ಶುಕ್ರವಾರದ ಪಂದ್ಯದಲ್ಲಿ ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಆ್ಯಂಗಸ್ 21-19, 21-18 ಅಂತರದಿಂದ ಭಾರತೀಯನ ಆಟವನ್ನು ಮುಗಿಸಿದರು. ಇದರೊಂದಿಗೆ ಇವರಿಬ್ಬರ ನಡುವಿನ 12 ಪಂದ್ಯಗಳಲ್ಲಿ 6-6 ಸಮಬಲದ ಫಲಿತಾಂಶ ದಾಖಲಾದಂತಾಯಿತು.
Advertisement
ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಎಚ್.ಎಸ್. ಪ್ರಣಯ್ ದ್ವಿತೀಯ ಗೇಮ್ ವೇಳೆ ಎಂದಿನ ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. ಮೊದಲ ಗೇಮ್‌ನಲ್ಲಷ್ಟೇ ತೀವ್ರ ಪೈಪೋಟಿ ಕಂಡುಬಂತು. 12-12, 19-19ರ ಸಮಬಲದ ಆಟ ದಾಖಲಾಯಿತು. ಅಂತಿಮ ಹಂತದಲ್ಲಿ ಆ್ಯಂಗಸ್ ಪ್ಯಾರಲಲ್ ಶಾಟ್ಸ್ ಮೂಲಕ ಗೇಮ್ ಪಾಯಿಂಟ್ ಸಂಪಾದಿಸುವಲ್ಲಿ ಯಶಸ್ವಿಯಾದರು.