ಕನಕಪುರ: ಕೆಲವು ಅಧಿಕಾರಿಗಳು, ದಲ್ಲಾಳಿಗಳು ಹಣ ಪಡೆದು ಕೆಲಸ ಮಾಡಿಕೊಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ತಾಲೂಕು ಕಚೇರಿ ಹಾಗೂ ಸರ್ವೆ ಇಲಾಖೆಗಳಲ್ಲಿ ಬಡ ರೈತರ ಕೆಲಸಗಳು ಆಗುತ್ತಿಲ್ಲ. ಹಣ ಪಡೆದು ಕೆಲಸ ಮಾಡಿಕೊಡುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಅಧ್ಯಕ್ಷ ಕೆ.ಧನಂಜಯ್ ತಹಶೀಲ್ದಾರ್ ಆನಂದಯ್ಯಗೆ ಮನವಿ ಮಾಡಿದರು.
ನಗರದಲ್ಲಿ ನಡೆದ ತಾಪಂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾ ಡಿ, ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುವ ಮಾಲೀಕರಿಗೆ ಹಣ ಸಂದಾಯ ವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಬೇಕು ಎಂದು ಸೂಚಿಸಿದರು.
ಆಂಗ್ಲ ಮಾಧ್ಯಮ ಜಾರಿಗೆ ವಿಳಂಬ: ಗ್ರಾಪಂ ಅಧ್ಯಕ್ಷ ಜಮೀರ್ ಖಾನ್ ಮಾತನಾಡಿ, ಪ್ರಾಥಮಿಕ ಹಂತದ ಶಾಲೆಯಲ್ಲಿ ಮಕ್ಕಳಿಗೆ ಆಂಗ್ಲ ಮಾಧ್ಯಮ ಜಾರಿಗೊಳಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ. ಆದರೂ ಸಹ ಸರ್ಕಾರಿ ಶಾಲೆಗಳಲ್ಲಿ ಇದನ್ನು ಜಾರಿಗೆ ತರು ವುದು ವಿಳಂಬವಾಗಿದೆ. ಖಾಸಗಿ ಶಾಲೆಗಳು ಪೋಷಕರಿಂದ ಹೆಚ್ಚು ಶುಲ್ಕ ಪಡೆಯುತ್ತಿವೆ. ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಖಾತೆ ಮಾಡಲು ಅಧಿಕಾರಿಗಳು ನಿರ್ಲಕ್ಷ್ಯ: ಗ್ರಾಪಂ ವ್ಯಾಪ್ತಿಯಲ್ಲಿ ಖಾತೆ ಮಾಡಲು ಪಂಚಾಯ್ತಿ ಅಧಿಕಾರಿಗಳು ನಿರ್ಲಕ್ಷ್ಯ ತೋರು ತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು.
ಈ ವೇಳೆ ಇಒ ಟಿ.ಎಸ್. ಶಿವರಾಮು ಮಾತನಾಡಿ, ಗ್ರಾಮಗಳ ವಿಸ್ತೀರ್ಣ ಶೇ.30 ರಿಂದ 70ಕ್ಕೆ ಏರಿದೆ. ಸಂಬಂಧಿಸಿದ ಆಧಿಕಾರಿ ಗಳು, ದಾಖಲೆಗಳನ್ನು ಕ್ರೋಢಿಕರಿಸಿ, 5 ಗ್ರಾಪಂ ಗಳಲ್ಲಿ ಜಾರಿಗೊಳಿಸುವ ಮೂಲಕ ಎಲ್ಲ ಪಂಚಾ ಯ್ತಿಗಳಿಗೂ ವಿಸ್ತರಿಸಲಾಗುವುದು ಎಂದರು.
ಪಿಂಚಣಿ ಅದಾಲತ್ ನಡೆಸಿ: ತಾಲೂಕಿನಲ್ಲಿ ಪಿಂಚಣಿ ಸೌಲಭ್ಯ ಕಲ್ಪಿಸಲು ತಾರತಮ್ಯ ಮಾಡಲಾಗುತ್ತಿದೆ. ಫಲಾನುಭವಿಗಳು ತಾಲೂಕು ಕಚೇರಿ ಹಾಗೂ ಅಂಚೆ ಕಚೇರಿಗೆ ಅಲೆದಾಡುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ನೀಡಲು ಗ್ರಾಪಂ ವ್ಯಾಪ್ತಿಯಲ್ಲಿ ಪಿಂಚಣಿ ಅದಾಲತ್ ನಡೆಸಬೇಕು. ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಪಂ ಉಪಾಧ್ಯಕ್ಷೆ ಸುಮಂಗಳ ಸುರೇಶ್, ಮಾಜಿ ಉಪಾಧ್ಯಕ್ಷ ರಾಜಶೇಖರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರವಿಕುಮಾರ್, ತಾಪಂ ಸದಸ್ಯ ಕೆ.ಎನ್.ರಾಮು, ಧನಂಜಯ್, ನಾಗಣ್ಣ ಹೊನ್ನಿಗನಹಳ್ಳಿ, ಚಂದ್ರಶೇಖರ್ ಇದ್ದರು.