Advertisement

ಸಮರೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಳ್ಳಿ

03:45 AM Jan 31, 2017 | Team Udayavani |

ಬೆಂಗಳೂರು: ಕೇಂದ್ರದ ಬರ ಪರಿಹಾರದ ಹಣಕ್ಕೆ ಕಾಯದೆ ರಾಜ್ಯ ಸರ್ಕಾರದ ಹಣದಿಂದ ಲೇ ಸಮರೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

Advertisement

15 ತಾಲೂಕುಗಳನ್ನು ಹೊರತುಪಡಿಸಿದರೆ ರಾಜ್ಯಾದ್ಯಂತ ಬರಗಾಲ ತಾಂಡವವಾಡುತ್ತಿದೆ. ಅಧಿಕಾರಿಗಳು ಬರ ಪರಿಹಾರ ಯೋಜನೆ ಕೈಗೆತ್ತಿ ಕೊಳ್ಳುವಲ್ಲಿ ಸರ್ಕಾರದ ನಿರೀಕ್ಷೆಯಂತೆ ಕಾರ್ಯನಿ ರ್ವಹಿಸುತ್ತಿಲ್ಲವೆಂದು ಅಧಿಕಾರಿ ಶಾಹಿಗಳ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಸಿಇಒಗಳೊಂದಿಗೆ ಬರ ಪರಿಹಾರ ಕುರಿತ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬರ ಪರಿಹಾರ ಯೋಜನೆಯಲ್ಲಿ ಸರ್ಕಾರದ ವೇಗಕ್ಕೆ ತಕ್ಕಂತೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಬೇಕು. ಬರ ಪರಿಹಾರ ಯೋಜನೆಯಲ್ಲಾಗುವ ಲೋಪ-ದೋಷಗಳಿಗೆ
ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರನ್ನು ಜವಾಬ್ದಾರಿಯನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಜತೆಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಹಾಲಿಗೆ ಪ್ರೋತ್ಸಾಹ ಧನ, ಉದ್ಯೋಗ ಖಾತರಿ ಯೋಜನೆಗೆ ಹೆಚ್ಚು ಒತ್ತು ನೀಡಿ. ಮುಂಗಾರು ಹಾಗೂ ಹಿಂಗಾರು
ಮಳೆ ವೈಫ‌ಲ್ಯದಿಂದ 25 ಸಾವಿರ ಕೋಟಿ ರೂ. ಬೆಳೆನಷ್ಟವುಂಟಾಗಿ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಸವಲತ್ತು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಎಂದು ನಿರ್ದೇಶನ ನೀಡಿದರು.

ಕೇಂದ್ರ ಸರ್ಕಾರಕ್ಕೆ 4702 ಕೋಟಿ ರೂ. ಪರಿಹಾರ ಕೋರಿದ್ದರೂ 1782 ಕೋಟಿ ರೂ. ನೀಡುವ ಭರವಸೆ ಮಾತ್ರ ದೊರೆತಿದೆ. ಆ ಹಣವೂ ಬಂದಿಲ್ಲ, ಅದು ಬಂದ ತಕ್ಷಣ ಬೆಳೆನಷ್ಟ ಅನುಭವಿಸಿದ ರೈತರ ಖಾತೆಗಳಿಗೆ ನೇರ ಜಮೆ ಮಾಡಲು ಸಜ್ಜಾಗಿ. ಆದರೆ, ಕೇಂದ್ರದ ನೆರವು ಪರಿಹಾರ ಕಾರ್ಯಗಳಿಗೆ ಬರುವುದಿಲ್ಲ. ಹೀಗಾಗಿ, ರಾಜ್ಯ  ರ್ಕಾರದಿಂದಲೇ ಪರಿಹಾರ ಕೈಗೊಳ್ಳಬೇಕು. ಈಗಾಗಲೇ ಜಿಲ್ಲಾವಾರು ಬಿಡುಗಡೆ ಮಾಡಿರುವ ಹಣ ವೆಚ್ಚ ಮಾಡಿ ಮತ್ತಷ್ಟು ಬೇಡಿಕೆಯಿದ್ದರೆ ಪ್ರಸ್ತಾವನೆ ಸಲ್ಲಿಸಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಖಾಸಗಿ ಬೋರ್‌ವೆಲ್‌ಗ‌ಳನ್ನು ವಶಕ್ಕೆ ಪಡೆದು ಅದರ ಮಾಲೀಕರಿಗೆ ಮಾಸಿಕ 16 ಸಾವಿರ ರೂ.ಕೊಡಲು ಡಿಸಿಗಳಿಗೆ ಅಧಿಕಾರ ನೀಡಲಾಗಿದೆ. ಖಾಸಗಿ ಬೋರ್‌ವೆಲ್‌ ಮಾಲೀಕರ ಜತೆ ಒಪ್ಪಂದ ಮಾಡಿಕೊಂಡು ಅಗತ್ಯವಿರುವ ಕಡೆ ನೀರು ಪೂರೈಸಿ, ಹೊಸದಾಗಿ ಬೋರ್‌ವೆಲ್‌ ಕೊರೆಯಲು ಕ್ರಮ ಕೈಗೊಳ್ಳಿ ಎಂದು
ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next