Advertisement

ತಾಜ್‌ ರಕ್ಷಿಸಿ ಇಲ್ಲವೇ ಬೀಳಿಸಿ

06:00 AM Jul 12, 2018 | |

ನವದೆಹಲಿ: “ಒಂದೋ ತಾಜ್‌ಮಹಲ್‌ ಅನ್ನು ಮೂಲರೂಪಕ್ಕೆ ತನ್ನಿ, ಇಲ್ಲವೇ ಅದನ್ನು ಧ್ವಂಸ ಗೊಳಿಸಿ.’ ಹೀಗೆಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದ್ದು ಸುಪ್ರೀಂ ಕೋರ್ಟ್‌. ಪ್ರೇಮಸೌಧದ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ, ನಿಮ್ಮ ಆಲಸಿತನ ದಿಂದ ಸ್ಮಾರಕ ಹಾಳಾಗುತ್ತಿದೆ ಎಂದು ಕಿಡಿಕಾರಿತು.

Advertisement

ಆದೇಶದ ಹೊರತಾಗಿಯೂ ಉ.ಪ್ರದೇಶ ಸರ್ಕಾರ ಇನ್ನೂ ತಾಜ್‌ ರಕ್ಷಣೆ ಕುರಿತ ವಿಷನ್‌ ಡಾಕ್ಯುಮೆಂಟ್‌ ಸಲ್ಲಿಸಿಲ್ಲ. ನೀವು ಈಗಾಗಲೇ ನಿರ್ಧರಿಸಿದ್ದರೆ, ಅದನ್ನು ಮುಚ್ಚಿಬಿಡಿ ಅಥವಾ ನೆಲಕ್ಕುರುಳಿಸಿಬಿಡಿ ಎಂದೂ ನ್ಯಾ.ಮದನ್‌ ಬಿ ಲೋಕುರ್‌ ಮತ್ತು ದೀಪಕ್‌ ಗುಪ್ತಾ ಅವರಿದ್ದ ಪೀಠ ಹೇಳಿತು. ಜತೆಗೆ, ಟಿವಿ ಟವರ್‌ನಂತೆ ಕಾಣುವ ಐಫೆಲ್‌ ಟವರ್‌ ಅನ್ನು ನೋಡಲು 8 ಕೋಟಿ ಮಂದಿ ಹೋಗುತ್ತಾರೆ. ಆದರೆ, ಐಫೆಲ್‌ ಟವರ್‌ಗಿಂತಲೂ ಸುಂದರವಾಗಿರುವ ತಾಜ್‌, ದೇಶದ ವಿದೇಶಿ ವಿನಿಮಯ ಸಮಸ್ಯೆ ಯನ್ನೂ ನೀಗಿಸಬಲ್ಲದು. ಹಾಗಿದ್ದರೂ, ನಿಮ್ಮ ಸೋಮಾರಿತನದಿಂದ ದೇಶಕ್ಕೆ ಆಗುವಂಥ ನಷ್ಟವನ್ನು ನೀವು ಯೋಚಿಸಿ ದ್ದೀರಾ ಎಂದು ಖಡಕ್ಕಾಗಿ ಪ್ರಶ್ನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next