Advertisement

Taiwan V/s China: ತೈವಾನ್‌ ಸುತ್ತ ಸೇನೆ ನಿಯೋಜಿಸಿದ ಚೀನಾ !

08:42 PM Apr 08, 2023 | Team Udayavani |

ಬೀಜಿಂಗ್‌: ಚೀನಾದ ವಿರೋಧದ ನಡುವೆಯೂ ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತಿರುವ ತೈವಾನ್‌ಗೆ ಎಚ್ಚರಿಕೆ ನೀಡಲು ಚೀನಾ ತನ್ನ 8 ಯುದ್ಧನೌಕೆಗಳು ಹಾಗೂ 48 ಯುದ್ಧವಿಮಾನಗಳು, ಜೆಟ್‌ಗಳನ್ನು ತೈವಾನ್‌ ಸುತ್ತ ನಿಯೋಜಿಸಿದೆ. ಅಲ್ಲದೇ, ತೈವಾನ್‌ ಸುತ್ತಲಿನ ಪ್ರದೇಶದಲ್ಲೇ 3 ದಿನಗಳ ಮಿಲಿಟರಿ ತಾಲೀಮು ಆರಂಭಿಸಿರುವುದಾಗಿ ಹೇಳಿದೆ. ಇತ್ತೀಚೆಗಷ್ಟೇ ತೈವಾನ್‌ ಅಧ್ಯಕ್ಷೆ ಸೈ-ಇಂಗ್‌ ವೆನ್‌ ಅಮೆರಿಕದ ಲಾಸ್‌ ಏಂಜಲೀಸ್‌ಗೆ ಭೇಟಿ ನೀಡಿದ್ದರು. ಅಲ್ಲದೇ, ಅಮೆರಿಕ ಸಂಸತ್‌ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರೊಂದಿಗೆ ಮಾತುಕತೆ ನಡೆಸಿದರು. ಬೆನ್ನಲ್ಲೇ ಚೀನಾದ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಜೊತೆಗೆ ಬಹಳ ಕಾಲದಿಂದ ಈ ಎರಡು ದೇಶಗಳ ನಡುವೆ ಯುದ್ಧಭೀತಿಯುಂಟಾಗಿದ್ದು ಈಗ ಇನ್ನಷ್ಟು ತೀವ್ರಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next