Advertisement

Taj Mahal;ಗುಮ್ಮಟದಲ್ಲಿ ಸೋರಿಕೆ ಬಳಿಕ ಗೋಡೆ ಬಿರುಕು, ಹಲವೆಡೆ ಹಾನಿ

11:00 PM Sep 22, 2024 | Team Udayavani |

ಆಗ್ರಾ: ವಿಶ್ವವಿಖ್ಯಾತ ತಾಜ್‌ಮಹಲ್‌ ಕಟ್ಟಡದಲ್ಲಿ ನೆಲ, ಗೋಡೆಗಳು ಸೇರಿ ಮತ್ತಷ್ಟು ಭಾಗಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದು ವರದಿಯಾಗಿದೆ. ಕಳೆದ ವಾರ ಆಗ್ರಾದಲ್ಲಿ ಸುರಿದ ಮಳೆಯಿಂದ ತಾಜ್‌ಮಹಲ್‌ಗೆ ಹಾನಿಯಾಗಿದೆ ಎನ್ನಲಾಗಿದೆ. ಗುಮ್ಮಟದ ಸುತ್ತಲಿನ ಬಾಗಿಲುಗಳಲ್ಲಿ ಅರೇಬಿಕ್‌ ಭಾಷೆಯಲ್ಲಿ ಕೆತ್ತಲಾಗಿರುವ ಕುರಾನ್‌ನ ಕೆಲ ವಾಕ್ಯಗಳೂ ಅಳಿಸಿ ಹೋಗಿವೆ ಎಂದು ಟೂರಿಸ್ಟ್‌ ಗೈಡ್‌ ಫೆಡರೇಷನ್‌ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಕೀಲ್‌ ಹೇಳಿದ್ದಾರೆ.

Advertisement

ಮುಖ್ಯ ಸಮಾಧಿಯ ಭಾಗಗಳು, ಗೋಡೆಗಳಲ್ಲಿ ಬಿರುಕು ಮೂಡಿದೆ. ಗೊಮ್ಮಟದ ಅಮೃತಶಿಲೆಯ ಲ್ಲಿಯೂ ಬಿರುಕು ಇದೆ ಎಂದು ಟೂರಿಸ್ಟ್‌ ಗೈಡ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ನ ಅಧ್ಯಕ್ಷ ದೀಪಕ್‌ ದಾನ್‌ ಹೇಳಿದ್ದಾರೆ. ಸ್ಮಾರಕದಲ್ಲಿ ಯಾವುದೇ ರಚನಾತ್ಮಕ ದೋಷಗಳಿಲ್ಲ ಎಂದು ಯಾವ ಪರೀಕ್ಷೆಯ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಹೇಳುತ್ತಿದೆ? ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಪ್ರಾಚ್ಯ ವಸ್ತು ಇಲಾಖೆ ಬಿರುಕುಗಳಿಂದ ಅಪಾಯ ಉಂಟಾಗಲಾಗರದು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next