Advertisement

ತಾಜ್ ಮಹಲ್ ಭೂಮಿ ಮೂಲತಃ ಜೈಪುರ ರಾಜ ಕುಟುಂಬಕ್ಕೆ ಸೇರಿದ್ದು: ಬಿಜೆಪಿ ಸಂಸದೆ

06:56 PM May 11, 2022 | Team Udayavani |

ಜೈಪುರ: ತಾಜ್ ಮಹಲ್ ಮೂಲತಃ ಜೈಪುರ ರಾಜಮನೆತನಕ್ಕೆ ಸೇರಿದ್ದು, ಇದನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ಅವರು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ರಾಜಸ್ಥಾನದ ರಾಜಸಮಂದ್‌ನ ಬಿಜೆಪಿ ಸಂಸದೆ ದಿಯಾ ಕುಮಾರಿ ಬುಧವಾರ ಹೇಳಿದ್ದಾರೆ.

Advertisement

ಹಿಂದೂ ವಿಗ್ರಹಗಳ ಸಂಭವನೀಯ ಉಪಸ್ಥಿತಿಯನ್ನು ಪರಿಶೀಲಿಸಲು ತಾಜ್ ಮಹಲ್‌ನೊಳಗೆ 20 ಕೊಠಡಿಗಳನ್ನು ತೆರೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಗೆ ನಿರ್ದೇಶನ ನೀಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯ ಹಿನ್ನೆಲೆಯಲ್ಲಿ ದಿಯಾ ಕುಮಾರಿ ಈ ಹೇಳಿಕೆ ನೀಡಿದ್ದಾರೆ. ಅಯೋಧ್ಯೆ ಜಿಲ್ಲೆಯ ಬಿಜೆಪಿ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದರು.

ಹಿಂದಿನ ಜೈಪುರ ರಾಜಮನೆತನದ ಸದಸ್ಯೆಯಾಗಿರುವ ಕುಮಾರಿ, “ಜೈಪುರ್ ಕುಟುಂಬಕ್ಕೆ ಸೇರಿದ ಜಮೀನು ದಾಖಲೆಗಳು ನಮ್ಮ ಬಳಿ ಇದೆ ಎಂದು ಹೇಳಿದ್ದಾರೆ.

ತಾಜ್ ಮಹಲ್ ಇತಿಹಾಸದ ಬಗ್ಗೆ ಸತ್ಯಶೋಧನೆಯ ತನಿಖೆಯನ್ನು ಕೋರಿ ಅಯೋಧ್ಯೆಯ ಬಿಜೆಪಿ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಅವರು ಬೆಂಬಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next