Advertisement
ಏಷ್ಯನ್ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮನು, ತಮ್ಮ ಕೊನೆಯ ಎಸೆತದಲ್ಲಿ ಈ ದೂರವನ್ನು ದಾಖಲಿಸಿದರು. ಮನು ಅವರ ಆರಂಭಿಕ ಎಸೆತ 78.32 ಮೀ. ಆಗಿತ್ತು. ದ್ವಿತೀಯ ಎಸೆತ 76.80 ಮೀಟರ್‌ಗಳಿಗೆ ಕುಸಿಯಿತು. ಆದರೆ ಇಲ್ಲಿಂದ ಮುಂದೆ ಪ್ರಗತಿ ಕಾಣುತ್ತ ಹೋದರು. 3ನೇ ಎಸೆತದಲ್ಲಿ 80.59 ಮೀ., 5ನೇ ಎಸೆತದಲ್ಲಿ 81.52 ಮೀ. ದೂರ ದಾಖಲಿಸಿದರು.
ಆ್ಯತ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಬ್ರಾಂಝ್ ಮಟ್ಟದ ಕ್ರೀಡಾಕೂಟ ವಾಗಿದ್ದು, ಇಲ್ಲಿನ ಸಾಧನೆ ರ್‍ಯಾಂಕಿಂಗ್ ಅಂಕಗಳಿಗೆ ಅತ್ಯಂತ ಮಹತ್ವದ್ದಾಗಿದೆ.
Related Articles
ಡಿ.ಪಿ. ಮನು ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 6ನೇ ಸ್ಥಾನಿಯಾಗಿದ್ದರು. ಇನ್ನೂ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿಲ್ಲ. ಇಲ್ಲಿನ ಮಾನದಂಡ 85.50 ಮೀ. ಆಗಿದೆ. ನೀರಜ್ ಚೋಪ್ರಾ ಮತ್ತು ಕಿಶೋರ್ ಜೇನಾ ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಸಂಪಾದಿಸಿದ್ದಾರೆ.
Advertisement