸುಲೋಚನಾ, ಕೊಟ್ಟೂರು ತಹಶೀಲ್ದಾರ್‌ ಅನಿಲ್‌ಕುಮಾರ್‌, ಜೆಸ್ಕಾಂ ಎಇಇ ತೇಜಾನಾಯ್ಕ, ಎಇಇ ಪ್ರಭಾಕರಶೆಟ್ಟಿ, ಕೊಟ್ಟೂರು ಸಿಪಿಐ ರವೀಂದ್ರ, ಪಟ್ಟಣ ಪಂಚಾಯಿತಿ ಮುಖ್ಯಾ ಧಿಕಾರಿ ಎಚ್‌. ಎಫ್‌. ಬಿದರಿ, ಪುರಸಭೆ ಮುಖ್ಯಾಧಿ ಕಾರಿ ಕೃಷ್ಣನಾಯ್ಕ, ಎಡಿಎಚ್‌ ಡಾ| ಪರಮೇಶ್ವರ, ಪಿಎಸ್‌ಐಗಳಾದ ವಿ.ಲಕ್ಷ್ಮಣ, ಸರಳಾ, ಶಿವಕುಮಾರ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next