Advertisement

ಥಿಯೇಟರ್ ಗೆ ಬರಲು ಸಿದ್ದವಾದ ‘ತಾಜ್ ಮಹಲ್-2’

04:21 PM Aug 12, 2022 | Team Udayavani |

ತನ್ನ ಟ್ರೇಲರ್‌ ಮತ್ತು ಹಾಡುಗಳ ಮೂಲಕ ಒಂದಷ್ಟು ಸುದ್ದಿ ಮಾಡುತ್ತಿರುವ “ತಾಜ್‌ ಮಹಲ್‌-2′ ತೆರೆಗೆ ಬರಲು ಸಿದ್ಧವಾಗಿದೆ. ಇದೇ ಸೆ. 2ಕ್ಕೆ “ತಾಜ್‌ಮಹಲ್‌-2′ ಸಿನಿಮಾವನ್ನು ಥಿಯೇಟರ್‌ಗೆ ತರುವ ಯೋಚನೆ ಹಾಕಿಕೊಂಡಿರುವ ಚಿತ್ರತಂಡ, ಭರದಿಂದ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಸದ್ಯ “ತಾಜ್‌ಮಹಲ್‌-2′ ಸಿನಿಮಾದ ಪ್ರಚಾರದ ಸಲುವಾಗಿ ವಿಶೇಷ ಟ್ಯಾಬ್ಲೋ ಸಿದ್ಧಪಡಿಸಿರುವ ಚಿತ್ರತಂಡ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದೆ.

Advertisement

ಈ ಬಗ್ಗೆ ಮಾತನಾಡುವ ನಾಯಕ ನಟ ಕಂ ನಿರ್ದೇಶಕ ದೇವರಾಜ್‌ ಕುಮಾರ್‌, “ನಮ್ಮ ಸಿನಿಮಾದ ಹೆಸರೇ ಹೇಳುವಂತೆ, “ತಾಜ್‌ಮಹಲ್‌-2′ ಔಟ್‌ ಆ್ಯಂಡ್‌ ಔಟ್‌ ಲವ್‌ ಕಂ ಆ್ಯಕ್ಷನ್‌ ಕಥಾಹಂದರದ ಸಿನಿಮಾ. ನೈಜ ಘಟನೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇನ್ನು ಸಿನಿಮಾದಲ್ಲಿ ಹೀರೋ ಆಗಿರುವ ನನ್ನ ಲುಕ್‌ ಸಂಪೂರ್ಣ ಕೂಡ ವಿಭಿನ್ನವಾಗಿದೆ. ಕರ್ಲಿಹೇರ್‌ ಸ್ಟೈಲ್‌ನಲ್ಲಿ ಲವರ್‌ಬಾಯ್‌ ಆಗಿ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡಿದ್ದೇನೆ. ಈಗಾಗಲೇ ರಿಲೀಸ್‌ ಆಗಿರುವ “ತಾಜ್‌ಮಹಲ್‌-2′ ಸಿನಿಮಾದ ಪೋಸ್ಟರ್‌, ಟ್ರೇಲರ್‌, ಸಾಂಗ್ಸ್‌ನಲ್ಲಿ ನನ್ನ ಕ್ಯಾರೆಕ್ಟರ್‌ ಲುಕ್‌ ನೋಡಿದವರು, ನಾನು ನಿಜವಾಗಿಯೂ ಎದುರು

ಬಂದಾಗಲೂ, ಗುರುತಿಸಲಾಗದಂತಾಗಿದೆ. ಅಷ್ಟರ ಮಟ್ಟಿಗೆ ಸಿನಿಮಾದಲ್ಲಿ ನನ್ನ ಕ್ಯಾರೆಕ್ಟರ್‌ ಲುಕ್‌ ಆಡಿಯನ್ಸ್‌ಗೆ ರಿಜಿಸ್ಟರ್‌ ಆಗಿದೆ. ಈಗ ಇದನ್ನೇ ಸಿನಿಮಾದ ಪ್ರಚಾರದಲ್ಲೂ ಬಳಸಿಕೊಳ್ಳುವ ಯೋಚನೆ ಮಾಡಿದ್ದೇವೆ. ಟ್ಯಾಬ್ಲೋ ಜೊತೆಗೆ ನಮ್ಮ ಸಿನಿಮಾದ ಕಲಾವಿದರು ಕೂಡ ಜನರ ನಡುವೆ ಹೋಗಿ ಸಿನಿಮಾ ಪ್ರಚಾರ ಮಾಡುತ್ತಿದ್ದೇವೆ. ಇದೇ ವೇಳೆ ಸಿನಿಮಾದಲ್ಲಿ ಕಲಾವಿದರು ನಿರ್ವಹಿಸಿರುವ ಪಾತ್ರ ಪರಿಚಯ ಕೂಡ ಮಾಡಿಕೊಡಲಿದ್ದೇವೆ’ ಎನ್ನುತ್ತಾರೆ.

ಉತ್ತರ ಕರ್ನಾಟಕದ ಹಾವೇರಿ, ಗದಗ, ರಾಯಚೂರು, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ ಹೀಗೆ ಹಲವು ಜಿಲ್ಲೆಗಳಲ್ಲಿ “ತಾಜ್‌ಮಹಲ್‌-2′ ಟ್ಯಾಬ್ಲೋ ಸಂಚರಿಸಿದ್ದು, ಪ್ರೇಕ್ಷಕರ ಜೊತೆಗೆ ಸಿನಿಮಾದ ಕುರಿತು ಮಾತನಾಡಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಉಳಿದ ಇತರೆ ಎಲ್ಲ ಜಿಲ್ಲೆಗಳಿಗೂ ಟ್ಯಾಬ್ಲೋ ಮೂಲಕ ಭೇಟಿ ನೀಡಲಿದೆ ಎನ್ನುವುದು ಚಿತ್ರತಂಡದ ಮಾಹಿತಿ.

ಇನ್ನು “ಶ್ರೀಗಂಗಾಂಬಿಕೆ ಎಂಟರ್‌ಪ್ರೈಸಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ತಾಜ್‌ ಮಹಲ್‌-2′ ಸಿನಿಮಾದಲ್ಲಿ ದೇವರಾಜ್‌ ಕುಮಾರ್‌ಗೆ ಸಮೃದ್ಧಾ ಶುಕ್ಲಾ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ರಿತೇಶ್‌, ತಬಲ ನಾಣಿ, ವಿಕ್ಟರಿ ವಾಸು, ಕಾಕ್ರೋಚ್‌ ಸುಧಿ, ಜಿಮ್‌ ರವಿ ಮತ್ತಿತರರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next